ನವದೆಹಲಿ: ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಸ್ತಾರಾ ಏರ್‌ಲೈನ್ಸ್ ವಿಮಾನದಲ್ಲಿ ಎರಡು ವರ್ಷದ ಮಗುವೊಂದು ಇದ್ದಕಿದ್ದಂತೆ ಅಸ್ವಸ್ಥಗೊಂಡು ಉಸಿರಾಟ ನಿಲ್ಲಿಸಿದ ಘಟನೆ ನಡೆದಿದೆ.
ಅಗಸ ಮಧ್ಯದಲ್ಲಿ ಅಸ್ವಸ್ಥಗೊಂಡ ಪುಟ್ಟ ಮಗುವನ್ನು ಕಂಡು ಪೋಷಕರು ಕಂಗಾಲಾಗಿದ್ದರು ಆದರೆ ಮಗುವಿನ ಅದೃಷ್ಟ ಚೆನ್ನಾಗಿತ್ತು ನೋಡಿ ಇದೇ ವಿಮಾನದಲ್ಲಿ ಇದ್ದ ಐವರು ವೈದ್ಯರು ಮಗುವನ್ನು ರಕ್ಷಣೆ ಮಾಡಿದ್ದಾರೆ.
ಇಂಡಿಯನ್ ಸೊಸೈಟಿ ಫಾರ್ ವಾಸ್ಕುಲರ್ ಅಂಡ್ ಇಂಟರ್ವೆನ್ಷನಲ್ ರೇಡಿಯಾಲಜಿ ವೈದ್ಯರ ತಂಡ ಬೆಂಗಳೂರಿನಿಂದ ದೆಹಲಿಗೆ ವಿಸ್ತಾರಾ ಏರ್‌ಲೈನ್ಸ್ ನಲ್ಲಿ ಹೊರಟಿತ್ತು ಇದೆ ವಿಮಾನದಲ್ಲಿ ಕುಟುಂಬವೊಂದು ಎರಡು ವರ್ಷದ ಪುಟ್ಟ ಕಂದಮ್ಮನೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಿತ್ತು ಪಾಪ ವಿಮಾನ ಆಗಸದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿ ಉಸಿರಾಟ ನಿಲ್ಲಿಸಿದೆ ಈ ವೇಳೆ ಕಂಗಾಲಾದ ಕುಟುಂಬ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ ಅದೃಷ್ಟವೆಂಬಂತೆ ವಿಮಾನದಲ್ಲಿದ್ದ ಐವರು ವೈದ್ಯರು ಈ ಮಗುವನ್ನು ಪರಿಶೀಲಿಸಿದಾಗ ಮಗುವಿನ ಉಸಿರಾಟ ನಿಂತ್ತಿತ್ತು, ಅಲ್ಲದೆ ಮಗುವಿನಲ್ಲಿ ಯಾವುದೇ ಚಣ ವಲನ ಇರಲಿಲ್ಲ ಅಲ್ಲದೆ ಮಗುವಿನ ದೇಹವೂ ತಣ್ಣಗಾಗಿತ್ತು ಕೂಡಲೇ ಕಾರ್ಯಪ್ರವೃತ್ತರಾದ ವೈದ್ಯರು ಮಗುವಿಗೆ ಅಗತ್ಯ ಚಿಕಿತ್ಸೆಯನ್ನು ನೀಡಿದ್ದಾರೆ ಇದಾದ ಬಳಿಕ ಸುಮಾರು ನಲವತ್ತೈದು ನಿಮಿಷಗಳ ಬಳಿಕ ಮಗು ಉಸಿರಾಡಲು ಆರಂಭಿಸಿದೆ.
ಮಗುವಿನ ಪರಿಸ್ಥಿತಿ ಮನಗಂಡ ವೈದ್ಯರು ವಿಮಾನವನ್ನು ನಾಗ್ಪುರಕ್ಕೆ ತಿರುಗಿಸಲು ಸೂಚನೆ ನೀಡಿದ್ದಾರೆ. ನಾಗ್ಪುರ ತಲುಪಿದ ನಂತರ ಮಗುವಿಗೆ ಮಕ್ಕಳ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಈ ಘಟನೆಯನ್ನು ದೆಹಲಿಯ ಏಮ್ಸ್ ಆಸ್ಪತ್ರೆ ಕೂಡ ತಮ್ಮ ಟ್ವಿಟರ್ ಖಾತೆ ‘ಎಕ್ಸ್’ ನಲ್ಲಿ ದೃಢಪಡಿಸಿದೆ.
ಇದನ್ನೂ ಓದಿ: UI Movie: ಸಿನಿಮಾ ಅಂದ್ಮೇಲೆ ಫಸ್ಟ್ ಲುಕ್,ಟೀಸರ್ ಬಿಡಲೇಬೇಕಾ? ತಲೆಗೆ ಹುಳು ಬಿಟ್ಟ ಉಪ್ಪಿ