Advertisement

ತ್ಯಾಜ್ಯ ನಿರ್ವಹಣೆಗೆ ಪ್ರತಿ ಗ್ರಾಪಂಗೆ ತಲಾ 20 ಲಕ್ಷ

07:07 AM May 30, 2020 | Lakshmi GovindaRaj |

ರಾಮನಗರ: ಜಿಲ್ಲೆಯ 127 ಗ್ರಾಪಂಗಳ ಪೈಕಿ 61 ಗ್ರಾಪಂಗಳ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆಗೆಂದು ಖರೀದಿಸಿರುವ ಆಟೋ ಟಿಪ್ಪರ್‌ಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಈಶ್ವರಪ್ಪ ಸಚಿವ ಲೋಕಾರ್ಪಣೆಗೊಳಿಸಿದರು.

Advertisement

ನಗರದ ಜಿಪಂ ಭವನದಲ್ಲಿ ನಡೆದ ಸರಳ  ಕಾರ್ಯಕ್ರಮದಲ್ಲಿ ಅವರು ಆಟೋ ರಿಕ್ಷಾಗಳ ಕೀಲಿ ಕೈ ಆಯಾ ಗ್ರಾಪಂಗಳ ಪಿಡಿಒಗಳಿಗೆ ವಿತರಿಸಿ, ನಂತರ ಜಿಪಂ ಭವನದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ  ಭಾಗವಹಿಸಿದ್ದರು. ಈ ವೇಳೆ ಮಾತನಾಡಿ, ಕೇಂದ್ರ ಸರ್ಕಾರ ಸ್ವತ್ಛ ಭಾರತ್‌ ಗ್ರಾಮೀಣ ಮಿಷನ್‌ ಯೋಜನೆ ಯಡಿ ಪ್ರತಿ ಗ್ರಾಪಂಗೆ ತ್ಯಾಜ್ಯ ನಿರ್ವಹಣೆ ಗೆಂದು ತಲಾ 20 ಲಕ್ಷ ರೂ. ಅನುದಾನ ಬಿಡು ಗಡೆ ಮಾಡಿದೆ.

ಜಿಲ್ಲೆಯ 127 ಗ್ರಾಪಂಗಳ  ಪೈಕಿ ಸದ್ಯ 61 ಗ್ರಾಪಂಗಳಲ್ಲಿ ಜಿಲ್ಲಾಡಳಿತ ಕಸ ವಿಲೇವಾರಿಗೆಂದು ಭೂಮಿ ಗುರುತಿಸಿ ನೀಡಿದೆ. ಹೀಗಾಗಿ ಈ ಗ್ರಾಪಂಗಳಿಗೆ ಆಟೋರಿಕ್ಷಾ ಟಿಪ್ಪರ್‌ ಖರೀದಿಸಲಾಗಿದೆ. ಉಳಿದ ಗ್ರಾಪಂ ವ್ಯಾಪ್ತಿಗೂ ಕಸ ವಿಲೇವಾರಿ ಭೂಮಿಯನ್ನು ಜಿಲ್ಲಾಡಳಿತ  ಗುರುತಿಸಲಿ. ಇದಕ್ಕೆ ಆಯಾ ಕ್ಷೇತ್ರಗಳ ಶಾಸಕರು ಸಹಕರಿಸ ಬೇಕು. ಪ್ರತಿ ಆಟೋ ಟಿಪ್ಪರ್‌ಗೆ 3.40 ಲಕ್ಷ ರೂ. ವೆಚ್ಚವಾಗಿದೆ ಎಂದರು.

