Advertisement

ಬಡವರಿಗಾಗಿ 20 ಲಕ್ಷ ಗುಂಪು ಮನೆ

08:41 AM Jan 27, 2019 | |

ಹೊಸಕೋಟೆ: ರಾಜ್ಯದ ಬಡಜನರ ವಸತಿ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ದಿಂದ 20 ಲಕ್ಷ ಗುಂಪು ಮನೆಗಳನ್ನು ನಿರ್ಮಿಸಲಾಗುವುದು ಎಂದು ವಸತಿ ಸಚಿವ ಎನ್‌.ನಾಗರಾಜ್‌ ಹೇಳಿದರು.

Advertisement

ಪಟ್ಟಣದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ವನ್ನು ಮುಂದಿನ ಎರಡು ವರ್ಷಗಳ ಅವಧಿ ಯಲ್ಲಿ ಗುಡಿಸಲು ಮುಕ್ತಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಸಹಾಯಧನ ಬಾಕಿ ಶೀಘ್ರ ಬಿಡುಗಡೆ: ಸರಕಾರದ ವಸತಿ ಯೋಜನೆಗಳಿಗಾಗಿ ರೈತ ರಿಂದ ಸ್ವಾಧೀನಪಡಿಸಿಕೊಂಡಿರುವ ಜಮೀ ನುಗಳ ಬಗ್ಗೆ ಪರಿಹಾರವನ್ನು 2 ತಿಂಗ ಳೊಳಗಾಗಿ ಪಾವತಿಸಲಾಗುವುದು. ನೂತ ನ ತಂತ್ರಜ್ಞಾನ ಬಳಸಿ 500 ಗುಂಪು ಮನೆ ನಿರ್ಮಾಣ ಕಾಮ ಗಾರಿಗೆ ಮಾಸಾಂತ್ಯದಲ್ಲಿ ಶಂಕುಸ್ಥಾಪನೆ ನೆರ ವೇರಿಸಲಾಗುವುದು. ಇದುವರೆಗೂ ರಾಜ್ಯದಲ್ಲಿ ಮನೆ ನಿರ್ಮಿ ಸಿಕೊಂಡಿರುವವರಿಗೆ 1,600 ಕೋಟಿ ರೂ. ಸಹಾಯಧನ ಬಾಕಿ ಉಳಿದಿದ್ದು, ತಾಲೂಕಿ ನಲ್ಲಿ ಸಹ ಈ ಸಂಬಂಧ 325 ಫ‌ಲಾನುಭ ವಿಗಳಿದ್ದಾರೆ. ಶೀಘ್ರದಲ್ಲಿಯೇ ಹಣ ಬಿಡು ಗಡೆ ಮಾಡಲು ಮುಖ್ಯಮಂತ್ರಿಗಳು ಆದೇ ಶಿಸಿದ್ದಾರೆ ಎಂದು ಹೇಳಿದರು.

