Advertisement

ಸಿಯಾಚಿನ್‌ನಲ್ಲಿ ಮತ್ತೆ ಹಿಮಪಾತ: ಇಬ್ಬರು ಯೋಧರು ಹುತಾತ್ಮ

08:54 AM Dec 01, 2019 | Team Udayavani |

ಜಮ್ಮು: ಲಡಾಖ್‌ನಲ್ಲಿರುವ ಜಗತ್ತಿನ ಅತೀ ಎತ್ತರದ ಸೇನಾ ನೆಲೆಯಾದ ಸಿಯಾಚಿನ್‌ನಲ್ಲಿ ಶನಿವಾರ ಮತ್ತೆ ಹಿಮಪಾತ ಸಂಭವಿಸಿದ್ದು, ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇತ್ತೀಚೆಗೆ ಸಂಭವಿಸಿದ್ದ ಹಿಮಪಾತದಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು.

Advertisement

ಸಮುದ್ರ ಮಟ್ಟಕ್ಕಿಂತ ಸುಮಾರು 18,000 ಅಡಿ ಎತ್ತರದಲ್ಲಿ ಇರುವ ಸಿಯಾಚಿನ್‌ನ ದಕ್ಷಿಣ ವಲಯದಲ್ಲಿ ಯೋಧರು ಎಂದಿನಂತೆ ಗಸ್ತು ತಿರುಗುತ್ತಿದ್ದಾಗ ಈ ಹಿಮಪಾತ ಸಂಭವಿಸಿದೆ. ತತ್‌ಕ್ಷಣವೇ ಸ್ಥಳಕ್ಕೆ ತೆರಳಿದ ಹಿಮಪಾತ ರಕ್ಷಣಾ ಕಾರ್ಯಪಡೆ (ಎಆರ್‌ಟಿ) ತಂಡದ ಸಿಬಂದಿ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅಗಾಧ ಹಿಮದ ಅಡಿ ಸಿಲುಕಿದ್ದ ಯೋಧರನ್ನು ಹೊರತೆಗೆದರು. ಅನಂತರ ಹೆಲಿಕಾಪ್ಟರ್‌ಗಳ ಮೂಲಕ ಅವರನ್ನು ಶ್ರೀಗನರದ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಲ್ಲಿ ಚಿಕಿತ್ಸೆ ಫ‌ಲಕಾರಿಯಾಗದೆ ಇಬ್ಬರು ಯೋಧರು ಕೊನೆಯುಸಿರೆಳೆದರು.

 

Advertisement

Udayavani is now on Telegram. Click here to join our channel and stay updated with the latest news.

Next