Advertisement
ಮೃತಪಟ್ಟಿರುವ 8 ಮಂದಿ ಯಲ್ಲಿ ಕೋವಿಡ್ 19 ಪಾಸಿಟಿವ್ ವರದಿಯಾಗಿದೆ.
Related Articles
ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 55ರಿಂದ 72ರ ನಡುವಿನ ವಯೋಮಾನದ ಎಂಟು ಮಂದಿ ಜು. 23 ಮತ್ತು 24ರಂದು ಮೃತ ಪಟ್ಟಿದ್ದು, ರವಿವಾರ ಅವರ ಕೋವಿಡ್ 19 ಪರೀಕ್ಷಾ ಫಲಿತಾಂಶದಲ್ಲಿ ಪಾಸಿಟಿವ್ ವರದಿ ಬಂದಿದೆ.
Advertisement
ಅವರು ಬಹು ಅಂಗಾಂಗ ವೈಫಲ್ಯ, ಮಧುಮೇಹ, ರಕ್ತದೊತ್ತಡ, ಕಿಡ್ನಿ ಸಮಸ್ಯೆ ಮೊದಲಾದ ಆರೋಗ್ಯ ಸಮಸ್ಯೆಗಳಿಂದಲೂ ಬಳಲುತ್ತಿದ್ದರು. ಅವರ ಸಾವಿನ ಕಾರಣಗಳನ್ನು ನಿರ್ಧರಿಸಲು ಜಿಲ್ಲಾ ಮಟ್ಟದ ತಜ್ಞರ ಸಮಿತಿಯಿಂದ ವರದಿ ಸ್ವೀಕೃತವಾಗಲು ಬಾಕಿ ಇದೆ ಎಂದು ದ.ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ವಿದೇಶದಿಂದ ಬಂದವರಿಗೆ 14 ದಿನ ಕ್ವಾರಂಟೈನ್ವಿದೇಶದಿಂದ ಬಂದವರು 14 ದಿನ ಕಡ್ಡಾಯ ಕ್ವಾರೆಂಟೈನ್ ಇರಬೇಕಾಗುತ್ತದೆ. ಇದರಲ್ಲಿ 7 ದಿನ ಸಾಂಸ್ಥಿಕ ಕ್ವಾರಂಟೈನ್ (ಲಾಡ್ಜ್ ) ಇರಬೇಕು. ಈ ಅವಧಿಯಲ್ಲಿ ಅವರ ಗಂಟಲ ದ್ರವ ಪರೀಕ್ಷೆ ನಡೆಸಿ, ನೆಗೆಟಿವ್ ಬಂದರೆ 7ನೇ ದಿನದ ಅನಂತರ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತದೆ. 10 ವರ್ಷದೊಳಗಿನವರು, 60 ವರ್ಷದ ಮೇಲಿನವರು, ಗರ್ಭಿಣಿಯರು, ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಸಾಂಸ್ಥಿಕ ಕ್ವಾರಂಟೈನ್ (ಲಾಡ್ಜ್) ಕಳುಹಿಸಿದ ಮರುದಿನವೇ ಗಂಟಲ ದ್ರವ ಮಾದರಿ ಸಂಗ್ರಹಿಸಲಾಗುತ್ತದೆ. ವರದಿ ನೆಗೆಟಿವ್ ಬಂದರೆ 14 ದಿನಗಳ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಉಳ್ಳಾಲ: 7 ಪ್ರಕರಣ
ಮಿಲ್ಲತ್‌ನಗರ, ಅಳೇಕಲ, ತೊಕ್ಕೊಟ್ಟು ನಿವಾಸಿಗಳು, ಖಾಸಗಿ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ, ಕೊಲ್ಯ, ಕಿನ್ಯ ಮಿನಾದಿಯ ಇಬ್ಬರು ಸೇರಿದಂತೆ ಉಳ್ಳಾಲ ಪರಿಸರದಲ್ಲಿ ರವಿವಾರ 7 ಮಂದಿಗೆ ಸೋಂಕು ದೃಢವಾಗಿದೆ. ಮೂಲ್ಕಿ: 2 ಪ್ರಕರಣ
