Advertisement

ಸಿಎಫ್ಟಿಆರ್‌ಐನಿಂದ 2 ಹೊಸ ಉತ್ಪನ್ನ ಬಿಡುಗಡೆ

07:26 AM Feb 12, 2019 | Team Udayavani |

ಮೈಸೂರು: ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್ಟಿಆರ್‌ಐ) ದೀರ್ಘ‌ ಕಾಲ ಬಾಳಿಕೆ ಬರುವ 2 ವಿನೂತನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Advertisement

ಉತ್ತರ ಕರ್ನಾಟಕದಲ್ಲಿ ಸುಪ್ರಸಿದ್ಧವಾದ ಗೋಧಿ ಹುಗ್ಗಿ ಇದೀಗ ಒಂದು ವರ್ಷಗಳ ಕಾಲ ಬಾಳಿಕೆ ಬರುವಂತೆ ಕ್ಯಾನುಗಳಲ್ಲಿ ಪ್ಯಾಕ್‌ ಆಗಿ ದೊರೆಯಲಿದೆ. ಗೋಧಿಯಿಂದ ತಯಾರಿಸಲ್ಪಡುವ ಪಾಯಸದಂತಹ ಈ ತಿನಿಸನ್ನು ಧಾರವಾಡದ ಲತ್ತಿ/ ಲಟ್ಟಿ ಫ‌ುಡ್ಸ್‌ ಕಂಪನಿಯು ತಯಾರಿಸಿ ಮಾರಾಟ ಮಾಡುತ್ತಿದೆ.

ಮೈಸೂರಿನ ಅವಧೂತ ದತ್ತಪೀಠವು ಭಕ್ತರಿಗೆ ವಿತರಿಸುವ ಪ್ರಸಾದಂ, ಸಂಸ್ಥೆಯು ಅಭಿವೃದ್ಧಿಪಡಿಸಿರುವ ಮತ್ತೂಂದು ಉತ್ಪನ್ನ. ಗೋಧಿ ಹಿಟ್ಟು, ಬೆಲ್ಲ, ತುಪ್ಪ, ಗೋಡಂಬಿ-ಬಾದಾಮಿಯಂತಹ ಬೀಜಗಳನ್ನು ಸೇರಿಸಿ ತಯಾರಿಸುವ ಪ್ರಸಾದವು ಈಗ ಟಿನ್‌ ರಹಿತ ಸ್ಟೀಲ್‌ ಡಬ್ಬಿಯಲ್ಲಿ ಪ್ಯಾಕ್‌ ಆಗಿ ದೊರೆಯಲಿದೆ. ಕನಿಷ್ಠ ಮೂರು ತಿಂಗಳು ಈ ಪ್ರಸಾದ ಕೆಡದೆ ಉಳಿಯಲಿದೆ.

ಗಣಪತಿ ಸಚ್ಚಿದಾನಂದ ಆಶ್ರಮ ಎಂದು ಹೆಸರಿರುವ ಶ್ರೀ ದತ್ತಪೀಠ ದೀರ್ಘ‌ ಬಾಳಿಕೆಯ ಪ್ರಸಾದವನ್ನು ಅಭಿವೃದ್ಧಿಪಡಿಸಿಕೊಡುವಂತೆ ವಿನಂತಿಸಿತ್ತು. ಅದಕ್ಕಾಗಿ ಪ್ರಸಾದವನ್ನು ಹರ್ಡಲ್‌ ತಂತ್ರಜ್ಞಾನವನ್ನು ಬಳಸಿ ಸಂಸ್ಕರಿಸಿ ಪ್ಯಾಕ್‌ ಮಾಡಿದೆವು.

ಸಾಮಾನ್ಯ ಉಷ್ಣತೆಯಲ್ಲಿ ಈ ಪ್ರಸಾದ ಮೂರು ತಿಂಗಳು ಬಾಳಿಕೆ ಬರುತ್ತದೆ ಎನ್ನುತ್ತಾರೆ ಪ್ರಸಾದವನ್ನು ಅಭಿವೃದ್ಧಿಪಡಿಸಿದ ತಂಡದ ಸದಸ್ಯರಾದ ಸಿಎಫ್ಟಿಆರ್‌ಐ ಆಹಾರ ಪ್ಯಾಕೇಜಿಂಗ್‌ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರೂ ಆಗಿರುವ ವಿಜ್ಞಾನಿ ಎಚ್.ಎಸ್‌.ಸತೀಶ್‌.

Advertisement

ದೀರ್ಘ‌ ಬಾಳಿಕೆ: ಪಾರಂಪರಿಕ ಸ್ವಾದದ ಜೊತೆಗೆ ದೀರ್ಘ‌ ಬಾಳಿಕೆಯ ತಂತ್ರಜ್ಞಾನವೂ ಮಿಳಿತವಾಗಿರುವ ಈ ಉತ್ಪನ್ನಗಳನ್ನು ದಾಸ್ತಾನಿಡಲು ರೆಫ್ರಿಜಿರೇಟರುಗಳ ಅಗತ್ಯವಿಲ್ಲ. ಆಹಾರ ಸುರಕ್ಷತೆಯ ಜೊತೆಗೇ ವಿಸ್ತೃತ ಮಾರುಕಟ್ಟೆಯ ಲಾಭವನ್ನು ಇವು ಒದಗಿಸಲಿವೆ ಎನ್ನುತ್ತಾರೆ ಸತೀಶ್‌.

Advertisement

Udayavani is now on Telegram. Click here to join our channel and stay updated with the latest news.

Next