ಅಶ್ವಘೋಷ ಥಿಯೇಟರ್ ಟ್ರಸ್ಟ್‌ನವರಿಂದ, “ಬೀದಿ ಬಿಂಬ ರಂಗದ ತುಂಬ’ ಹಾಗೂ “ಪುರಹರ’ ಎಂಬ ಎರಡು ನಾಟಕಗಳು ಪ್ರದರ್ಶನ ಕಾಣುತ್ತಿವೆ. “ಬೀದಿ ಬಿಂಬ ರಂಗದ ತುಂಬ’ ನಾಟಕ ಹಾಸ್ಯ ಪ್ರಧಾನವಾದರೆ, “ಪುರಹರ’ ನಾಟಕ ಶೈವ ಮತ್ತು ವೈಷ್ಣವ ಸಮುದಾಯಗಳ ನಡುವಿನ ಅಂತರದ ಕಥೆಯಾಗಿದೆ. ಒಂದು ನಿಮ್ಮನ್ನು ನಕ್ಕು ನಲಿಸಿದರೆ, ಇನ್ನೊಂದು ನಾಟಕ ಗಂಭೀರ ಚಿಂತನೆಗೆ ತಳ್ಳುತ್ತದೆ. ಈ ನಾಟಕಗಳನ್ನು ಕರಣಂ ಪವನ್ ಪ್ರಸಾದ್ ಅವರು ರಚಿಸಿದ್ದು, ನಂದೀಶ್ ದೇವ್ ಹಾಗೂ ದಿಲೀಪ್ ಬಿ.ಎಂ ನಿರ್ದೇಶಿಸಿದ್ದಾರೆ. ಟಿಕೆಟ್‌ಗಳು ಬುಕ್‌ವೆುç ಶೋನಲ್ಲಿ ಲಭ್ಯ. ಎರಡೂ ನಾಟಕಗಳ ಟಿಕೆಟ್ ಕೊಂಡರೆ ರಿಯಾಯಿತಿ ಇದೆ.
ಎಲ್ಲಿ?: ಕೆ.ಎಚ್ ಕಲಾಸೌಧ, ಹನುಮಂತನಗರ
ಯಾವಾಗ?: ಮಾ.11, ಭಾನುವಾರ ಸಂಜೆ 4.30 ಮತ್ತು 6.30
ಪ್ರವೇಶ ದರ: 100 ರೂ
ಕೆ.ವಿ.ಎನ್. 60 ಸಂಸ್ಕೃತಿ ಸಂಭ್ರಮ
ನಾಲ್ಕು ದಶಕಗಳಿಂದ ಕನ್ನಡ ರಂಗಭೂಮಿಯಲ್ಲಿ ನಟರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಕೆ.ವಿ.ನಾಗರಾಜ ಮೂರ್ತಿಯವರ 60ನೇ ಹುಟ್ಟುಹಬ್ಬದ ಪ್ರಯುಕ್ತ “ಕೆ.ವಿ.ಎನ್. 60 ಸಂಸ್ಕೃತಿ ಸಂಭ್ರಮ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಸವ ಇಂಟರ್‌ನ್ಯಾಷನಲ್ ಫೌಂಡೇಶನ್, ಪ್ರಯೋಗ ರಂಗ, ವಿರೂಪಾಕ್ಷ ಟ್ರಸ್ಟ್ ಹಾಗೂ ಕೃಷ್ಣ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ನಡೆಯುತ್ತಿದೆ. 3.30ಕ್ಕೆ ನಡೆಯುವ ವಿಚಾರ ಸಂಕಿರಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲರು ಉದ್ಘಾಟಿಸಲಿದ್ದು, ಖ್ಯಾತ ಕವಿ ಜರಗನಹಳ್ಳಿ ಶಿವಶಂಕರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಚಲನಚಿತ್ರ ನಿರ್ದೇಶಕ ಬಿ.ಸುರೇಶ್ ಹಾಗೂ ಡಾ. ನಾಗೇಶ್ ವಿ.ಬೆಟ್ಟಕೋಟೆ ಪಾಲ್ಗೊಳ್ಳಲಿದ್ದಾರೆ. ಸಂಜೆ 6.30ಕ್ಕೆ ಕೆ.ವಿ.ಎನ್ ಅವರ ಅಭಿನಂದನೆ ಸಮಾರಂಭ ಹಾಗೂ ಅಭಿನಂದನ ಗ್ರಂಥ ಬಿಡುಗಡೆಯಾಗಲಿದೆ.
ಬಸವ ಇಂಟರ್‌ನ್ಯಾಷನಲ್ ಫೌಂಡೇಶನ್‌ನ ಅಧ್ಯಕ್ಷ ಎಸ್. ಮಹದೇವಯ್ಯ ಅಧ್ಯಕ್ಷತೆ ವಹಿಸಲಿದ್ದು, ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಯಶವಂತಪುರದ ಶಾಸಕರಾದ ಎಸ್.ಟಿ. ಸೋಮಶೇಖರ್ ಅಭಿನಂದನೆ ಸಮರ್ಪಿಸಲಿದ್ದಾರೆ. ಮುಖ್ಯಮಂತ್ರಿ ಚಂದ್ರು, ಟಿ.ಎನ್. ಸೀತಾರಾಂ, ಡಾ. ಬಸವರಾಜ ಸಾದರ, ಶೈಲಜಾ ವಿ. ಸೋಮಣ್ಣ, ಎಂ. ಸದಾಶಿವಪ್ಪ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಎಲ್ಲಿ?: ಅಲ್ಲಮ ಕಲಾಶಾಲೆ, ಕನ್ನಲ್ಲಿ ಯಾವಾಗ?: ಮಾ.11, ಭಾನುವಾರ ಮ.3