ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಕಠಿಣ ಕರ್ಫ್ಯೂ ಮಾರ್ಗಸೂಚಿ ಉಲ್ಲಂಘಿಸಿ ಮದ್ಯ ಮಾರಾಟ ಮತ್ತು ಸಾಗಾಟ ಮಾಡಿದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿ 2.5 ಲಕ್ಷ ರೂ. ಮೌಲ್ಯದ ಮದ್ಯ ಮತ್ತು ಬಿಯರ್ ಹಾಗೂ ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
ಕಲಬುರಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಎಸ್.ಕೆ. ಕುಮಾರ, ಅಬಕಾರಿ ಉಪ ಆಯುಕ್ತೆ ಶಶಿಕಲಾ ಎಸ್. ಒಡೆಯರ್ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅ ಧೀಕ್ಷಕ ಮಹ್ಮದ್ ಇಸ್ಮಾಯಿಲ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಗಸ್ತು ಕಾರ್ಯಾಚರಣೆ ಸಂದರ್ಭದಲ್ಲಿ ನಗರದ ಹುಮನಾಬಾದ ರಸ್ತೆಯ ಉಪಳಾಂವ ಕ್ರಾಸ್ ಹತ್ತಿರ ಬೈಕ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದಾಗ 17.280 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ. ಅದೇ ರೀತಿ ನಗರದ ಸ್ಟೇಷನ್ ಪ್ರದೇಶದಲ್ಲಿಯೂ 17.280 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ.
ನಗರದ ನೆಹರು ಗಂಜ್ ಪ್ರದೇಶದಲ್ಲಿ ಅಕ್ರಮವಾಗಿ ಸಾಗಾಣಿಕೆಗೆ ಬಳಸಿದ್ದ ಎರಡು ಬೈಕ್ ಹಾಗೂ 21.600 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ. ತಾಲೂಕಿನ ನಂದಿಕೂರ ಗ್ರಾಮದಲ್ಲೂ 20.610 ಲೀಟರ್ ಅಕ್ರಮ ಮದ್ಯವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಯಡ್ರಾಮಿ ತಾಲೂಕಿನ ಅಂಬರಖೇಡ ಗ್ರಾಮದ ಆಂಜನೇಯ ದೇವಸ್ಥಾನ ಸಮೀಪದ ಪಾಳು ಬಿದ್ದ ಮನೆ ಮೇಲೆ ದಾಳಿ ಮಾಡಿ ಮಾರಾಟಕ್ಕೆಂದು ಸಂಗ್ರಹಿಸಿಟ್ಟಿದ್ದ ಎಂಟು ಪೆಟ್ಟಿಗೆ (69.120 ಲೀಟರ್) ದೇಶಿ ಮದ್ಯ ಜಪ್ತಿ ಮಾಡಲಾಗಿದೆ.
ಅಫಜಲಪುರ ತಾಲೂಕಿನ ಉಮರಗಾ ಗ್ರಾಮದ ಲಕೀÒ$¾ಕಾಂತ ಎನ್ನುವರ ಕಿರಾಣಿ ಅಂಗಡಿ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಎರಡು ಪೆಟ್ಟಿಗೆ (17.280 ಲೀಟರ್) ಒರಿಜನಲ್ ಚಾಯ್ಸ ವಿಸ್ಕಿ ಹಾಗೂ 15.720 ಲೀಟರ್ ಬೀಯರ್ ವಶ ಪಡಿಸಿಕೊಂಡಿದ್ದಾರೆ. ಆರೋಪಿ ಲಕ್ಷ್ಮೀಕಾಂತ ಪರಾರಿಯಾಗಿದ್ದು, ಅಧಿಕಾರಿಗಳು ಶೋಧ ನಡೆಸಿದ್ದಾರೆ. ಕಲಬುರಗಿ ಉಪ ವಿಭಾಗದ ಅಬಕಾರಿ ನಿರೀಕ್ಷಕ ವಿಠಲರಾವ್ ಎಂ.ವಾಲಿ, ಮಲ್ಲಿಕಾರ್ಜುನ ಡಿ., ಬಾಲಕೃಷ್ಣ ಮುದಕಣ್ಣ, ಅಬಕಾರಿ ಉಪ ನಿರೀಕ್ಷಕರಾದ ಸಂತೋಷ ಕುಮಾರ, ನರೇಂದ್ರ ಕುಮಾರ, ಪ್ರವೀಣಕುಮಾರ, ಬಸವರಾಜ ಉಳ್ಳೆಸೂಗೂರು, ಅಬಕಾರಿ ಮುಖ್ಯ ಪೇದೆ ಗಳಾದ ಬಸವರಾಜ ಎಂ., ಸಿದ್ದಮಲ್ಲಪ್ಪ, ಜೇವರ್ಗಿ ವಲಯದ ಅಬಕಾರಿ ನಿರೀಕ್ಷಕಿ ವನಿತಾ ಸೀತಾಳೆ, ಆಳಂದ ವಲಯದ ಅಬಕಾರಿ ನಿರೀಕ್ಷಕ ಶ್ರೀಶೈಲ ಅವಜಿ ಮತ್ತು ಅಬಕಾರಿ ಉಪ ನಿರೀಕ್ಷಕ ಆಶೋಕ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕೊರೊನಾ ಎರಡನೇ ಅಲೆ ತಡೆಗಟ್ಟಿ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಮದ್ಯ ವಹಿವಾಟಿಗೆ ಸಮಯ ನಿಗದಿಪಡಿಸಿದೆ. ಇದನ್ನು ಮೀರಿ ಮದ್ಯ ಮಾರಾಟ ಮತ್ತು ಸಾಗಾಟ ಸಾಗಾಟ ಮಾಡುವಂತಿಲ್ಲ ಎಂದು ಅಬಕಾರಿ ಉಪ ಅ ಧೀಕ್ಷಕ ಮಹ್ಮದ್ ಇಸ್ಮಾಯಿಲ್ ತಿಳಿಸಿದ್ದಾರೆ.