ತಾಲೂಕಿನಲ್ಲಿ ರವಿವಾರ ಕೋವಿಡ್ 19 ಸೋಂಕಿನ ಎರಡು ಪ್ರಕರಣಗಳು ದಾಖಲಾಗಿವೆ. ಕಾರ್ನಾಡು ಸದಾಶಿವ ನಗರದ 16 ವರ್ಷದ ಬಾಲಕ ಮತ್ತು ಕಿಲೆಂಜೂರು ನಿವಾಸಿ 53 ವರ್ಷದ ವ್ಯಕ್ತಿ ಬಾಧಿತರು. ಪ್ಯಾಕೇಜಿಂಗ್ ಕಂಪೆನಿಯ 22 ನೌಕರರಿಗೆ ಸೋಂಕು
ಬೈಕಂಪಾಡಿ ಕೈಗಾರಿಕಾ ಪ್ರಾಂಗಣದಲ್ಲಿರುವ ಪ್ಯಾಕೇಜಿಂಗ್ ಕಂಪೆನಿಯ 22 ನೌಕರರಲ್ಲಿ ರವಿವಾರ ಕೋವಿಡ್ 19 ಸೋಂಕು ದೃಢಪಟ್ಟಿದೆ. ಶನಿವಾರ 16 ಮಂದಿಯಲ್ಲಿ, ಕಳೆದ ಸೋಮವಾರ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಉತ್ತರ ಭಾರತದ ಕಾರ್ಮಿಕರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಒಂದೇ ಕೊಠಡಿಯಲ್ಲಿ ಹಲವರು ಉಳಿದುಕೊಂಡಿರುವುದು ಸೋಂಕು ಹರಡಲು ಕಾರಣ. ಎಂಆರ್‌ಪಿಎಲ್ ಟೌನ್‌ಶಿಪ್‌ನಲ್ಲಿ 6 ಮಂದಿಗೆ, ಸಿಐಎಸ್‌ಎಫ್‌ನಲ್ಲಿ ಓರ್ವನಿಗೆ, ಕಾಟಿಪಳ್ಳದಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಎನ್‌ಎಂಪಿಟಿ: 6 ಮಂದಿಗೆ ಪಾಸಿಟಿವ್
ನವಮಂಗಳೂರು ಬಂದರಿನಲ್ಲಿ ಕೆಲಸ ಮಾಡುವ 6 ಮಂದಿಯಲ್ಲಿ ಮಾತ್ರ ಪಾಸಿಟಿವ್ ಕಂಡುಬಂದಿದ್ದು, ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ. ಹೊರ ಊರಿಗೆ ತೆರಳಿದ್ದ ನೌಕರರು ಮರಳಿ ಬಂದ ಸಂದರ್ಭ ಜು. 17ರಂದು 3, ಬಳಿಕ 2 ಮತ್ತು ಸಮೀಪದ ಮೀನಕಳಿಯ ನಿವಾಸಿ ನೌಕರನಿಗೆ ಪಾಸಿಟಿವ್ ಆಗಿತ್ತು. ಕೂಡಲೇ ಎನ್‌ಎಂಪಿಟಿಯ ವಸತಿ ಬಡಾವಣೆಯಲ್ಲಿ ಊರಿನಿಂದ ಮರಳಿದ ನೌಕರರು, ಸಂಪರ್ಕದಲ್ಲಿದ್ದವರನ್ನೆಲ್ಲ ಹೋಂ ಕ್ವಾರಂಟೈನ್ ಮಾಡಿ ಮುನ್ನೆಚ್ಚರಿಕೆ ವಹಿಸಲಾಗಿತ್ತು ಎಂದು ಎನ್‌ಎಂಪಿಟಿ ಮೂಲಗಳು ತಿಳಿಸಿವೆ. ಪುತ್ತೂರು, ಕಡಬ: 21 ಮಂದಿಗೆ ಪಾಸಿಟಿವ್
