ಪಾಟ್ನಾ: ಬಿಹಾರದಲ್ಲಿ ಸೇತುವೆ ಕುಸಿತದ ಪ್ರಕರಣಗಳು ಸದ್ಯ ನಿಲ್ಲುವ ಹಾಗೆ ಕಾಣುತ್ತಿಲ್ಲ ಇಂದು ಮತ್ತೆ ಹಳೆಯ ಸೇತುವೆಯೊಂದು ಕುಸಿದಿದ್ದು ಇದರೊಂದಿಗೆ ಕಳೆದ ಹದಿನೈದು ದಿನಗಳಲ್ಲಿ ರಾಜ್ಯದಲ್ಲಿ ಸಂಭವಿಸಿದ ಏಳನೇ ಘಟನೆಯಾಗಿದೆ.
ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಹಳೆಯ ಸೇತುವೆ ಕುಸಿದು ಬಿದ್ದಿದೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಮಾರು 35 ವರ್ಷಗಳಷ್ಟು ಹಳೆಯದಾದ ಎರಡು ಸೇತುವೆಗಳು ಜಿಲ್ಲೆಯ ಡಿಯೋರಿಯಾ ಪ್ರದೇಶದಲ್ಲಿದ್ದು ಇದೀಗ ಎರಡು ಸೇತುವೆಗಳು ಕುಸಿದಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ಸೇತುವೆ ಕುಸಿತದಿಂದ ವಾಹನ ಸಂಚಾರ ಹಾಗೂ ಜನ ಸಂಚಾರಕ್ಕೆ ಅಡ್ಡಿಯಾಗಿದೆ.
ಕುಸಿದಿರುವ ಎರಡು ಸೇತುವೆಗಳ ಪೈಕಿ ಒಂದನ್ನು 1998ರಲ್ಲಿ ಆಗಿನ ಸಂಸದ ಪ್ರಭುನಾಥ್ ಸಿಂಗ್ ಅವರ ನಿಧಿಯಿಂದ 6 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದು ಸೇತುವೆಯನ್ನು 2004ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ಈ ಸೇತುವೆಗಳು ನಿರ್ಮಾಣವಾದಂದಿನಿಂದ ಇಂದಿನವರೆಗೂ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ ಎನ್ನಲಾಗಿದೆ.
ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಮತ್ತು ಕಿಶನ್‌ಗಂಜ್‌ನಂತಹ ಜಿಲ್ಲೆಗಳಲ್ಲಿ ಇತ್ತೀಚೆಗೆ ಇದೇ ರೀತಿಯ ಹಲವು ಘಟನೆಗಳು ವರದಿಯಾಗಿವೆ ಅಲ್ಲದೆ ಸೇತುವೆ ಕುಸಿತ ಘಟನೆಗಳ ತನಿಖೆಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಬಿಹಾರ ಸರಕಾರಕ್ಕೆ ಆಗ್ರಹ ಮಾಡಿದ್ದಾರೆ.
ಇದನ್ನೂ ಓದಿ: Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್ ನಟ ಫವಾದ್ ಖಾನ್ ಕಂಬ್ಯಾಕ್