ಹೊಸದಿಲ್ಲಿ: ದೇಶದಲ್ಲಿ ಮೊದಲ ಬಾರಿಗೆ ಎಂಬಂತೆ ಎರಡು ಒಮಿಕ್ರಾನ್ ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ, ಸಾರ್ವಜನಿಕರಿಗೆ ಕೆಲವಾರು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಹೊಸದಿಲ್ಲಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್, “ಒಮಿಕ್ರಾನ್ ವೈರಾಣು, ಕೊರೊನಾದ ಡೆಲ್ಟಾ ಮಾದರಿಗಿಂತ ಐದು ಪಟ್ಟು ಹೆಚ್ಚು ವೇಗವಾಗಿ ಸೋಂಕು ಉಂಟು ಮಾಡಬಲ್ಲದು ಹಾಗೂ ಅತೀ ವೇಗವಾಗಿ ಹರಡಬಲ್ಲದು. ಹಾಗಾಗಿ ಸಾರ್ವಜನಿಕರು ಕೇಂದ್ರ ಸರಕಾರ ಈ ಹಿಂದೆ ಬಿಡುಗಡೆ ಮಾಡಿರುವ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು” ಎಂದು ಆಗ್ರಹಿಸಿದರು.
“ಎಲ್ಲರೂ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಬೇಕು. ಜನರು ಇರುವ ಕಡೆ ಸಾಮಾಜಿಕ ಅಂತರ ಪಾಲಿಸಬೇಕು. ಅಗತ್ಯ ಕೆಲಸಗಳಿಗೆ ಮಾತ್ರ ಮನೆಗಳಿಂದ ತೆರಳಬೇಕು’ ಎಂದು ಅವರು ಜನರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ:ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಅಮಾನತು
ವೈದ್ಯಕೀಯ ಸಹಾಯಕ್ಕೆ ಸಿದ್ಧ: ಒಮಿಕ್ರಾನ್ ಬಾಧೆಗೆ ತುತ್ತಾಗಿರುವ ಆಫ್ರಿಕಾದ ಯಾವುದೇ ರಾಷ್ಟ್ರಗಳಿಗೆ ಜೀವ ಸಂರಕ್ಷಣ ಸಾಧನಗಳು ಸೇರಿದಂತೆ ಇನ್ನಿತರ ವೈದ್ಯಕೀಯ ಸಲಕರಣೆ ಗಳನ್ನು ಸಹಾಯ ರೂಪವಾಗಿ ರವಾನಿಸಲು ಭಾರತ ಸಿದ್ಧವಿದೆ ಎಂದು ವಿದೇಶಾಂಗ ಇಲಾ ಖೆಯ ವಕ್ತಾರ ಅರಿಂದಮ್ ಬಗೀಚಿ ತಿಳಿಸಿದ್ದಾರೆ. ಇದಲ್ಲದೆ ಒಮಿಕ್ರಾನ್ ಕುರಿತ ಸಂಶೋಧನೆ ವಿಚಾರದಲ್ಲಿಯೂ ನಾವು ಆಫ್ರಿ ಕಾದ ರಾಷ್ಟ್ರಗಳೊಂದಿಗೆ ಸಹಯೋಗ ನೀಡಲಿ ದ್ದೇವೆ ಎಂದು ಅವರು ಹೇಳಿದ್ದಾರೆ.