Advertisement

ದುಬಾೖಯಿಂದ ನಾಪತ್ತೆಯಾದ ಕಾಸರಗೋಡಿನ 2 ಕುಟುಂಬ

08:56 AM Jun 28, 2018 | Harsha Rao |

ಕಾಸರಗೋಡು: ದುಬಾೖಗೆ ಹೋಗಿದ್ದ ಕಾಸರಗೋಡಿನ ಎರಡು ಕುಟುಂಬಗಳಿಗೆ ಸೇರಿದ 10 ಮಂದಿ ನಿಗೂಢವಾಗಿ ನಾಪತ್ತೆಯಾಗಿದ್ದು, ಭಾರೀ ಆತಂಕ ಮೂಡಿದೆ. ನಾಪತ್ತೆಯಾಗಿರುವವರಲ್ಲಿ 6 ಮಕ್ಕಳು ಸೇರಿದ್ದಾರೆ. 

Advertisement

ನಾಪತ್ತೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಎನ್‌ಐಎ(ರಾಷ್ಟ್ರೀಯ ತನಿಖಾದಳ)ಯಿಂದಲೂ ತನಿಖೆ ನಡೆಸಲಾಗುತ್ತಿದೆ.
ಚೆಮ್ನಾಡು ಸಮೀಪದ ಮುಂಡಾಂಕುಳದ ಕುನ್ನಿಲ್‌ ಹೌಸ್‌ನ ಎ.ಅಬ್ದುಲ್‌ ಹಮೀದ್‌ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತನ್ನ ಕುಟುಂಬದ ಆರು ಮಂದಿ ಮತ್ತು ಅಣಂಗೂರಿನ ಕುಟುಂಬವೊಂದರ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಅಬ್ದುಲ್‌ ಹಮೀದ್‌ ಅವರ ಪುತ್ರಿ ನಸೀರಾ (25), ಆಕೆಯ ಪತಿ ಮೊಗ್ರಾಲ್‌ನ ಸವಾದ್‌ (35), ಈ ದಂಪತಿಯ ಮಕ್ಕಳಾದ ಮುಸ್ಬಾ (6), ಮರ್ಜಾನ (3), ಮುಖಾಬಿಲ್‌ (11 ತಿಂಗಳು) ಮತ್ತು ಸವಾದ್‌ರ ದ್ವಿತೀಯ ಪತ್ನಿ, ಮೂಲತಃ ಪಾಲಾ^ಟ್‌ ನಿವಾಸಿ ರೆಹಮ್ಮಾತ್‌ (25) ಜೂ. 15ರಿಂದ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಮತ್ತೂಂದು ಪ್ರಕರಣ
 ಕಾಸರಗೋಡು ಸಮೀಪದ ಅಣಂಗೂರು ಕೊಲ್ಲಂಪಾಡಿ ನಿವಾಸಿಗಳಾದ ಅನ್ವರ್‌, ಅವರ ಪತ್ನಿ ಮೂರು ತಿಂಗಳ ಗರ್ಭಿಣಿ ಝೀನತ್‌ ಹಾಗೂ ಇಬ್ಬರು ಮಕ್ಕಳು ದುಬಾೖಯಲ್ಲಿ ಕಾಣೆಯಾಗಿರುವುದಾಗಿ ಮಾಹಿತಿ ದೊರಕಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅಬ್ದುಲ್‌ ಹಮೀದ್‌ ಉಲ್ಲೇಖೀಸಿದ್ದಾರೆ.

ಕೊಲ್ಲಂಪಾಡಿಯ ನಾಲ್ವರು ನಾಪತ್ತೆಯಾದ ಕುರಿತು ಅವರ ಸಂಬಂಧಿಕರು ಇಲ್ಲಿಯವರೆಗೆ ದೂರು ನೀಡಿಲ್ಲ. ಒಂದು ವೇಳೆ ದೂರು ಕೊಟ್ಟಲ್ಲಿ ಆ ಬಗ್ಗೆಯೂ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. 

Advertisement

ನಾಪತ್ತೆಯಾದ ಸವಾದ್‌ ಅಲ್ಲಿ ಮೊಬೈಲ್‌ ಫೋನ್‌, ಸುಗಂಧ ದ್ರವ್ಯದ ಅಂಗಡಿ ನಡೆಸುತ್ತಿದ್ದರು. ಅವರನ್ನು ಕಾಣಲೆಂದು ಪತ್ನಿ ಹಾಗೂ ಮಕ್ಕಳು ಇತ್ತೀಚೆಗಷ್ಟೇ ಅಲ್ಲಿಗೆ ತೆರಳಿದ್ದರು.