ನರೇಗಾ ಸದ್ಬಳಕೆಯಲ್ಲಿ ರಾಜ್ಯ ಮುಂದು: ದೇಶದಲ್ಲಿ ನರೇಗಾ ಯೋಜನೆ ಬಳಕೆಯಲ್ಲಿ ಛತ್ತೀಸ್‌ಗಡ ಮೊದಲು, ಕರ್ನಾಟಕ ಎರಡ ನೇ ಸ್ಥಾನದಲ್ಲಿದೆ. ನರೇಗಾದಲ್ಲಿ ಕೆಲಸ ನಿರ್ವಹಿಸಲು ಗ್ರಾಮೀಣ ಭಾಗದ ಜನತೆ ಮುಂದೆ ಬರುತ್ತಿದ್ದಾರೆ.  2018-19ನೇ ಸಾಲಿ ನಿಂದ ನರೇಗಾ ಯೋಜನೆಯಡಿ ಮೆಟಿರಿ ಯಲ್‌ ಕಾಂಪೋನೆಂಟ್‌ ಹಣ ಬಿಡುಗಡೆ ಯಾಗಿಲ್ಲ ಎಂದು ಮಾಗಡಿ ಶಾಸಕ ಎ. ಮಂಜು ಮತ್ತು ಎಂ.ಎಲ್‌.ಸಿ ಎಸ್‌.ರವಿ  ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸಚಿವರು

60:40  ಅನುಪಾತ ಪಾಲಿಸದ ಕಾರಣ ಕೇಂದ್ರ ಸರ್ಕಾರ ಮೆಟಿರಿಯಲ್‌ ಕಾಂಪೋನೆಂಟ್‌ ಹಣ ಬಿಡುಗಡೆ ಮಾಡಿಲ್ಲ. ನರೇಗಾದ ಕೂಲಿ ಹಣ 1,830 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದರು. ಅರಣ್ಯ ಪ್ರದೇಶದ ಅಂಚಿನಲ್ಲಿರುವ ಗ್ರಾಮ ಗಳಲ್ಲಿ ಅರಣ್ಯ ತಡೆಗೋಡೆ ನಿರ್ಮಿಸಲು ನರೇಗಾ ಯೋಜನೆಯಡಿ ಅವಕಾಶ ಮಾಡಿ ಕೊಡಿ ಎಂದು ಎಂ.ಎಲ್‌.ಸಿ ಎಸ್‌.ರವಿ ಮಾಡಿದ ಮನವಿಗೆ ಸ್ಪಂದಿಸುವುದಾಗಿ ತಿಳಿಸಿದರು.

Advertisement

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾ ಯಣ ಮಾತನಾಡಿ, ರಾಜ್ಯದಲ್ಲಿ ರಾಮನ ಗರ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಪರಿವರ್ತಿಸಲು ತಾವು ಬದ್ಧ, ರಾಜೀವ್‌ ಗಾಂಧಿ  ವಿವಿ ಮತ್ತು ಆರೋಗ್ಯ ನಗರ, ಮಾವು ಸಂಸ್ಕರಣ ಘಟಕ, ರೇಷ್ಮೆ ಗೂಡು ಮಾರುಕಟ್ಟೆ, ಹೀಗೆ ಹತ್ತು ಹಲವು ಅಭಿವೃದ್ಧಿಗೆ ತಾವು ಬದ್ಧ ಎಂದರು.

ಮಾಗಡಿ ಶಾಸಕ ಎ.ಮಂಜು, ಎಂಎಲ್‌ಸಿ ಎಸ್‌.ರವಿ ಮಾತನಾಡಿದರು. ಜಿಪಂ ಸಿಇಒ ಇಕ್ರಂ  ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಪಂ ಅಧ್ಯಕ್ಷ ಎಚ್‌.ಬಸಪ್ಪ, ಉಪಾಧ್ಯಕ್ಷೆ ಉಷಾ, ಡೀಸಿ ಎಂ.ಎಸ್‌.ಅರ್ಚನಾ, ಉಪಕಾ ರ್ಯದರ್ಶಿ ಉಮೇಶ್‌, ಕೆಡಿಪಿ ಸದಸ್ಯ ಎಂ.ರುದ್ರೇಶ್‌ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next