Advertisement

ಜಿಲ್ಲೆಯಲ್ಲಿ 2 ಹಂತದಲ್ಲಿ ಗ್ರಾಪಂ ಚುನಾವಣೆ

01:03 PM Dec 02, 2020 | Suhan S |

ಚಿಕ್ಕಬಳ್ಳಾಪುರ: ರಾಜ್ಯ ಚುನಾವಣಾ ಆಯೋಗವು ಗ್ರಾಪಂ ಸಾರ್ವತ್ರಿಕ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದಲ್ಲಿ ಶಿಡ್ಲಘಟ್ಟ, ಚಿಂತಾ ಮಣಿ ಮತ್ತು ಬಾಗೇಪಲ್ಲಿಯಲ್ಲಿ ಹಾಗೂ ಎರಡನೇ ಹಂತದಲ್ಲಿ ಚಿಕ್ಕಬಳ್ಳಾ ಪುರ ತಾಲೂಕು, ಗೌರಿಬಿದನೂರು ಮತ್ತು ಗುಡಿಬಂಡೆ ತಾಲೂಕಿನ ಗ್ರಾಪಂ ಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಆರ್‌ ಲತಾ ತಿಳಿಸಿದ್ದಾರೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಮೊದಲ ಹಂತ ದಲ್ಲಿ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಡಿ.07 ರಂದು ಅಧಿಸೂಚನೆ ಹೊರಡಿಸಲಿದ್ದಾರೆ. 11 ರಂದು ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. 12 ನಾಮಪತ್ರ ಪರಿಶೀಲಿಸಲಾಗುತ್ತದೆ. 14 ರಂದು ಉಮೇದುವಾರಿಕೆ ಹಿಂತೆ ಗೆದುಕೊಳ್ಳಲು ಕೊನೆಯ ದಿನವಾಗಿದೆ. 22 ರಂದು ಬೆಳಗ್ಗೆ7ರಿಂದ ಸಂಜೆ 5 ಗಂಟೆಯವರೆಗೆ ಮತದಾನ ಅವಶ್ಯ ವಿದ್ದರೆ ಮತದಾನ ನಡೆಯಲಿದೆ.

24 ರಂದು ಮರು ಮತದಾನ ಅಗತ್ಯವಿದ್ದಲ್ಲಿ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. 30 ರಂದುಬೆಳಗ್ಗೆ8ರಿಂದಮತಎಣಿಕೆಯು ತಾಲೂಕುಗಳಲ್ಲಿ ನಡೆಯಲಿದೆ ಎಂದು ವಿವರಿಸಿದರು.ಜಿಲ್ಲೆಯಲ್ಲಿ157 ಗ್ರಾಪಂ ಗಳಿದ್ದು, ಐದು ಗ್ರಾಪಂಗಳ ಅವಧಿ ಪೂರ್ಣಗೊಂಡಿಲ್ಲ. ಇವುಗಳಲ್ಲಿ 152 ಗ್ರಾಪಂಗಳಿಗೆಚುನಾವಣೆನಡೆಯಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಿದ್ದು, ನಗರ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ. ಚುನಾವಣಾ ಮಾದರಿ ನೀತಿ ಸಂಹಿ ತೆಯು ಚುನಾವಣೆ ನಡೆಯುವ ಗ್ರಾಪಂ ವ್ಯಾಪ್ತಿಯಲ್ಲಿ ನ.30 ರಿಂದ ಡಿ.31 ರ ಸಂಜೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

68 ಗ್ರಾಂಪಗಳಲ್ಲಿ ಚುನಾವಣೆ: ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ಶಿಡ್ಲ ಘಟ್ಟದ 24 ಗ್ರಾಪಂ, ಚಿಂತಾಮಣಿ 35 ಗ್ರಾಪಂ, ಬಾಗೇಪಲ್ಲಿಯ 25 ಗ್ರಾಪಂ ಸೇರಿ ಒಟ್ಟು 84 ಗ್ರಾಪಂಗಳಲ್ಲಿ ಹಾಗೂ ಎರಡನೇ ಹಂತದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ 23 ಗ್ರಾಪಂ, ಗೌರಿಬಿದನೂರಿನ 37 ಗ್ರಾ ಪಂ, ಗುಡಿಬಂಡೆಯ 8 ಗ್ರಾಪಂ ಸೇರಿದೆ. ಒಟ್ಟು 68 ಗ್ರಾಂಪ ಗಳಲ್ಲಿ ಚುನಾವಣೆ ನಡೆಯಲಿದೆ.

ಎರಡನೇ ಹಂತ: ಎರಡನೇ ಹಂತದಲ್ಲಿ ನಡೆಯುವ ಚುನಾವಣಾ ವೇಳಾಪಟ್ಟಿಗೆ ಸಂಬಂಸಿದಂತೆ ಡಿಸೆಂಬರ್‌,11 ರಂದು ಜಿಲ್ಲಾಧಿಕಾರಿ ಅವರು ಚುನಾವಣಾ ಸೂಚನೆ ಹೊರಡಿಸಲಿದ್ದಾರೆ. ಡಿ.16 ರಂದು ನಾಮಪತ್ರ ಸಲ್ಲಿಸಲುಕೊನೆಯ ದಿನವಾಗಿದೆ. ಡಿಸೆಂಬರ್‌, 17 ರಂದು ನಾಮಪತ್ರ ಪರಿಶೀಲಿಸಲಾಗುತ್ತದೆ. ಡಿಸೆಂಬರ್‌, 19 ರಂದು ಉಮೇದು ವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಡಿಸೆಂಬರ್‌, 27 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ಅವಶ್ಯವಿದ್ದರೆ ಮತದಾನ ನಡೆಯಲಿದೆ. ಡಿಸೆಂ ಬರ್‌, 29 ರಂದು ಮರು ಮತದಾನ ಅಗತ್ಯವಿದ್ದಲ್ಲಿ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಡಿಸೆಂಬರ್‌, 30 ರಂದು ಬೆಳಗ್ಗೆ 8 ಗಂಟೆ ಯಿಂದ ಮತ ಎಣಿಕೆಯು ತಾಲ್ಲೂಕು ಗಳಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next