ಹೈದರಾಬಾದ್: ವಂಚಕರ ಗುಂಪೊಂದು ತಾಮ್ರದ ಚೊಂಬು ನೀಡಿ, ಉದ್ಯಮಿಯೊಬ್ಬರಿಗೆ ಬರೋಬ್ಬರಿ 20 ಕೋಟಿ ರೂ.ಗಳ ಪಂಗನಾಮ ಹಾಕಿದೆ. ಈ ಸಂಬಂಧ ತೆಲಂಗಾಣ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. “ತಾಮ್ರದ ಚೊಂಬನ್ನು ವಿದ್ಯುತ್‌ನೊಂದಿಗೆ ಸಂಪರ್ಕಿಸಿ, ಚೊಂಬಿನ ಸುತ್ತಲೂ ವಿದ್ಯುತ್ಕಾಂತಿಯನ್ನು ಸೃಷ್ಟಿಸಿದ್ದಾರೆ.
ಇದು ಅಕ್ಕಿ, ಧಾನ್ಯಗಳು ಸೇರಿದಂತೆ ವಸ್ತುಗಳನ್ನು ಆಕರ್ಷಿಸಿದೆ. ಇದೇ ಮ್ಯಾಜಿಕ್ ತಾಮ್ರದ ಚೊಂಬನ್ನು ಚಂದ್ರಯಾನ-3 ಯೋ ಜನೆಯಲ್ಲಿ ಬಳಸಲಾಗಿದೆ. ಈ ತಂತ್ರಜ್ಞಾನವನ್ನು ಮಾರಾಟ ಮಾಡಿದರೆ, ದೊಡ್ಡ ಮೊತ್ತವನ್ನು ಗಳಿಸಬಹುದು’ ಎಂದು ಉದ್ಯಮಿಯನ್ನು ವಂಚಕರು ನಂಬಿ ಸಿದ್ದಾರೆ. ಅಲ್ಲದೇ ಆತನಿಂದ 20 ಕೋಟಿ ರೂ.ಗಳನ್ನು ಪೀಕಿಸಿದ್ದಾರೆ. ಕೆಲವು ದಿನಗಳಲ್ಲಿ ಬಳಿಕ ತಾನು ಮೋಸ ಹೋಗಿರುವುದು ಉದ್ಯಮಿಗೆ ತಿಳಿದು ಬಂದಿದೆ. ಈ ಸಂಬಂಧ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.