ಶಾಶ್ವತ ನೀರಾವರಿ ಅಗತ್ಯ: ಗ್ರಾಮಾಂತರ ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಸರಕಾರಗಳು ಗಮನ ಹರಿಸ ಬೇಕಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಂತರ್ಜಲ ಮಟ್ಟ ಸುಧಾ ರಣೆಗೆ ಕೆರೆಗಳಿಗೆ ನೀರು ಹರಿಸುವ ಯೋಜನೆ ಕೈಗೊಳ್ಳಬೇಕಾದದ್ದು ಅತ್ಯ ವಶ್ಯಕವಾಗಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಕಾಪಾಡಿಕೊಳ್ಳಲು ಸಲಹೆ: ದೇಶ ಸ್ವಾತಂತ್ರ್ಯ ಗಳಿಸಿ 70 ವರ್ಷಗಳಾ ಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್‍ಯಾಂಗದ ಸಮರ್ಪಕ ಕಾರ್ಯನಿರ್ವ ಹಣೆಗೆ ಅಗತ್ಯವಾದ ಸಂವಿಧಾನವನ್ನು ರಚಿ ಸುವಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಕೊಡು ಗೆ ಅಪಾರವಾದುದಾಗಿದೆ. ಉದ್ಯೋಗ ಸೃಷ್ಟಿ, ಶೈಕ್ಷಣಿಕ ಪ್ರಗತಿಗೆ ಪೂರಕ ಸೌಲಭ್ಯ, ಆರೋಗ್ಯ ಕ್ಷೇತ್ರದಲ್ಲಿ ಸಮರ್ಪಕ ವ್ಯವ ಸ್ಥೆಯ ಜತೆಗೆ ಗಾಂಧೀಜಿಯಂತಹ ಮಹಾ ನ್‌ ವ್ಯಕ್ತಿಗಳ ಪರಿಶ್ರಮದೊಂದಿಗೆ ಪಡೆದಿ ರುವ ಸ್ವಾತಂತ್ರ್ಯವನ್ನು ರಕ್ಷಿಸಿಕೊಂಡು ದೇಶದ ಐಕ್ಯತೆ, ಸಮಗ್ರತೆಯನ್ನು ಕಾಪಾಡ ಬೇಕಾದದ್ದು ಪ್ರತಿಯೊಬ್ಬ ಪ್ರಜೆಯ ಕರ್ತ ವ್ಯವಾಗಿದೆ ಎಂದು ಹೇಳಿದರು.

Advertisement

ತಹಶೀಲ್ದಾರ್‌ ಕೆ.ರಮೇಶ್‌ ಮಾತನಾಡಿ, ಸಂವಿಧಾನದಡಿ ಪ್ರಜೆಗಳಿಗೆ ನೀಡಿರುವ ಹಕ್ಕುಗಳನ್ನು ಸಮರ್ಥವಾಗಿ ಬಳಸಿ ಕೊಂಡು ಕರ್ತವ್ಯಗಳನ್ನು ಅಷ್ಟೇ ಸಮರ್ಪ ಕವಾಗಿ ನಿರ್ವಹಿಸಿದಲ್ಲಿ ಮಾತ್ರ ಸ್ವಾತಂತ್ರ್ಯ ಸಾರ್ಥಕವಾಗಲಿದೆ. ಇದರಿಂದ ಗಾಂಧೀಜಿ, ಡಾ.ಬಿ.ಆರ್‌.ಅಂಬೇಡ್ಕರ್‌ ಅರಂತಹ ಮಹಾನ್‌ ವ್ಯಕ್ತಿಗಳಿಗೆ ಗೌರವ ಸಲ್ಲಿಸಿದಂತಾ ಗಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಉತ್ತಮ ಕ್ರೀಡಾ ಸಾಧಕರನ್ನ್ನು ಸನ್ಮಾನಿಸಲಾಯಿತು. ಪಟ್ಟಣ ದ ವ್ಯಾಪ್ತಿಯ 18 ಶಾಲೆಗಳ ವಿದ್ಯಾರ್ಥಿ ಗಳು ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನಾಲ್ಕು ಶಾಲೆಗಳ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆದವು. ಪಟ್ಟಣದ ಎಸ್‌ಜೆಆರ್‌ಎಸ್‌ ಪ್ರೌಢಶಾಲೆ ಹಾಗೂ ಸರಕಾರಿ ಬಾಲಕಿಯರ ಪ್ರೌಢ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಭಕ್ತಿಯ ಗೌರವ ಸಲ್ಲಿಸಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ವಿ.ಸಿ.ಜಯದೇವಯ್ಯ, ನಗರಸಭೆ ಅಧ್ಯಕ್ಷ ಎನ್‌. ಟಿ.ಹೇಮಂತಕುಮಾರ್‌, ಕ್ಷೇತ್ರ ಶಿಕ್ಷ ಣಾಧಿಕಾರಿ ಎಸ್‌.ಎನ್‌.ಕನ್ನಯ್ಯ, ಗ್ರೇಡ್‌-2 ತಹಶೀಲ್ದಾರ್‌ ಚಂದ್ರಶೇಖರ್‌ ಸೇರಿ ದಂತೆ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಂಘ, ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಮುಂತಾ ದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next