ಈ ಕುಟುಂಬ ಜೂ. 15ರಿಂದ ದುಬಾೖಯಿಂದ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದ್ದರೂ ಅವರು ಕೆಲವು ತಿಂಗಳುಗಳ ಹಿಂದೆಯೇ ಅಲ್ಲಿಂದ ನಾಪತ್ತೆಯಾಗಿದ್ದಾರೆಂಬ ಗುಪ್ತ ಮಾಹಿತಿ ಪೊಲೀಸರಿಗೆ ಮೊದಲೇ ಲಭಿಸಿತ್ತು ಎನ್ನಲಾಗಿದೆ. ಆದರೆ ಮನೆಯವರು ದೂರು ನೀಡದ ಕಾರಣ ಕೇಸು ದಾಖಲಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ.

2 ವರ್ಷ ಹಿಂದೆ 17 ಮಂದಿ ನಾಪತ್ತೆಯಾಗಿದ್ದರು 
ಕಾಸರಗೋಡು ಜಿಲ್ಲೆಯ ಪಡನ್ನ, ತೃಕ್ಕರಿಪುರ ಮುಂತಾದ ಕಡೆಗಳಿಂದ ಸುಮಾರು ಎರಡು ವರ್ಷಗಳ ಹಿಂದೆ ಮಕ್ಕಳು, ಮಹಿಳೆಯರು ಸಹಿತ 17 ಮಂದಿ ನಾಪತ್ತೆಯಾಗಿದ್ದರು. ಅವರು ಇರಾಕ್‌, ಸಿರಿಯಾ ಹಾಗೂ ಅಫ್ಘಾನಿಸ್ಥಾನದಲ್ಲಿರುವ ಉಗ್ರ ಸಂಘಟನೆ ಐಸಿಸ್‌ಗೆ ಸೇರಿರುವುದಾಗಿ ಎನ್‌ಐಎಗೆ ಸ್ಪಷ್ಟ ಮಾಹಿತಿ ದೊರಕಿತ್ತು. ಅವರಲ್ಲಿ ಕೆಲವು ಮಂದಿ ಅಮೆರಿಕ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿಯೂ ಎನ್‌ಐಎಗೆ ಮಾಹಿತಿ ಸಿಕ್ಕಿತ್ತು. ಆದರೆ ಅದನ್ನು ಈ ತನಕ ದೃಢೀಕರಿಸಲಿಲ್ಲ. ಅಂತಹ ಆತಂಕದ ನಡುವೆಯೇ ಕಾಸರಗೋಡಿನ 10 ಮಂದಿ ನಾಪತ್ತೆಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.

ಸಂಘಟನೆ ಸಂಪರ್ಕ? 
ನಾಪತ್ತೆಯಾದವರು ಯಾವುದಾದರೂ ಸಂಘಟನೆಗೆ ಸೇರಿದ್ದಾರೆಯೇ ಎಂಬ ಶಂಕೆ ಬಲವಾಗಿ ಉಂಟಾಗಿದೆ. ಇದನ್ನು ಪೊಲೀಸರು ಕೂಡ ಅಲ್ಲಗಳೆ ಯುವುದಿಲ್ಲ. ಆದ್ದರಿಂದ ಎನ್‌ಐಎ ಮತ್ತು ಕೇಂದ್ರ ಗುಪ್ತಚರ ವಿಭಾಗವೂ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ.

ಯೆಮನ್‌ಗೆ ಪಯಣ?
ಮತ್ತೂಂದೆಡೆ ಆರು ಮಂದಿ ನಾಪತ್ತೆ ಯಾಗಿರುವ ಬಗ್ಗೆ ದೂರು ದೊರಕಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿ ದ್ದಾರೆ. ನಾಪತ್ತೆಯಾದವರು ಕೊಲ್ಲಿ ರಾಷ್ಟ್ರ ವಾದ ಯೆಮನ್‌ನ ದಮ್ಮಾದಲ್ಲಿ ಇರುವುದಾಗಿ ಮನೆಯವರಿಗೆ ಬುಧವಾರ ಬೆಳಗ್ಗೆ ಮಾಹಿತಿ ಲಭಿಸಿದೆ. ಸವಾದ್‌ ಮೊಬೈಲ್‌ ವಾçಸ್‌ ಮೆಸೇಜ್‌ ಮೂಲಕ ಈ ವಿಷಯವನ್ನು ಊರಲ್ಲಿರುವ ಸಂಬಂಧಿಕರಿಗೆ ತಿಳಿಸಿದ್ದಾರೆ. ಆದರೆ ದುಬಾೖಯಿಂದ ಯೆಮನ್‌ಗೆ ಏಕೆ ಹೋಗಿದ್ದಾರೆ ಎಂಬುದೇ ಮನೆಯವರಿಗೆ ಸಂಶಯ.

Advertisement

Udayavani is now on Telegram. Click here to join our channel and stay updated with the latest news.

Next