Advertisement
ಜಿಪಿಎಸ್ ತಂತ್ರಜ್ಞಾನ ಬಳಕೆಜಿಪಿಎಸ್ ತಂತ್ರಜ್ಞಾನದ ಸಹಾಯದಿಂದ ಕೇಂದ್ರ ಸರಕಾರ ಆರೋಗ್ಯ ಸೇತು ಆ್ಯಪ್ ರೂಪಿಸಿದ್ದು, ಪ್ರತಿಯೊಬ್ಬರು ಆ್ಯಪ್ ಹೊಂದಿರಲೇ ಬೇಕು ಎನ್ನುವು ದನ್ನು ಸುಪ್ರೀಂ ಕೋರ್ಟ್ ಕಡ್ಡಾಯ ಮಾಡಿಲ್ಲ. ಆದರೆ ಆರೋಗ್ಯದ ಹಿತದೃಷ್ಟಿಯಿಂದ ಸ್ಮಾರ್ಟ್ ಫೋನ್ ಹೊಂದಿರು ವವರು ಆ್ಯಪ್ ಡೌನ್‌ಲೋಡ್ ಮಾಡಿ ಕೊಂಡರೆ ಸೋಂಕಿನಿಂದ ರಕ್ಷಣೆಯ ಪಡೆಯಬಹುದಾಗಿದೆ.
ಉಡುಪಿ ಜಿಲ್ಲೆಯಲ್ಲಿ 2 ಲಕ್ಷ ಜನರು ಆರೋಗ್ಯ ಸೇತು ಆ್ಯಪ್ ಬಳಸುತ್ತಿ ದ್ದಾರೆ. ಉಡುಪಿ ನಗರದ 10 ಕಿ.ಮೀ. ವ್ಯಾಪ್ತಿಯಲ್ಲಿ 52,000 ಜನರು, ಕುಂದಾಪುರ ನಗರದ 10ಕಿ.ಮೀ. ವ್ಯಾಪ್ತಿಯಲ್ಲಿ 20,360 ಜನರು, ಕಾಪು ನಗರದಲ್ಲಿ 15,280, ಕಾರ್ಕಳ, ಬ್ರಹ್ಮಾವರ, ಕೋಟ, ಬೈಂದೂರು, ಹೆಬ್ರಿ ನಗರದ 10 ಕಿ.ಮೀ. ವ್ಯಾಪ್ತಿಯಲ್ಲಿ 70,000 ಜನರು ಹಾಗೂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸುಮಾರು 42,000 ಜನರು ಆ್ಯಪ್ ಡೌನ್ ಮಾಡಿಕೊಂಡಿದ್ದಾರೆ. ಪ್ರಾದೇಶಿಕ ಭಾಷೆಗೆ ಒಲವು!
ಕನ್ನಡ, ತಮಿಳು, ಇಂಗ್ಲಿಷ್, ಹಿಂದಿ ಸೇರಿದಂತೆ 11 ಭಾಷೆಯಲ್ಲಿ ಆ್ಯಪ್ ಲಭ್ಯವಿದೆ. ಪ್ರಾದೇಶಿಕ ಭಾಷೆಯಲ್ಲಿ ಆಯ್ಕೆ ನೀಡಿದ ಬಳಿಕ ಹಲವರು ಈ ಆ್ಯಪ್ ಆಸಕ್ತಿ ತೋರುತ್ತಿದ್ದಾರೆ.
Related Articles
ಆರೋಗ್ಯ ಸೇತು ಆ್ಯಪ್ ರಾಷ್ಟ್ರೀಯ ಮಾಹಿತಿ ಕೇಂದ್ರ ಅಭಿವೃದ್ಧಿಪಡಿಸಿದೆ. ಈ ಆ್ಯಪ್ ನಿರಂತರವಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಸಹಾಯವಾಣಿ, ಬಳಕೆ ದಾರರ ಆರೋಗ್ಯದ ಸ್ಥಿತಿ ಬಗ್ಗೆ ಮಾಹಿತಿ ನೀಡುತ್ತದೆ.
Advertisement
ಆ್ಯಪ್ ಬಗ್ಗೆ ಜಾಗೃತಿಸೋಂಕಿತರು ಕೂಡ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಆ್ಯಕ್ಟಿವ್ ಮೋಡ್‌ನಲ್ಲಿ ಇಟ್ಟಿದ್ದರೆ ಮಾತ್ರ ಮಾಹಿತಿ ಪಡೆಯಲು ಅನುಕೂಲ. ಇಲ್ಲವಾದರೆ ಅಪಾಯದ ಅರಿವು ಸಾಧ್ಯವಿಲ್ಲ. ಜಿಲ್ಲೆ ಯಲ್ಲಿ ಆ್ಯಪ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಆ್ಯಪ್‌ಗೆ ಮಾಹಿತಿ ಆಪ್‌ಲೋಡ್ ಮಾಡಿದ 45 ದಿನಗಳಲ್ಲಿ ವಿವರ ಶಾಶ್ವತವಾಗಿ ಅಳಿಸಿ ಹೋಗಲಿದೆ. ಜನರಿಂದ ಸ್ವಯಂ ಪರೀಕ್ಷೆ
ಕಳೆದ 24 ಗಂಟೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 500 ಜನರು ಹೊಸ ದಾಗಿ ಆ್ಯಪ್ ಡೌನ್‌ಲೋಡ್ ಮಾಡಿ ಕೊಂಡಿದ್ದು, ಅವರಲ್ಲಿ 300 ಜನರು ಸ್ವಯಂ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಜಿಲ್ಲೆಯ ಗ್ರಾಮೀಣ ಭಾಗಕ್ಕಿಂತ ನಗರ ಪ್ರದೇಶದಲ್ಲಿ ಆ್ಯಪ್ ಬಳಕೆದಾರರ ಸಂಖ್ಯೆ ಹೆಚ್ಚಿದೆ. ನಿರೀಕ್ಷೆ ಮೀರಿ ಬಳಕೆ
ಆರೋಗ್ಯ ಸೇತು ಆ್ಯಪ್ ಅಭಿವೃದ್ಧಿಪಡಿಸಲು ಜಿಲ್ಲಾಧಿಕಾರಿಗಳು ಎನ್‌ಐಸಿಯ ಮಂಜುನಾಥ ಅವರನ್ನು ನೇಮಿಸಿದ್ದಾರೆ. ಜಿಲ್ಲೆಯಲ್ಲಿ ನಿರೀಕ್ಷೆ ಮೀರಿ ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಇದು ಜನರಲ್ಲಿ ಆರೋಗ್ಯದ ಬಗ್ಗೆ
ಅರಿವು ಮೂಡಿಸುತ್ತಿದೆ.
-ಡಾ| ಸುಧೀರ್‌ಚಂದ್ರ ಸೂಡ, ಡಿಎಚ್‌ಒ, ಉಡುಪಿ ಜಿಲ್ಲೆ.