ಸಾರಿಗೆ ಇಲಾಖೆಯಲ್ಲಿ ಎರಡು ವರ್ಷಗಳಲ್ಲಿ ಪುತ್ತೂರು ಮತ್ತು ಸುಳ್ಯ ತಾಲೂಕಿಗೆ ಒಳಪಟ್ಟು 22 ಸಾವಿರಕ್ಕೂ ಹೆಚ್ಚು ವಾಹನ ನೋಂದಣಿ ಆಗಿದೆ. ಅಂದರೆ ತಿಂಗಳೊಂದಕ್ಕೆ ಸರಾಸರಿ 900ಕ್ಕೂ ಅಧಿಕ ವಾಹನಗಳು ಸೇರ್ಪಡೆಗೊಂಡಿವೆ.
Advertisement
ನೋಂದಣಿ ಏರಿಕೆ2017ರಿಂದ 2019ರ ತನಕ ಸುಳ್ಯ ಮತ್ತು ಪುತ್ತೂರು ತಾಲೂಕಿನಲ್ಲಿ ದ್ವಿಚಕ್ರ ಮತ್ತು ಎಲ್‌ಎಂವಿ ವಾಹನ ಸೇರಿ 1,25,712 ವಾಹನಗಳು ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್‌ಟಿಒ) ನೋಂದಣಿಗೊಂಡಿವೆ. ಎರಡು ವರ್ಷಗಳಲ್ಲಿ ಎರಡು ತಾಲೂಕುಗಳಲ್ಲಿ 18,628 ದ್ವಿಚಕ್ರ ವಾಹನ, 4,123 ಎಲ್‌ಎಂವಿ ಕಾರು ವಾಹನಗಳು ಹೊಸದಾಗಿ ಸೇರ್ಪಡೆಗೊಂಡಿವೆ. ಅಂದರೆ ಎರಡು ವಿಭಾಗದಲ್ಲಿ ಒಟ್ಟು 22,751 ಹೊಸ ವಾಹನಗಳು ನೋಂದಣಿಯಾಗಿವೆ.
ಕಳೆದ ಹತ್ತು ವರ್ಷಗಳಲ್ಲಿ ವಾಹನ ಖರೀದಿಸುವವರ ಪ್ರಮಾಣ ಶೇ. 85ರಷ್ಟು ಅಧಿಕವಾಗಿದೆ ಎನ್ನುತ್ತಿದೆ ಸಮೀಕ್ಷೆ. 2009-10ಕ್ಕೆ ಹೋಲಿಸಿದರೆ ವಾಹನ ಬಳಕೆ ಮಾಡುವವರ ಸಂಖ್ಯೆ ಮಧ್ಯ ಪ್ರಮಾಣದಲ್ಲಿತ್ತು.
Related Articles
Advertisement
ಯುವ ಸಮುದಾಯ ಅಧಿಕ!ವಾಹನ ಖರೀದಿಸುತ್ತಿರುವವರಲ್ಲಿ 18 ರಿಂದ 35ರ ವಯೋಮಾನದವರೆ ಹೆಚ್ಚು. ದ್ವಿಚಕ್ರ, ಕಾರು ಖರೀದಿ ಅಧಿಕ. ಇದನ್ನು ನೋಂದಣಿ ಅಂಕಿ-ಅಂಶ ಸ್ಪಷ್ಟಪಡಿಸುತ್ತದೆ. ವಾಹನ ಅಪಘಾತ ಪ್ರಕರಣದಲ್ಲಿ ಅತೀ ಹೆಚ್ಚು ಅವಘಡಗಳಿಗೆ ಪ್ರಾಣ ಹಾನಿ ಉಂಟಾದ ವರಲ್ಲಿ ಯುವ ಸಮುದಾ ಯದವರೇ ಜಾಸ್ತಿ. ಹೆಲ್ಮೆಟ್ ರಹಿತ, ಅತಿ ವೇಗ ಚಾಲನೆ ಕೂಡ ಇದಕ್ಕೆ ಕಾರಣ ಅನ್ನುತ್ತಿದೆ ಪೊಲೀಸ್ ಇಲಾಖೆ ವರದಿ. ಪರಿಸರ ಮಾಲಿನ್ಯ ತಡೆಗೆ ಕ್ರಮ
ಮೋಟಾರು ವಾಹನಗಳ ಬಳಕೆಯಿಂದಾಗುವ ವಾಯು ಮಾಲಿನ್ಯ ನಿಯಂತ್ರಿಸುವ ಸಲುವಾಗಿ ಬಿಎಸ್4ನಿಂದ ಮೇಲ್ಪಟ್ಟ ವಾಹನಗಳನ್ನು ಮಾತ್ರ ನೋಂದಣಿ ಮಾಡಬೇಕು ಎನ್ನುವ ನ್ಯಾಯಾಲಯದ ಆದೇಶ ಜಾರಿಯಲ್ಲಿದೆ. ಇದು ವಾಯುಮಾಲಿನ್ಯ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ಮುಂದೆ ಇನ್ನಷ್ಟು ಕಡಿಮೆ ಪ್ರಮಾಣದಲ್ಲಿ ಇಂಗಾಲಾಮ್ಲ ಹೊರ ಸೂಸಬಲ್ಲ ಬಿಎಸ್5 ವಾಹನ ಬಂದ ಬಳಿಕ ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬರಲಿದೆ.
ಆನಂದ ಗೌಡ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಪುತ್ತೂರು ಕಿರಣ್ ಪ್ರಸಾದ್ ಕುಂಡಡ್ಕ