Advertisement

2 ಕಿ.ಮೀ. ಓಟದ ಫಿಟ್‌ನೆಸ್‌ ಟೆಸ್ಟ್‌ : 6 ಕ್ರಿಕೆಟಿಗರು ಫೇಲ್‌

11:16 PM Feb 12, 2021 | Team Udayavani |

ಹೊಸದಿಲ್ಲಿ : ಕ್ರಿಕೆಟಿಗರ ಫಿಟ್‌ನೆಸ್‌ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಬಿಸಿಸಿಐ ಜಾರಿಗೊಳಿಸಿದ ನೂತನ 2 ಕಿ.ಮೀ. ಓಟದ ಪರೀಕ್ಷಾ ವಿಧಾನದಲ್ಲಿ ಆರು ಮಂದಿ ಕ್ರಿಕೆಟಿಗರು ತೇರ್ಗಡೆಯಾಗುವಲ್ಲಿ ವಿಫ‌ಲರಾಗಿದ್ದಾರೆ.

Advertisement

ಮುಂಬರುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿಯನ್ನು ಗುರಿಯಾಗಿರಿಸಿ ಯೋ-ಯೋ ಟೆಸ್ಟ್‌ ಹೊರತಾಗಿ ನಡೆಸಲಾದ, ನಿರ್ದಿಷ್ಟ ಸಮಯದಲ್ಲಿ 2 ಕಿ.ಮೀ. ಓಟ ಪೂರೈಸುವ ಪರೀಕ್ಷೆ ಇದಾಗಿತ್ತು. ಪ್ರಮುಖ 6 ಮಂದಿ ಸ್ಟಾರ್‌ ಆಟಗಾರರು ಇದರಲ್ಲಿ ವಿಫ‌ಲರಾದರು. ಇವರೆಂದರೆ ಸಂಜು ಸ್ಯಾಮ್ಸನ್‌, ಇಶಾನ್‌ ಕಿಶನ್‌, ರಾಹುಲ್‌ ತೆವಾತಿಯಾ, ನಿತೀಶ್‌ ರಾಣಾ, ಸಿದ್ಧಾರ್ಥ್ ಕೌಲ್‌ ಮತ್ತು ಜೈದೇವ್‌ ಉನಾದ್ಕತ್‌.

“ಇದು ಹೊಸ ಮಾದರಿಯ ಫಿಟ್‌ನೆಸ್‌ ಪರೀಕ್ಷೆ. ಕಳೆದ ವಾರವಷ್ಟೇ ಇದನ್ನು ಪರಿಚಯಿಸಲಾಗಿದೆ. ಹೀಗಾಗಿ ಮೊದಲ ಹಂತದಲ್ಲಿ ಅನುತ್ತೀರ್ಣರಾದ ಎಲ್ಲ ಆಟಗಾರರಿಗೆ ಮತ್ತೂಂದು ಅವಕಾಶ ನೀಡಲಾಗುವುದು. 2ನೇ ಬಾರಿಯೂ ವಿಫ‌ಲರಾದರೆ ಅವರನ್ನು ಮುಂಬರುವ ಇಂಗ್ಲೆಂಡ್‌ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗಳಿಗೆ ಪರಿಗಣಿಸಲಾಗುವುದಿಲ್ಲ’ ಎಂದು ಬಿಸಿಸಿಐ ತಿಳಿಸಿರುವುದಾಗಿ ವರದಿಯಾಗಿದೆ. ಎನ್‌ಸಿಎಯಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ.

ಎಂಟೂವರೆ ನಿಮಿಷದ ಅವಧಿ

ಈ ನೂತನ ಪರೀಕ್ಷೆಯಲ್ಲಿ ವೇಗಿಗಳನ್ನು ಹೊರತುಪಡಿಸಿ ಉಳಿದವರೆಲ್ಲರೂ ಎಂಟೂವರೆ ನಿಮಿಷದಲ್ಲಿ 2 ಕಿ.ಮೀ. ಓಟವನ್ನು ಪೂರೈಸಬೇಕು. ಆದರೆ ವೇಗದ ಬೌಲರ್‌ಗಳಿಗೆ ಮಾತ್ರ 8 ನಿಮಿಷ, 15 ಸೆಕೆಂಡ್‌ಗಳ ಅವಧಿ ನೀಡಲಾಗಿದೆ.

Advertisement

ಇಶಾನ್‌ ಕಿಶನ್‌ ಪಾಸ್‌? :

ಬೆಂಗಳೂರಿನ ಎನ್‌ಸಿಎಯಲ್ಲಿ ಕಳೆದ ವಾರ ನಡೆದ 2 ಕಿ.ಮೀ. ಓಟದಲ್ಲಿ ತಾನು ತೇರ್ಗಡೆಯಾಗಿದ್ದಾಗಿ ವಿಕೆಟ್‌ ಕೀಪಿಂಗ್‌ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ ಹೇಳಿದ್ದಾರೆ. ತಾನು ತೇರ್ಗಡೆಯಾಗಿಲ್ಲ ಎಂಬ ಮಾಧ್ಯಮಗಳ ವರದಿ ಸುಳ್ಳು ಎಂಬುದಾಗಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next