Advertisement

2 ಸಿನಿಮಾ ದೃಶ್ಯ ಲೀಕ್‌ ವಿವಾದ

10:58 AM Jul 26, 2017 | Team Udayavani |

ಶ್ರೀನಿವಾಸರಾಜು ನಿರ್ದೇಶನದ “2′ ಚಿತ್ರದ ದೃಶ್ಯ ಲೀಕ್‌ ವಿವಾದಕ್ಕೆ ಸಂಬಂಧಿಸಿದಂತೆ, ಮಂಗಳವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚರ್ಚೆ ನಡೆದಿದೆ. ನಿರ್ದೇಶಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ನಿರ್ದೇಶಕ ಶ್ರೀನಿವಾಸರಾಜು, “ನನ್ನ “2′ ಸಿನಿಮಾಗೆ  ಏನು ಬೇಕೋ ಅದನ್ನೆಲ್ಲಾ ನಾನು ಚಿತ್ರೀಕರಿಸಿದ್ದೆ.

Advertisement

ಆದರೆ, ಸೆನ್ಸಾರ್‌ ಮಂಡಳಿಯು ಚಿತ್ರ ವೀಕ್ಷಿಸಿ, ಕೆಲವು ದೃಶ್ಯಗಳನ್ನು ತೆಗೆದು ಹಾಕಿದೆ. ಹಾಗೆ ತೆಗೆದು ಹಾಕಿದ ದೃಶ್ಯವೊಂದು ಮಾಧ್ಯಮಗಳಿಗೆ ಲೀಕ್‌ ಆಗಿದೆ. ಅದು ಹೇಗೆ ಲೀಕ್‌ ಆಗಿದೆಯೋ ನನಗೆ ಗೊತ್ತಿಲ್ಲ. ಹಾಗಾಗಿ ನಾನು ಸೆನ್ಸಾರ್‌ ಬೋರ್ಡ್‌ಗೆ ಹಾಗೂ ಕ್ರೈಮ್‌ಬ್ರ್ಯಾಂಚ್‌ಗೆ ದೂರು ಕೊಡುತ್ತೇನೆ’ ಎಂದು ಹೇಳಿದ್ದಾರೆ.

ನಿರ್ದೇಶಕ ಶ್ರೀನಿವಾಸರಾಜು  ಮಾತಿನ ಬಳಿಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, “ನಿರ್ದೇಶಕ ಶ್ರೀನಿವಾಸರಾಜು ಅವರು ಚಿತ್ರಕ್ಕೆ ಪೂರಕವಾಗಿದೆ ಎಂಬ ಕಾರಣದಿಂದ ಆ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಆದರೆ, ಸೆನ್ಸಾರ್‌ ಮಂಡಳಿ ಆ ದೃಶ್ಯವನ್ನು ಕತ್ತರಿಸಿದೆ. ಆದಾಗ್ಯೂ ಆ ದೃಶ್ಯ ಮಾಧ್ಯಮಕ್ಕೆ ಹೋಗಿದೆ. ನಿರ್ದೇಶಕರು ಆ ದೃಶ್ಯವನ್ನು ಲೀಕ್‌ ಮಾಡಿಲ್ಲ ಎಂದು ಹೇಳಿದ್ದಾರೆ.

ಅದೂ ಅಲ್ಲದೆ, ಅವರೇ ಸ್ವತಃ ಪೊಲೀಸ್‌ ಮತ್ತು ಸೈಬರ್‌ ಕ್ರೈಮ್‌ಗೆ ದೂರು ಕೊಡುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಅವರು ಹೇಳಿಕೊಂಡಿದ್ದಾರೆ’ ಎಂದು ಸಾ.ರಾ. ಗೋವಿಂದು ಹೇಳಿದ್ದಾರೆ. ಈ ಸಭೆಯಲ್ಲಿ ಮಂಡಳಿಯ ಉಪಾಧ್ಯಕ್ಷ ಉಮೇಶ್‌ ಬಣಕಾರ್‌ ಹಾಗೂ ನಿರ್ದೇಶಕ ಸಂಘದ ಪದಾಧಿಕಾರಿಗಳು, ಮಂಡಳಿ ಪದಾಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next