Advertisement
ಉದಾಹರಣೆಗೆ, ಶನಿವಾರ “ಜೂನಿಯರ್’ ಕೋಣಗಳ ಸ್ಪರ್ಧೆಗಳನ್ನು ನಡೆಸಿದರೆ, ಮರುದಿನ “ಸೀನಿಯರ್’ ವಿಭಾಗದ ಕಂಬಳ ನಡೆಸಬಹುದು. ಇದು ಸಾಧ್ಯವಾದರೆ ಒಂದು ವಿಭಾಗವನ್ನು 12 ಗಂಟೆಯ ಒಳಗೆ ಮುಗಿಸಲು ಸಾಧ್ಯವಾಗಲಿದೆ. ಈ ಮೂಲಕ 2 ದಿನವೂ ಜನರು ಪಾಲ್ಗೊಳ್ಳಬಹುದು. ಶನಿವಾರದ ರಾತ್ರಿ ಕಂಬಳದಲ್ಲಿ ತೊಡಗಿಸಿದವರಿಗೆ ವಿಶ್ರಾಂತಿ ದೊರೆಯಲಿದೆ. ಜೂನಿಯರ್ ಕೋಣಗಳನ್ನು ತರುವ ದಿನ ಸೀನಿಯರ್ ಕೋಣಗಳನ್ನು ತರಬೇಕಾಗಿಲ್ಲ. ಇದರಿಂದ ಕೋಣಗಳ ಪರಿಚಾರಕರು ಹಾಗೂ ಕೋಣಗಳಿಗೂ ಅನುಕೂಲವಾಗಲಿದೆ.
ಒಂದು ವೇಳೆ ಈಗ ಇರುವ ಪ್ರಕಾರವೇ ಕಂಬಳ ನಡೆಸುವುದಾದರೆ ಬಹುತೇಕ ಕಂಬಳಗಳಿಗೆ 24 ಗಂಟೆ ಸಮಯ ಸಾಕಾಗುವುದಿಲ್ಲ. ಆದ್ದರಿಂದ ಸಮಯದ ಮಿತಿಯನ್ನು 30 ಗಂಟೆಗಳಿಗೆ ಹೆಚ್ಚಿಸಿದರೆ ಹೆಚ್ಚು ಅನುಕೂಲ ಎಂಬ ಆಗ್ರಹವೂ ಇದೆ.
Related Articles
ಕಂಬಳದಲ್ಲಿ ನಿಯಮಾವಳಿ ಪಾಲನೆಗೆ ನಿಗಾ ವಹಿಸಲು “ಟೀಮ್ ಲೀಡರ್’ ನೇಮಿಸಲಾಗಿದೆ. ಕೋಣ ಗಳನ್ನು ಬಿಡುವುದು, ಓಟಗಾ ರರು, ತೀರ್ಪುಗಾರರು, ಕಂಬಳ ಯಜ ಮಾನರು ಸಹಿತ ವಿವಿಧ ವಿಭಾಗಗಳಿಗೆ ಟೀಮ್ ಲೀಡರ್ ನೇಮಿಸಲಾಗಿದೆ. ಕಂಬಳ ಆರಂಭವಾಗುವ ಮುನ್ನ ಈ ನಾಯಕರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗುತ್ತದೆ.
Advertisement
ನಿಯಮ ಮೀರಿದರೆ “ಕಂಬಳ’ಕ್ಕೆ ಅಪಾಯ!ಕಂಬಳದಲ್ಲಿ ನಿಯಮಾವಳಿ ಪಾಲನೆಯಾಗದೆ ಇದ್ದರೆ ಕರಾವಳಿಯ ಈ ಜಾನಪದ ಕ್ರೀಡೆಗೆ ಮತ್ತೆ ಅಪಾಯ ಎದುರಾಗುವ ಸಾಧ್ಯತೆಯಿದೆ. ನ್ಯಾಯಾಲಯ ತಿಳಿಸಿದ ನಿಯಮಾವಳಿಗಳನ್ನು ಪಾಲಿಸುವಂತೆ ಜಿಲ್ಲಾಡಳಿತ, ಕಂಬಳ ಸಮಿತಿ ಈಗಾಗಲೇ ವಿವರವಾಗಿ ಚರ್ಚಿಸಿದೆ. ಕಂಬಳಕ್ಕೆ ಸಂಬಂಧಿಸಿದ ಎಲ್ಲರೂ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚನೆ ರವಾನಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ತಹಶೀಲ್ದಾರ್-ಪೊಲೀಸ್ ಇಲಾಖೆ ನಿಗಾದೊಂದಿಗೆ ಕಂಬಳ ನಡೆಸುವ ಪರಿಸ್ಥಿತಿ ಎದುರಾಗಬಾರದು ಎಂಬ ಮಾತೂ ಕೇಳಿಬರುತ್ತಿದೆ. ಹೊಕ್ಕಾಡಿಗೋಳಿಯಲ್ಲಿ ವಿಳಂಬ: ವರದಿ ಕೇಳಿದ ಕಂಬಳ ಸಮಿತಿ
ಹೊಕ್ಕಾಡಿಗೋಳಿ ಕಂಬಳವು ನಿಗದಿತ ಸಮಯಯಲ್ಲಿ ಮುಗಿದಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ದ.ಕ. ಜಿಲ್ಲಾ ಕಂಬಳ ಸಮಿತಿಯು “ಕಂಬಳ ತಡವಾಗಲು ಎದುರಾದ ಕಾರಣವೇನು?’ ಎಂಬುದರ ಬಗ್ಗೆ ವಿವರವಾದ ವರದಿ ನೀಡುವಂತೆ ಸೂಚಿಸಿದೆ. ಚರ್ಚಿಸಿ ತೀರ್ಮಾನ
ತಿರುವೈಲುಗುತ್ತು, ಜಪ್ಪಿನಮೊಗರು ಸಹಿತ ಕೆಲವು ಕಂಬಳ ಕಳೆದ ವರ್ಷ 22 ಗಂಟೆಗಳೊಳಗೆ ಮುಗಿದಿತ್ತು. ಹಾಗಾಗಿ ಕಂಬಳವನ್ನು ನಿಗದಿತ ಸಮಯದೊಳಗೆ ಮುಗಿಸಲು ಸಾಧ್ಯವೂ ಇದೆ. ಆದರೂ ಕೆಲವು ಕಂಬಳ ತಡವಾಗುತ್ತಿದೆ. ಈ ಬಗ್ಗೆ ಗಂಭೀರವಾಗಿ ಚರ್ಚಿಸಲಾಗುತ್ತಿದೆ. ಇದರ ಜತೆಗೆ ಈಗಾಗಲೇ ಕೇಳಿ ಬಂದಿರುವ ಜೂನಿಯರ್ ಒಂದು ದಿನ ಹಾಗೂ ಸೀನಿಯರ್ ಮತ್ತೂಂದು ದಿನ ಎಂಬ ಸ್ವರೂಪದಲ್ಲಿ ಕಂಬಳ ನಡೆಸುವ ಚರ್ಚೆ ಬಗ್ಗೆ ಸಮಿತಿಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
– ದೇವೀಪ್ರಸಾದ್ ಶೆಟ್ಟಿ ಬೆಳಪು, ಅಧ್ಯಕ್ಷರು, ಜಿಲ್ಲಾ ಕಂಬಳ ಸಮಿತಿ