Advertisement

ಜಮ್ಮು : ಹೆರಾಯಿನ್‌ ಕಳ್ಳಸಾಗಣೆ; ಇಬ್ಬರು ಪೊಲೀಸರ ಬಂಧನ

04:55 PM Nov 21, 2018 | Team Udayavani |

ಜಮ್ಮು : ಹದಿನಾಲ್ಕು ಗ್ರಾಂ ಹೆರಾಯಿನ್‌ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಪೊಲೀಸರನ್ನು ಇಂದು ಬುಧವಾರ ಬಂಧಿಸಲಾಗಿದೆ.

Advertisement

ಕರಣ್‌ ಬಾಗ್‌ ಪ್ರದೇಶದಲ್ಲಿ ಇಬ್ಬರು ಪಾದಚಾರಿಗಳಿಗೆ ಮುಖಾಮುಖೀಯಾದ ಪೊಲೀಸ್‌ ತಂಡಕ್ಕೆ ಶಂಕಿತರಲ್ಲಿ ಹೆರಾಯಿನ್‌ ಇರುವುದು ಪತ್ತೆಯಾಯಿತು. ಒಡನೆಯೇ ಅವರನ್ನು ಬಂಧಿಸಲಾಯಿತು. 

ಬಂಧಿತರು ಪೊಲೀಸರೆಂಬುದು ಅನಂತರ ಗೊತ್ತಾಯಿತು. ಇವರನ್ನು ಕಾನ್‌ಸ್ಟೆಬಲ್‌ ನಯೀಮ್‌ ಮೊಹಮ್ಮದ್‌ ಮತ್ತು ವಿಶೇಷ ಪೊಲೀಸ್‌ ಅಧಿಕಾರಿ (ಎಸ್‌ಪಿಓ) ಆಮೀರ್‌ ಅಸ್ಲಾಂ ಎಂದು ಗುರುತಿಸಲಾಯಿತು. ಇವರಿಬ್ಬರ ವಿರುದ್ಧವೂ ಕೇಸು ದಾಖಲಾಗಿದ್ದು  ತನಿಖೆ ನಡೆಯುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next