ತಿರುಚಿರಪಳ್ಳಿ: ತಮಿಳುನಾಡಿನ ತಿರುಚಿರಪಳ್ಳಿಯ ನದುಕಟ್ಟುಪಟ್ಟಿಯಲ್ಲಿ ಎರಡು ವರ್ಷದ ಮಗುವೊಂದು 25 ಅಡಿಯ ಬೋರ್ ವೆಲ್ ಒಳಗೆ ಬಿದ್ದ ಘಟನೆ ಶುಕ್ರವಾರ ನಡೆದಿದೆ.
ಎರಡು ವರ್ಷದ ಮಗು ಸುಜಿತ್ ವಿಲ್ಸನ್ ಕೊಳವೆ ಬಾವಿಗೆ ಬಿದ್ದ ಬಾಲಕ.
ಮಾಹಿತಿ ತಿಳಿದ ತಕ್ಷಣ ರಕ್ಷಣಾ ಪಡೆಗಳು ಸ್ಥಳಕ್ಕೆ ಆಗಮಿಸಿದ್ದು, ಬಾಲಕನನ್ನು ರಕ್ಷಿಸಲು ಹರಸಾಹಸ ಪಡುತ್ತಿವೆ. 10 ಅಡಿ ಆಳದಲ್ಲಿ ಬಂಡೆ ಎದುರಾದ ಹಿನ್ನಲೆಯಲ್ಲಿ ರಕ್ಷಣಾ ಕಾರ್ಯ ಸ್ಥಗಿತಗೊಳಸಲಾಗಿದೆ ಎಂದು ವರದಿಯಾಗಿದೆ.
ಬಾಲಕ ಸುಜಿತ್ ಶುಕ್ರವಾರ ಸಂಜೆ 5.30ರ ವೇಳೆಗೆ ಮನೆಯ ಹತ್ತಿರ ಆಟವಾಡುತ್ತಿದ್ದ. ಆಗ ಅಲ್ಲಿದ್ದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾನೆ ಎನ್ನಲಾಗಿದೆ.
ಸದ್ಯ ಮೆಡಿಕಲ್ ತಂಡ ಸ್ಥಳದಲ್ಲಿದ್ದು, ಕೊಳವೆ ಬಾವಿಯೊಳಗೆ ಆಮ್ಲಜನಕದ ವ್ಯವಸ್ಥೆ ಮಾಡಲಾಗಿದೆ.