ಪುತ್ತೂರು ನಗರಸಭೆಯ ಎಂಜಿನಿಯರ್, ಪುತ್ತೂರು ಬಸ್ ನಿಲ್ದಾಣ ಬಳಿಯ ಚಿನ್ನಾಭರಣ ಮಳಿಗೆಯ 6 ಸಿಬಂದಿ ಸಹಿತ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ರವಿವಾರ ಒಟ್ಟು 21 ಕೋವಿಡ್ 19 ಪ್ರಕರಣಗಳು ದೃಢಪಟ್ಟಿವೆ. ಕಚೇರಿ, ಮಳಿಗೆಯನ್ನು 48 ಗಂಟೆಗಳ ಕಾಲ ಸೀಲ್‌ಡೌನ್ ಮಾಡಲಾಗಿದ್ದು, ಸೋಮವಾರ ತೆರೆಯಲಿವೆ. ನೆಟ್ಟಣಿಗೆ ಮುಟ್ನೂರಿನ ಇಬ್ಬರು ಮಹಿಳೆಯರು, ಚಿಕ್ಕಮುಟ್ನೂರು, ಬಲ್ನಾಡಿನ ಮಹಿಳೆಯರು, ಪುತ್ತೂರು ನಗರ, ಕಬಕ, ಉರ್ಲಾಂಡಿಯ ಪುರುಷರಲ್ಲಿ ಸೋಂಕು ದೃಢವಾಗಿದೆ. ಕಡಬ ತಾಲೂಕಿನ ಕೊಯಿಲ ಗ್ರಾಮದ ವಳಕಡಮದಲ್ಲಿ ಒಂದೇ ಮನೆಯ ಮೂವರಲ್ಲಿ, ಆಲಂಕಾರು ಗ್ರಾಮದ ದಂಪತಿಯಲ್ಲಿ, ಬಿಳಿನೆಲೆಯ ಯುವಕ ಹಾಗೂ ಕುಟ್ರಾಪ್ಪಾಡಿ ನಿವಾಸಿಯಾಗಿರುವ ಕ್ರೈಸ್ತ ಧರ್ಮಗುರುವೊಬ್ಬರಲ್ಲಿ ಪಾಸಿಟಿವ್ ಕಂಡುಬಂದಿದೆ. ಕೋವಿಡ್ 19 ಸೋಂಕು ಬಾಧಿತರು 17ರಿಂದ 65ರ ನಡುವಿನ ಹರೆಯದವರು. ಬಂಟ್ವಾಳ: 15 ಪ್ರಕರಣ
ತಾಲೂಕಿನಲ್ಲಿ ರವಿವಾರ ಒಟ್ಟು 15 ಮಂದಿಗೆ ಸೋಂಕು ದೃಢಪಟ್ಟಿದೆ. ವಿಟ್ಲ, ಬಂಟ್ವಾಳ ಕಸ್ಬಾದ ವೃದ್ಧರು, ಬಂಟ್ವಾಳ, ಕೇಪು, ಮೆಲ್ಕಾರು, ಕಾವಳಮೂಡೂಕು, ಪುದುವಿನ ಪುರುಷರು, ನರಿಕೊಂಬಿನ ಇಬ್ಬರು ಮಹಿಳೆಯರು, ಬಡಗಕಜೆಕಾರು, ವಿಟ್ಲ ಕಸ್ಬಾ, ಬಂಟ್ವಾಳ ಪಡು, ಕೈಕಂಬ ಪರ್ಲಿಯಾ, ಅಮೂrರು ಮತ್ತು ಸಜೀಪನಡುವಿನ ಮಹಿಳೆಯರು ಬಾಧಿತರಾಗಿದ್ದಾರೆ. ಇಲಾಖಾ ವರದಿಯೇ ಅಂತಿಮ
ಜಿಲ್ಲೆಯಲ್ಲಿ ಕೋವಿಡ್ 19ನಿಂದ ಸಾವಿಗೀಡಾದವರ ಸಂಖ್ಯೆಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಆರೋಗ್ಯ ಇಲಾಖೆ ಪ್ರತಿದಿನ ಬಿಡುಗಡೆಗೊಳಿಸುವ ಹೆಲ್ತ್ ಬುಲೆಟಿನ್‌ನಲ್ಲಿ ನೀಡುವ ಅಂಕಿ-ಅಂಶವೇ ಅಂತಿಮವಾಗಿರುತ್ತದೆ. ಕೋವಿಡ್ 19ನಿಂದ ಮೃತಪಟ್ಟವರ ಮಾಹಿತಿಯನ್ನು ಜಿಲ್ಲಾಡಳಿತದಿಂದ ರಾಜ್ಯ ಸರಕಾರಕ್ಕೆ ಕಳುಹಿಸಲಾಗುತ್ತಿದ್ದು, ಅಲ್ಲಿ ಆ ಬಗ್ಗೆ ಪರಿಶೀಲಿಸಿ ಸಾವಿನ ಕುರಿತ ಸಂಖ್ಯೆಯನ್ನು ಅಧಿಕೃತಗೊಳಿಸಲಾಗುತ್ತದೆ.
– ಸಿಂಧೂ ಬಿ. ರೂಪೇಶ್, ದ.ಕ. ಜಿಲ್ಲಾಧಿಕಾರಿ