Advertisement

ನೈಜಿರಿಯಾ ಪ್ರಜೆಗಳಿಗೆ 2 ವರ್ಷ ಜೈಲು

11:07 AM Aug 29, 2019 | Team Udayavani |

ರಾಯಚೂರು: ಪಾಸ್ ಪೋರ್ಟ್ ಹಾಗೂ ವೀಸಾ ಅವಧಿ ಮುಗಿದರೂ ಭಾರತದಲ್ಲಿದ್ದುಕೊಂಡು ಸ್ಥಳೀಯರಿಗೆ ವಂಚಿಸಿದ ಆರೋಪದ ಮೇಲೆ ನೈಜೀರಿಯಾದ ಇಬ್ಬರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರು. ದಂಡ ವಿಧಿಸಲಾಗಿದೆ.

Advertisement

ರಾಯಚೂರಿನ 1ನೇ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರು ವಿಚಾರಣೆ ನಡೆಸಿದ್ದು ತೀರ್ಪು ಪ್ರಕಟಿಸಿದ್ದಾರೆ. ನೈಜೀರಿಯಾದ ರೋಲಾಂಡ‌ ಅನೆಗ್ಬಿ ಹಾಗೂ ಯುರೋಜಿಬಿಯಾ ಜುಲೋಸ್ ಮೆಕ್ಯಾಲೋ ಎಂಬುವವರಿಗೆ ಶಿಕ್ಷೆಯಾಗಿದೆ.

ಆನ್ ಲೈನ್ ಎಲೆಕ್ಟ್ರಾನಿಕ್ಸ್ ಗೂಡ್ಸ ಕೊಡಿಸುವುದಾಗಿ ಜನರಿಗೆ ಮೋಸ ಮಾಡುತ್ತಿದ್ದರು. ಈ‌ ಕುರಿತು ರಾಯಚೂರು ನಗರ ಪಶ್ಚಿಮ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದಾರೆ ಎಂದು ಪಿಪಿ ಸುದರ್ಶನ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next