ರಾಮನಗರ: ತಾಲೂಕಿನಲ್ಲಿ ಆ್ಯಂಬುಲೆನ್ಸ್ ಕೊರತೆಇರುವ ಬಗ್ಗೆ ಮಾಹಿತಿ ಸಿಕ್ಕ ಕ್ಷಣದಲ್ಲೇ ಎರಡುಆ್ಯಂಬುಲೆನ್ಸ್‌ಗಳನ್ನು ಸೇವೆಗೆ ಕಳುಹಿಸುವುದಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ಮಾಜಿ ಸಿಎಂಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.ರಾಮನಗರ ಜಿಲ್ಲೆಯ ಕೋವಿಡ್ ಸೋಂಕುಸ್ಥಿತಿಗತಿಗಳ ಕುರಿತು ಜಿಲ್ಲೆಯ ನಾಲ್ವರು ತಹಶೀಲ್ದಾರ್‌ಗಳೊಂದಿಗೆ ಶನಿವಾರ ನಡೆಸಿದ ವಚ್ಯುìಯಲ್ ಸಭೆಯಲ್ಲಿ ಮಾತನಾಡಿದರು.
ರಾಮನಗರ ತಾಲೂಕುತಹಶೀಲ್ದಾರ್ ನರಸಿಂಹ ಮೂರ್ತಿ ಆ್ಯಂಬುಲೆನ್ಸ್‌ಕೊರತೆ ಇರುವ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆಸ್ಪಂದಿಸಿದ ಎಚ್‌ಡಿಕೆ ಸೋಮವಾರ 1ಆ್ಯಂಬುಲೆನ್ಸ್‌ಸೇವೆಗೆ ಲಭ್ಯವಾಗಲಿದೆ. ಮತ್ತೂಂದು ಆ್ಯಂಬುಲೆನ್ಸ್‌ಬಳಿಕಕಳುಹಿಸಿಕೊಡುವುದಾಗಿ ತಿಳಿಸಿದರು.ಕೋವಿಡ್ ಸೋಂಕಿತರಿಗೆ ಸಮರ್ಪಕ ಪರೀಕ್ಷೆ,ಸೂಕ್ತ ಚಿಕಿತ್ಸೆ, ಆಸ್ಪತ್ರೆಗಳಲ್ಲಿ ಶುಚಿತ್ವ ಕಾಪಾಡುವಂತೆಕುಮಾರಸ್ವಾಮಿ ಸಲಹೆ ನೀಡಿದರು. ಆರೈಕೆಕೇಂದ್ರಗಳಲ್ಲಿ ಆಹಾರಕ್ಕೆ ಯಾವುದೇ ತೊಂದರೆಯಾಗದಂತೆ ಗಮನಹರಿಸುವಂತೆ ಸೂಚಿಸಿದರು.
ಬ್ಲ್ಯಾಕ್ ಫಂಗಸ್ ಸೋಂಕು ನಿಭಾಯಿಸಿ: ಅನಿತಾಕುಮಾರಸ್ವಾಮಿ: ಕ್ಷೇತ್ರದ ಶಾಸಕರಾದ ಅನಿತಾಕುಮಾರಸ್ವಾಮಿ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಎಷ್ಟುಮಂದಿ ಬಳಲುತ್ತಿದ್ದಾರೆ ಎಂದು ಮಾಹಿತಿ ಕೇಳಿದರು. ಜಿಲ್ಲೆಯಲ್ಲಿ ಐದು ಮಂದಿ ಸೋಂಕಿತರಿದ್ದು ಅವರನ್ನುಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆದಾಖಲಿಸಿರುವುದಾಗಿ ಅಧಿಕಾರಿಗಳು ಹೇಳಿದರು.ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಅಗತ್ಯವಿರುವ ಆಂಫೊಟೆರಿಸಿನ್‌ಬಿಔಷಧದ ಕೊರತೆ ಇರುವುದಾಗಿಅಧಿಕಾರಿಗಳು ತಿಳಿಸಿದರು. ಈ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತು ತಾವು ಸರ್ಕಾರದ ಮೇಲೆಒತ್ತಡ ಹೇರುತ್ತಿರುವುದಾಗಿ, ಅಧಿಕಾರಿಗಳೂ ಒತ್ತಡಹಾಕಿ ಔಷಧ ತರಿಸಿಕೊಂಡು ಅಗತ್ಯ ಪ್ರಮಾಣದ ದಾಸ್ತಾನು ಮಾಡುವುದರ ಕಡೆ ಗಮನಹರಿಸಬೇಕಾಗಿ ತಿಳಿಸಿದರು.
ವರ್ಚುಯಲ್ ಸಭೆಯಲ್ಲಿ ಭಾಗವಹಿಸಿದ್ದಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್ ಮಾತನಾಡಿ ಕೋವಿಡ್‌ನಿಂದ ಗುಣಮುಖರಾಗುವಸೋಂಕಿತ ರನ್ನು ಅವರ ಮನೆಗಳಿಗೆ ಕಳುಹಿಸಲು ಪ್ರತ್ಯೇಕ ಆ್ಯಂಬುಲೆನ್ಸ್ ಬಳಸುವಂತೆ ಸೂಚನೆನೀಡಿದರು.