Advertisement

Bengaluru: ಅನಧಿಕೃತ ಕೇಬಲ್‌ ತೆರವಿಗೆ ಬೆಸ್ಕಾಂನಿಂದ 2 ದಿನ ಗಡುವು

11:07 AM Jul 07, 2024 | Team Udayavani |

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್‌ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಎಲ್ಲಾ ಓಎಫ್‌ಸಿ ಕೇಬಲ್‌, ಡಾಟಾ ಕೇಬಲ್‌ ಹಾಗೂ ಡಿಶ್‌ ಕೇಬಲ್‌ಗ‌ಳನ್ನು ಜುಲೈ 8ರ ಒಳಗೆ ತೆರವುಗೊಳಿಸುವಂತೆ ಬೆಸ್ಕಾಂ ಗಡುವು ನೀಡಿದೆ. ಒಂದು ವೇಳೆ ಅವಘಡ ಸಂಭವಿಸಿದ್ದಲ್ಲಿ ಆಯಾ ಕೇಬಲ್‌ ಸಂಸ್ಥೆಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.

Advertisement

ವಿದ್ಯುತ್‌ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಓಎಫ್‌ ಸಿ, ಕೇಬಲ್‌, ಡಾಟಾ ಕೇಬಲ್‌ ಹಾಗೂ ಡಿಶ್‌ ಕೇಬಲ್‌ಗ‌ಳನ್ನು ತೆರವುಗೊಳಿಸುವ ಸಂಬಂಧ ಬೆಸ್ಕಾಂ 2023ರ ಆಗಸ್ಟ್‌ ತಿಂಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿತ್ತು.

ಅನಧಿಕೃತ ಡಾಟಾ ಕೇಬಲ್‌, ಓಎಫ್‌ಸಿ ಕೇಬಲ್‌ ಹಾಗೂ ಡಿಶ್‌ ಕೇಬಲ್‌ ಗಳನ್ನು ತೆರವುಗೊಳಿಸಲು ಒಂದು ವಾರಗಳ ಗಡುವು ವಿಧಿಸಿತ್ತು. ಬೆಸ್ಕಾಂನ ವಿಶೇಷ ಕಾರ್ಯಾಚರಣೆ ಹೊರತಾಗಿಯೂ ಅನಧಿಕೃತ ಕೇಬಲ್‌ ಗಳನ್ನು ವಿದ್ಯುತ್‌ ಕಂಬಗಳ ಮೇಲೆ ಡಿಶ್‌ ಕೇಬಲ್‌ ಹಾಗೂ ಡಾಟಾ ಕೇಬಲ್‌ ಗಳನ್ನು ಅಳವಡಿಸಲಾಗುತ್ತಿದೆ. ಬೆಸ್ಕಾಂ ವಿದ್ಯುತ್‌ ಕಂಬಗಳಲ್ಲಿ ಹಾಕಿರುವ ಓಎಫ್‌ಸಿ, ಇಂಟರ್‌ನೆಟ್‌ ಡಾಟಾ ಕೇಬಲ್‌ ಹಾಗೂ ಡಿಶ್‌ ಕೇಬಲ್‌ಗ‌ಳನ್ನು ಸೋಮವಾರದೊಳಗೆ ತೆರವುಗೊಳಿಸುವಂತೆ ಖಡಕ್‌ ಸೂಚನೆ ನೀಡಿದೆ.

ಒಂದು ವೇಳೆ ಇಂಟರ್‌ ನೆಟ್‌ ಕಂಪನಿಗಳು ಹಾಗೂ ಡಿಶ್‌ ಕೇಬಲ್‌ ಅಪರೇಟರ್‌ಗಳು ತೆರವುಗೊಳಿಸದೇ ಇದ್ದಲ್ಲಿ ಬೆಸ್ಕಾಂ ಯಾವುದೇ ಮುನ್ಸೂಚನೆ ನೀಡದೆ  ತೆರವುಗೊಳಿಸಿ, ತಪ್ಪಿತಸ್ಥರ  ವಿರುದ್ಧ ಕಾನೂನು ರೀತ್ಯ ಕ್ರಮಕೈಗೊಳ್ಳಲಿದೆ ಎಂದು ಬೆಸ್ಕಾಂನ ಹಿರಿಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅನಧಿಕೃತ ಕೇಬಲ್‌ ಗಳಿಂದ ವಿದ್ಯುತ್‌ ಅವಘಡಗಳು ಸಂಭವಿಸಿದ್ದಲ್ಲಿ ಸಂಬಂಧಿಸಿದ , ಓಎಫ್‌ಸಿ, ಡಾಟಾ ಕೇಬಲ್‌ , ಡಿಶ್‌ ಕೇಬಲ್‌ ಅಪರೇಟರ್‌ಗಳು ಅಥವಾ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next