Advertisement

1990ರಲ್ಲಿ ನಡೆದ Mirwaiz Farooq ಹತ್ಯೆ ಪ್ರಕರಣ: 30 ವರ್ಷಗಳ ಬಳಿಕ ಇಬ್ಬರು ಉಗ್ರರ ಸೆರೆ

09:28 PM May 16, 2023 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ರಮುಖ ನಾಯಕರಾಗಿದ್ದ ಮಿರ್ವಾಯಿಜ್‌ ಫ‌ರೂಕ್‌ ಅವರನ್ನು ಹತ್ಯೆಗೈದ ಇಬ್ಬರು ಉಗ್ರರನ್ನು ಬರೋಬ್ಬರಿ ಮೂವತ್ತು ವರ್ಷಗಳ ಬಳಿಕ ಸೆರೆಹಿಡಿಯಲಾಗಿದೆ.

Advertisement

1990 ಮೇ 21ರಂದು ಫ‌ರೂಕ್‌ ಅವರ ಹತ್ಯೆ ನಡೆದಿತ್ತು. ಬಂಧಿತ ಇಬ್ಬರು ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆ ಪ್ರಕರಣದಲ್ಲಿ ಒಟ್ಟು ಐದು ಮಂದಿ ಭಾಗಿಯಾಗಿದ್ದರು. ಈ ಪೈಕಿ ಇಬ್ಬರು ಮೊದಲೇ ಎನ್‌ಕೌಂಟರ್‌ನಲ್ಲಿ ಜೀವ ಕಳೆದುಕೊಂಡಿದ್ದರು ಎಂದು ಜಮ್ಮು ಮತ್ತು ಕಾಶ್ಮೀರ ಸಿಐಡಿ ಮುಖ್ಯಸ್ಥ ಆರ್‌.ಆರ್‌.ಸವೀನ್‌ ತಿಳಿಸಿದ್ದಾರೆ.

ಸದ್ಯ ಬಂಧಿತರನ್ನು ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: Technical issue: ರನ್ ವೇಯಲ್ಲೇ ನಿಂತ C-17 Globemaster, ವಿಮಾನ ಸಂಚಾರದಲ್ಲಿ ವ್ಯತ್ಯಯ

Advertisement
Advertisement

Udayavani is now on Telegram. Click here to join our channel and stay updated with the latest news.

Next