Advertisement
ಈಗಾಗಲೇ ಸಚಿವ ಸ್ಥಾನ ಪಡೆದ ಹದಿನೈದು ಜನ ಶಾಸಕರಿಗೆ ಎರಡು ವರ್ಷ ಮಾತ್ರ ಅವಕಾಶ ಕಲ್ಪಿಸಿ, ಉಳಿದು ಮೂರು ವರ್ಷಕ್ಕೆ ಅತೃಪ್ತ ಶಾಸಕರಿಗೆ ಅವಕಾಶ ಕಲ್ಪಿಸಲು ಸೂತ್ರ ಸಿದ್ಧಪಡಿಸಿದೆ ಎಂದು ತಿಳಿದು ಬಂದಿದೆ.
ವರ್ಷ ಕಾದು ಸಚಿವರಾಗುವವರಿಗೆ ಮೂರು ವರ್ಷ ಅಧಿಕಾರ ಸಿಗಲಿದೆ ಎಂದು ಹೇಳಿದ್ದಾರೆ. ಈ ಮಧ್ಯೆ, ಸಂಪುಟದಲ್ಲಿ ಖಾಲಿ ಉಳಿದಿರುವ ಆರು ಸ್ಥಾನಗಳನ್ನು ಶೀಘ್ರವೇ ಭರ್ತಿ ಮಾಡಿ,ಬಂಡಾಯವನ್ನು ಕಡಿಮೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಲಿಂಗಾಯತ ವೀರಶೈವ ಕೋಟಾದಡಿ ಎಂ.ಬಿ.ಪಾಟೀಲ್, ಶಾಮನೂರು ಶಿವಶಂಕರಪ್ಪ,ಅಲ್ಪಸಂಖ್ಯಾತರ ಕೋಟಾದಡಿ ರಹೀಂಖಾನ್ ಅಥವಾ ತನ್ವೀರ್ ಸೇಠ್ ಕುರುಬ ಸಮುದಾಯದ ಕೋಟಾದಡಿ ಎಂ.ಟಿ.ಬಿ.ನಾಗರಾಜ್ ಅಥವಾ ಶಿವಳ್ಳಿ ಇಲ್ಲವೇ ಒತ್ತಡ ಹೆಚ್ಚಾದರೆ ಎಚ್.ಎಂ.ರೇವಣ್ಣ, ದಲಿತ ಸಮುದಾಯದ ಎಡಗೈ ಕೋಟಾದಡಿ ಧರ್ಮಸೇನಾ ಅಥವಾ ರೂಪಾ ಶಶಿಧರ್, ಒಕ್ಕಲಿಗ ಕೋಟಾದಡಿ ಎಂ.ಕೃಷ್ಣಪ್ಪ ಅಥವಾ ಎಸ್.ಟಿ.ಸೋಮಶೇಖರ್, ರೆಡ್ಡಿ ಸಮುದಾಯದ ಕೋಟಾದಡಿ ರಾಮಲಿಂಗಾರೆಡ್ಡಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿ ಬಂಡಾಯ ಶಮನಕ್ಕೆ ತೀರ್ಮಾನಿಸಿದೆ ಎನ್ನಲಾಗಿದೆ. ಸತೀಶ್ ಜಾರಕಿಹೊಳಿ ಅವರಿಗೆ ಅವಕಾಶ ಕಲ್ಪಿಸಲು ರಮೇಶ್ ಜಾರಕಿಹೊಳಿ ಆವರಿಂದ ರಾಜೀನಾಮೆ ಪಡೆಯುವ ಸಾಧ್ಯತೆಯೂ ಇದೆ. ಜತೆಗೆ ಎಸ್‌ಟಿ ಸಮುದಾಯಕ್ಕೆ ತುಕಾರಾಂ ಅಥವಾ ನಾಗೇಂದ್ರ ಅವರಿಗೆ ಅವಕಾಶ ಕೊಡಬೇಕೆಂಬ ಅಭಿಪ್ರಾಯವೂ ಇದೆ. ಕೆಲವು ಸಚಿವಾಕಾಂಕ್ಷಿಗಳಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಪ್ರಮುಖ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡಲು ಸೂತ್ರ ಸಿದಟಛಿಪಡಿಸಲಾಗಿದೆ ಎಂದು ಹೇಳಲಾಗಿದೆ.