ಉತ್ತರಾಖಂಡ: ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿ ಹಲವರು ಗಂಭೀರ ಗಾಯಗೊಂಡಿರುವ ಘಟನೆ ಮಸ್ಸೂರಿ ಡೆಹ್ರಾಡೂನ್ ಮುಖ್ಯ ರಸ್ತೆಯ ಶೇರ್ಗಾಡಿ ಬಳಿ ಭಾನುವಾರ ಸಂಭವಿಸಿದೆ.
ಬಸ್ಸಿನಲ್ಲಿ ಚಾಲಕ ಸೇರಿ 22 ಮಂದಿ ಇದ್ದರೆಂದು ಪೊಲೀಸ್ ಅಧಿಕಾರಿಗಳು ಹೇಳಿದ್ದು ಕಂದಕಕ್ಕೆ ಬಿದ್ದ ಸಂದರ್ಭ ಇಬ್ಬರು ಯುವತಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ತಂಡ, ಅಗ್ನಿಶಾಮಕ ದಳ, ಐಟಿಬಿಪಿ ಮತ್ತು ಆಂಬ್ಯುಲೆನ್ಸ್ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳನ್ನು ಕಂದಕದಿಂದ ಹೊರತೆಗೆದು ಲಾಂದೂರಿನ ಉಪ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಬಸ್ ಡೆಹ್ರಾಡೂನ್‌ನಿಂದ ಮಸ್ಸೂರಿ ಮಾರ್ಗವಾಗಿ ಸಾಗುತ್ತಿತ್ತು ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ ಎನ್ನಲಾಗಿದೆ.
ಇದನ್ನೂ ಓದಿ: ಕುನೋ ಉದ್ಯಾನವನದಿಂದ ಸಮೀಪದ ಗ್ರಾಮ ಪ್ರವೇಶಿಸಿದ ಚೀತಾ!; ವಿಡಿಯೋ