Advertisement

20 ಲಕ್ಷ ಕೋಟಿ ಪ್ಯಾಕೇಜ್‌ ದಿಟ್ಟ ನಿರ್ಧಾರ

05:41 AM May 14, 2020 | Lakshmi GovindaRaj |

ದೊಡ್ಡಬಳ್ಳಾಪುರ:ಪ್ರಧಾನಿ ಮೋದಿಯ 20 ಲಕ್ಷ ಕೋಟಿ ಪ್ಯಾಕೇಜ್‌, ದೇಶದ ಇತಿಹಾಸದಲ್ಲಿಯೇ ಮಹತ್ವದ ನಿರ್ಧಾರವಾಗಿದೆ. ಅವರ ದಿಟ್ಟ ನಿರ್ಧಾರ ಹಾಗೂ ಆರ್ಥಿಕ ಸದೃಢತೆಗೆ ಯೋಜನೆ ರೂಪಿಸುತ್ತಿರುವ ಕಾರ್ಯವೈಖರಿ  ಭಿನಂದನೀಯ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು.

Advertisement

ನಗರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಬಿಜೆಪಿಯಿಂದ ನಡೆದ ಕಾರ್ಯಕ್ರಮದಲ್ಲಿ ದಿನಸಿ ಕಿಟ್‌ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ  ನಿರ್ಧಾರ ಸಮಯೋಚಿತವಾಗಿದ್ದು, ವಿರೋಧ ಪಕ್ಷದವರು ವಿನಾ ಕಾರಣ ಟೀಕಿಸುತ್ತಿದ್ದಾರೆ. ಬಡವರು, ಕೂಲಿ ಕಾರ್ಮಿಕರಿಗೆ 5 ಸಾವಿರ ಕಿಟ್‌ ವಿತರಿಸಲಾಗುತ್ತಿದೆ.

ಕೊರೊನಾ ವಿರುದದ ಕಾರ್ಯಾಚಾರಣೆಯಲ್ಲಿ ಎಲ್ಲರ ಸಹಕಾರ  ಅಗತ್ಯವಾಗಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಮಾತನಾಡಿ, ಪ್ರಧಾನಿ ಮೋದಿ ಪಂಚ ಸೂತ್ರಗಳನ್ನು ಎಲ್ಲರೂ ಪಾಲಿಸಬೇಕು. ಕೊರೊನೊ ತಡೆ ಮಾರ್ಗ ಸೂಚಿ ಎಲ್ಲರೂ ಪಾಲಿಸಬೇಕು ಎಂದರು. ಬಿಜೆಪಿ ಜಿಲ್ಲಾ  ಮಹಿಳಾ ಮೋರ್ಚಾ ಅಧ್ಯಕ್ಷೆ ಎಂ.ಕೆ. ವತ್ಸಲ ಮಾತನಾಡಿದರು. ಬಿ ಜೆಪಿ ತಾಲೂಕು ಅಧ್ಯಕ್ಷ ಟಿ.ಎನ್‌. ನಾಗರಾಜ್‌,

ನಗರ ಅಧ್ಯಕ್ಷ ಎಚ. ಎಸ್‌. ಶಿವಶಂಕರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಾ ಶಿವಶಂಕರ್‌, ಕಾರ್ಯದರ್ಶಿ ಗೋಪಿ,  ಶಿವಪ್ರಸಾದ್‌, ಮಂಜುನಾಥ್‌, ಮಾಜಿ ಜಿಲ್ಲಾಧ್ಯಕ್ಷ ಬಿ.ಸಿ.ನಾರಾಯಣ ಸ್ವಾಮಿ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಗಿರಿಜಾ, ನಗರಸಭೆ ಮಾಜಿ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ಹಿರಿಯ ಬಿಜೆಪಿ ಮುಖಂಡ ಮಹದೇವಯ್ಯ, ರಾಮು, ಅಶ್ವತ್ಥನಾರಾಯಣ್‌, ಕಾಂತರಾಜ್‌ ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಶಿವು ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next