Advertisement

ಕೀಳುಮಟ್ಟದ ಕಾಮೆಂಟ್; ಗೋವಾದಲ್ಲಿ ವಿದೇಶಿ ಪ್ರಯಾಣಿಕರಿಬ್ಬರನ್ನು ಇಳಿಸಿದ ವಿಮಾನ

05:26 PM Jan 08, 2023 | Team Udayavani |

ಮುಂಬಯಿ : ಮಹಿಳಾ ಕ್ಯಾಬಿನ್ ಸಿಬಂದಿಯ ಮೇಲೆ ಕೀಳುಮಟ್ಟದ ಕಾಮೆಂಟ್‌ಗಳನ್ನು ಮಾಡಿದ ಮತ್ತು ಸಹ ಪ್ರಯಾಣಿಕರಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರು ವಿದೇಶಿ ಪ್ರಜೆಗಳನ್ನು ಗೋವಾದಿಂದ ಮುಂಬೈಗೆ ಹೋಗುವ ಗೋ ಫಸ್ಟ್ ಫ್ಲೈಟ್ ನಿಂದ ಡಿಬೋರ್ಡ್ ಮಾಡಲಾಗಿದೆ ಎಂದು ಏರ್‌ಲೈನ್‌ನ ವಕ್ತಾರರು ಶನಿವಾರ ತಿಳಿಸಿದ್ದಾರೆ.

Advertisement

ಈ ವಿಷಯವನ್ನು ವಾಯುಯಾನ ಸುರಕ್ಷತಾ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ಗೂ ವರದಿ ಮಾಡಲಾಗಿದೆ. ವಿದೇಶಿ ಪ್ರಜೆಗಳು ರಷ್ಯಾದಿಂದ ಬಂದವರು ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ತಿಳಿಸಿದೆ.

“ಶುಕ್ರವಾರ ತೀರಾ ಕೆಳ ಮಟ್ಟದ ಕಾಮೆಂಟ್‌ಗಳನ್ನು ರವಾನಿಸಿ ಸಹ ಪ್ರಯಾಣಿಕರಿಗೆ ಅಡ್ಡಿಪಡಿಸಿ,ವಿಮಾನ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ನಂತರ ಗೋವಾ-ಮುಂಬೈ ವಿಮಾನದಿಂದ ಇಬ್ಬರು ವಿದೇಶಿಯರನ್ನು ಕೆಳಗಿಳಿಸಲಾಗಿದೆ ಎಂದು ಗೋ ಫಾಸ್ಟ್ ವಕ್ತಾರರು ಏಜೆನ್ಸಿಗಳಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next