Advertisement

Storm: ದೆಹಲಿಯಲ್ಲಿ ಬಿರುಗಾಳಿ ಸಹಿತ ಮಳೆ… 2 ಮೃತ್ಯು, 20ಕ್ಕೂ ಹೆಚ್ಚು ಮಂದಿಗೆ ಗಾಯ

10:16 AM May 11, 2024 | Team Udayavani |

ನವದೆಹಲಿ: ದಿಲ್ಲಿ -ಎನ್‌ಸಿಆರ್‌ ಸುತ್ತ ಶುಕ್ರವಾರ ಸುರಿದ ಭಾರಿ ಗಾಳಿ ಮಳೆಗೆ ಮರಗಳು ಬಿದ್ದು ಕಟ್ಟಡಗಳು ಹಾನಿಗೊಂಡ ಪರಿಣಾಮ ಇಬ್ಬರು ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Advertisement

ದೆಹಲಿ ಪೊಲೀಸರ ಮಾಹಿತಿ ಪ್ರಕಾರ, ಶುಕ್ರವಾರ ಬಿರುಗಾಳಿ ಬಿಸಿದ ಪರಿಣಾಮ ಮರಗಳು ಉರುಳಿ ಬಿದ್ದಿರುವ ಬಗ್ಗೆ 152 ಕರೆಗಳು ಮತ್ತು ಕಟ್ಟಡಗಳಿಗೆ ಹಾನಿಯ ಬಗ್ಗೆ 55 ಕರೆಗಳನ್ನು ಸ್ವೀಕರಿಸಲಾಗಿದೆ. ಮರಗಳು ಧರೆಗುರುಳಿದ ಪರಿಣಾಮ 200 ಕ್ಕೂ ಹೆಚ್ಚು ನಿವಾಸಿಗಳು ವಿದ್ಯುತ್ ಸ್ಥಗಿತಗೊಂಡ ಪರಿಣಾಮ ರಾತ್ರಿ ಕತ್ತಲಲ್ಲೇ ದಿನ ಕಳೆದಿದ್ದಾರೆ ಎಂದು ಹೇಳಿದ್ದಾರೆ.

ಗುಡುಗು ಸಹಿತ ಬಿರುಗಾಳಿ ಮತ್ತು ಬಲವಾದ ಗಾಳಿಯಿಂದಾಗಿ ನಗರದಲ್ಲಿ ಸಂಚಾರ ಅಸ್ತವ್ಯಸ್ತ ಉಂಟಾಗಿದೆ, ಅಲ್ಲದೆ ವಿಮಾನದ ಮಾರ್ಗಗಳಲ್ಲೂ ಬದಲಾವಣೆ ಮಾಡಲಾಗಿದೆ ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ದೆಹಲಿಗೆ ತೆರಳುತ್ತಿದ್ದ ಒಂಬತ್ತು ವಿಮಾನಗಳನ್ನು ಜೈಪುರಕ್ಕೆ ತಿರುಗಿಸಲಾಗಿದೆ ಎಂದು ಹೇಳಿದ್ದಾರೆ.

ನೋಯ್ಡಾದ ಸೆಕ್ಟರ್ 58ರಲ್ಲಿ ಕಟ್ಟಡವನ್ನು ದುರಸ್ತಿ ಮಾಡಲು ಅಳವಡಿಸಲಾದ ಪರೇಜ್ ಗಳು ವಾಹನಗಳ ಮೇಲೆ ಬಿದ್ದ ಪರಿಣಾಮ ಹಲವಾರು ಕಾರುಗಳಿಗೆ ಹಾನಿಯಾಗಿದೆ.

ಇಂದು ಕೂಡ ಮಳೆ ಸಾಧ್ಯತೆ:
ರಾಜಧಾನಿಯಲ್ಲಿ ಇಂದು ಕೂಡ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಶನಿವಾರ ಮೋಡ ಕವಿದ ವಾತಾವರಣ ಹೊಂದಿದೆ.

Advertisement

ಇದನ್ನೂ ಓದಿ: Crime Followup: ಸೂರ್ಲಬ್ಬಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿ ಪೊಲೀಸ್ ವಶ

Advertisement

Udayavani is now on Telegram. Click here to join our channel and stay updated with the latest news.

Next