Advertisement

ರಶ್ಮಿ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಆಟೋ ಚಾಲಕ-ಮಾಲಕರ ಸಂಘಕ್ಕೆ 2 ಲಕ್ಷ ರೂ. ನೆರವು

11:02 AM Apr 16, 2020 | sudhir |

ಕಾರ್ಕಳ: ರಶ್ಮಿ ಚಾರಿಟೇಬಲ್‌ ಟ್ರಸ್ಟ್‌ ಕಾರ್ಕಳ ಇದರ ವತಿಯಿಂದ ಕಾರ್ಕಳ ನಗರದಲ್ಲಿ ಆಟೋ ಚಾಲಕರಾಗಿರುವ ಸುಮಾರು 200 ಮಂದಿಗೆ ತಲಾ 1 ಸಾವಿರ ರೂ. ವಿನಂತೆ 2 ಲಕ್ಷ ರೂ. ಆರ್ಥಿಕ ಸಹಕಾರ ನೀಡಲಾಯಿತು. ಗುರುವಾರ ಅನಂತಶಯನದಲ್ಲಿರುವ ರಶ್ಮಿ ಕನ್‌ಸ್ಟ್ರಕ್ಷನ್‌ ಕಚೇರಿಯಲ್ಲಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷೆ ಸಾವಿತ್ರಿ ಡಿ.ಆರ್‌., ಡಿ.ಆರ್‌. ರಾಜು, ಗ್ರಾಮಾಂತರ ಪೊಲೀಸ್‌ ಠಾಣೆ ಎಸ್‌ಐ ನಾಸಿರ್‌ ಹುಸೇನ್‌, ನಗರ ಠಾಣಾ ಎಸ್‌ಐ ಮಧು ಬಿ.ಇ. ಅವರು ಆಟೋ ಚಾಲಕರಿಗೆ ಸಹಾಯಧನ ವಿತರಿಸಿದರು.

Advertisement

ಕ್ರೈಂ ವಿಭಾಗದ ಎಸ್‌ಐ ದಾಮೋದರ್‌ ಕೆ.ಜಿ., ಪ್ರಭಾಕರ್‌ ಬಂಗೇರ, ಪ್ರವೀಣ್‌ ಕುಮಾರ್‌ ಜರಿಗುಡ್ಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೈಲಾದ ಸಹಾಯ ಮಾಡಿದ್ದೇವೆ
ಲಾಕ್‌ಡೌನ್‌ ಘೋಷಣೆಯಾದ ಬಳಿಕ ಆಟೋ ಚಾಲಕರು ಬಾಡಿಗೆಯಿಲ್ಲದೇ ಸಂಕಷ್ಟದಲ್ಲಿದ್ದಾರೆ. ಆಟೋ ಚಾಲಕರಿಗೆ ಪಡಿತರ ಸಾಮಗ್ರಿ ಸರಕಾರ, ಸಂಘ-ಸಂಸ್ಥೆಗಳು ವಿತರಣೆ ಮಾಡುತ್ತಿದ್ದರೂ ಕೆಲವೊಂದು ತುರ್ತು ಸಂದರ್ಭ ಹಣದ ಅವಶ್ಯಕತೆಯಿರುವುದು. ಈ ನಿಟ್ಟಿನಲ್ಲಿ ರಶ್ಮಿ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಆಟೋ ಚಾಲಕರಿಗೆ ಕೈಲಾದ ಸಹಾಯ ಮಾಡಿದ್ದೇವೆ.
– ಡಿ.ಆರ್‌. ರಾಜು ಕಾರ್ಯದರ್ಶಿ, ರಶ್ಮಿ ಚಾರಿಟೇಬಲ್‌ ಟ್ರಸ್ಟ್‌

ಕೃತಜ್ಞತೆ ಅರ್ಪಣೆ
ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ಆದೇಶದಂತೆ ಕಳೆದ 22 ದಿನಗಳಿಂದ ಆಟೋ ಚಾಲಕರು ಬಾಡಿಗೆ ನಡೆಸುತ್ತಿಲ್ಲ. ಇದರಿಂದಾಗಿ ಚಾಲಕರು ದೈನಂದಿನ ಖರ್ಚಿಗಾಗಿ ಪರಿತಪಿಸುವಂತಾಗಿದೆ. ಡಿ.ಆರ್‌. ರಾಜು ದಂಪತಿ ರಶ್ಮಿ ಚಾರಿಟೇಬಲ್‌ ಟ್ರಸ್ಟ್‌ ಮುಖಾಂತರ ನಮಗೆ ನೆರವಾಗಿರುವುದು ಅತೀವ ಸಂತಸ ತಂದಿದೆ. ಕಷ್ಟಕರವಾದ ಈ ಸಂದರ್ಭ 2 ಲಕ್ಷ ರೂ. ಗಿಂತಲೂ ಹೆಚ್ಚಿನ ಮೊತ್ತ ನೀಡುವುದರೊಂದಿಗೆ ಸಹಾಯಹಸ್ತ ಚಾಚಿದ ಟ್ರಸ್ಟ್‌ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ.

– ಉಮರಬ್ಬ, ಅಧ್ಯಕ್ಷರು, ಆಟೋ ಚಾಲಕ-ಮಾಲಕರ ಸಂಘ, ಕಾರ್ಕಳ

Advertisement
Advertisement

Udayavani is now on Telegram. Click here to join our channel and stay updated with the latest news.

Next