ಹೊಸದಿಲ್ಲಿ: ಈ ವರ್ಷದ ಜುಲೈಯಿಂದ ಏರಿಕೆ ಹಾದಿಯಲ್ಲಿದ್ದ ಪೆಟ್ರೋಲ್, ಡೀಸೆಲ್ ದರ ಕೊನೆಗೂ ಇಳಿಕೆಯಾಗಿದೆ. ಸಾರ್ವಜನಿಕರ ಆಗ್ರಹಕ್ಕೆ ಮಣಿದಿರುವ ಕೇಂದ್ರ ಸರಕಾರ, ತೈಲೋತ್ಪನ್ನಗಳ ಮೇಲೆ ವಿಧಿಸುತ್ತಿರುವ ಅಬಕಾರಿ ಸುಂಕ (ಎಕ್ಸೆ„ಸ್ ಡ್ನೂಟಿ)ವನ್ನು 2 ರೂ. ತಗ್ಗಿಸಿದೆ. ಬುಧವಾರದಿಂದಲೇ ಹೊಸ ದರ ಜಾರಿಗೆ ಬರಲಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ. ಪ್ರತಿ ಲೀಟರ್ ಪೆಟ್ರೋಲ್ ದರ ಬೆಂಗಳೂರಿನಲ್ಲಿ 71.99 ರೂ., ಪ್ರತಿ ಲೀಟರ್ ಡೀಸೆಲ್ ದರ 59.25 ರೂ. (ಮಂಗಳವಾರದ್ದು) ಇದೆ. ಪೆಟ್ರೋಲ್‌ಗಾಗಿ ಕೇಂದ್ರ ಸರಕಾರ ಒಟ್ಟು 21.48 ರೂ. ತೆರಿಗೆ ಮತ್ತು ಪ್ರತಿ ಲೀ.ಡೀಸೆಲ್ ಮೇಲೆ 17.33 ರೂ. ತೆರಿಗೆ ವಿಧಿಸುತ್ತಿದೆ. ಮೂರು ವರ್ಷಗಳ ಹಿಂದೆ ಜಾಗತಿಕ ತೈಲ ಮಾರುಕಟ್ಟೆ ಉತ್ತಮ ಸ್ಥಿತಿಯಲ್ಲಿದ್ದಾಗ ತೆರಿಗೆ ಪ್ರಮಾಣ ಹೆಚ್ಚು ಮಾಡಿ ಆದೇಶ ಹೊರಡಿಸಿತ್ತು. ಸುಂಕದ ಪ್ರಮಾಣ ಇಳಿಕೆ ಮಾಡಿದ್ದರಿಂದ ಕೇಂದ್ರದ ಬೊಕ್ಕಸಕ್ಕೆ 13 ಸಾವಿರ ಕೋಟಿ ರೂ. ನಷ್ಟವಾಗಲಿದೆ.