Advertisement
ಕ್ಯಾಲಿಫೋರ್ನಿಯಾದ ಇತಿಹಾಸದಲ್ಲೇ ಭೀಕರ ಎನ್ನಬಹುದಾದ ಕಾಳ್ಗಿಚ್ಚಿನಲ್ಲಿ ಇದೂ ಒಂದಾಗಿದ್ದು, ಸ್ಯಾನ್‌ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶವನ್ನು ದಹಿ ಸಿದೆ. 14 ಸಾವಿರಕ್ಕೂ ಅಧಿಕ ಅಗ್ನಿಶಾಮಕ ಸಿಬಂದಿ ಬೆಂಕಿ ಆರಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಲಾಸ್ ಏಂಜಲೀಸ್‌ನ ಪೂರ್ವ ಭಾಗದ ನಗರದಲ್ಲಿ ಕಾಳ್ಗಿಚ್ಚು ಉಂಟಾಗಿ ಸಾವಿರಾರು ಎಕರೆ ಭೂಮಿ ನಾಶವಾಗಲು ಹಾಗೂ ನೂರಾರು ಮಂದಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಲು ಕಾರಣವಾದ ಸಾಧನದ ಬಗ್ಗೆ ತಿಳಿದರೆ ಎಲ್ಲರಿಗೂ ಅಚ್ಚರಿ ಆಗೇ ಆಗುತ್ತದೆ. ತಮಗೆ ಹುಟ್ಟಿರುವ ಮಗು ಗಂಡೋ, ಹೆಣ್ಣೋ ಎಂಬುದನ್ನು ಘೋಷಿಸಲೆಂದು ಇಲ್ಲಿನ ದಂಪತಿ ಬಳಸಿದ ಸಾಧನವೇ ಬೆಂಕಿಗೆ ಮೂಲ ಕಾರಣ. ಪರ್ವತಗಳಿಂದ ಸುತ್ತುವರಿದ ಒಣ ಹುಲ್ಲುಗಾವಲಿಗೆ ಸ್ನೇಹಿತರೊಂದಿಗೆ ಆಗಮಿಸಿದ ದಂಪತಿ ತಾವು ತಂದಿದ್ದ ಸಾಧನದ ಮೂಲಕ ಫೈರ್ ಮಾಡಿದ್ದಾರೆ. ಈ ಮೂಲಕ ಮಗುವಿನ ಲಿಂಗವನ್ನು ಘೋಷಿಸುವುದು ಅವರ ಉದ್ದೇಶವಾಗಿತ್ತು. ಆದರೆ, ಆ ಸಾಧನದಿಂದ ಹೊಮ್ಮಿದ ಕಿಡಿಯಿಂದಾಗಿ ಹುಲ್ಲುಗಾವಲಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿತು. ಕೂಡಲೇ ಅಲ್ಲಿದ್ದವರು ನೀರಿನ ಬಾಟಲಿಗಳ ಮೂಲಕ ಬೆಂಕಿ ಆರಿಸಲು ಯತ್ನಿಸಿದರಾದರೂ, ಬೆಂಕಿಯ ಕೆನ್ನಾಲಿಗೆ ವಿಸ್ತರಿಸುತ್ತಲೇ ಹೋಯಿತು ಎಂದು ಪೊಲೀಸರು ತಿಳಿಸಿದ್ದಾರೆ.