Advertisement

ಗ್ಲಾಸ್ ಸ್ವಚ್ಛಗೊಳಿಸುವ ವೇಳೆ 10ನೇ ಮಹಡಿಯಿಂದ ಬಿದ್ದು ಇಬ್ಬರು ಕಾರ್ಮಿಕರ ಸಾವು

09:00 AM Jun 19, 2019 | Team Udayavani |

ನವದೆಹಲಿ:ಬಹುಮಹಡಿ ಟವರ್ ನ 10ನೇ ಅಂತಸ್ತಿನಲ್ಲಿ ಸ್ವಚ್ಛಗೊಳಿಸುವ ಕೆಲಸದಲ್ಲಿ ನಿರತರಾಗಿದ್ದ ವೇಳೆ ಕೆಳಗೆ ಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

Advertisement

ಸೋಮವಾರ ಮಧ್ಯಾಹ್ನ ಇಲ್ಲಿನ ಪ್ರತಿಷ್ಠಿತ ಸಂಸ್ಥೆಯ ಟವರ್ ನ 10ನೇ ಮಹಡಿಯಲ್ಲಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾಗ ವಯರ್ ನ ಸ್ಟ್ಯಾಂಡ್ ಮುರಿದು ಬಿದ್ದ ಪರಿಣಾಮ 22 ವರ್ಷದ ರಾಜು ಶರ್ಮಾ ಹಾಗೂ 23 ವರ್ಷದ ಅಸ್ತಿಯಾಖ್ ಖಾನ್ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

10ನೇ ಮಹಡಿಯಲ್ಲಿ ಹೊರಗಡೆಯ ವಯರ್ ಸ್ಟ್ಯಾಂಡ್ ಮೇಲೆ ನಿಂತು ಕಿಟಕಿಯ ಗಾಜನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಇಬ್ಬರೂ ಹೆಲ್ಮೆಟ್ ಆಗಲಿ, ಸುರಕ್ಷತಾ ಕ್ರಮವಾಗಿ ಯಾವುದೇ ಬೆಲ್ಟ್ ಅನ್ನು ಉಪಯೋಗಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಐಎಎನ್ ಎಸ್ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.

10ನೇ ಮಹಡಿಯಿಂದ ಕೆಳಗೆ ಬಿದ್ದ ಅಸ್ತಿಯಾಖ್ ಮತ್ತು ರಾಜು ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರು ದಾರಿಮಧ್ಯೆಯೇ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.

ಇಬ್ಬರೂ ಕಾರ್ಮಿಕರು ದಕ್ಷಿಣ ದೆಹಲಿಯಲ್ಲಿ ನೆಲೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next