Advertisement
ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಭಾರತದ ಆನ್‌ಲೈನ್ ಮಾರಾಟದಲ್ಲಿ ಶೇ.90ರಷ್ಟು ಪಾಲು ಹೊಂದಿವೆ. ಅಕ್ಟೋಬರ್ ತಿಂಗಳಿನಲ್ಲೀ ಈ ಎರಡು ತಾಣಗಳು 39 ಸಾವಿರ ಕೋಟಿ ರೂ. ವ್ಯಾಪಾರ ನಡೆಸಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಕಳೆದ ವರ್ಷಕ್ಕಿಂತ ಈ ವರ್ಷ ಶೇ.30ರಷ್ಟು ಹೆಚ್ಚು ಮಾರಾಟವಾಗಿದೆ. ಮೊಬೈಲ್ ಅತಿ ಹೆಚ್ಚು ಅಂದರೆ ಶೇ.55ರಷ್ಟು ಮಾರಾಟವಾಗಿವೆ. ಎಲೆಕ್ಟ್ರಾನಿಕ್ಸ್ ವಸ್ತುಗಳು, ಫ್ಯಾಶನ್, ಮನೆ ಸಾಮಗ್ರಿಗಳು ಅತಿ ಹೆಚ್ಚು ಮಾರಾಟವಾಗಿವೆ. ಅಮೆಜಾನ್ ಭಾರತದ ಶೇ.99.4ರಷ್ಟು ಪಿನ್‌ಕೋಡ್‌ಗಳಿಂದ ಈ ಬಾರಿ ಆರ್ಡರ್‌ಗಳನ್ನು ಸ್ವೀಕರಿಸಿರುವುದಾಗಿ ಹೇಳಿದೆ. ಫ್ಲಿಪ್‌ಕಾರ್ಟ್ ಬಿಗ್ ಬುಲಿಯನ್ ಡೇ ಕಳೆದ ವರ್ಷಕ್ಕಿಂತ ಶೇ.50ರಷ್ಟು ಅಭಿವೃದ್ಧಿ ದರ ದಾಖಲಿಸಿರುವುದಾಗಿ ಹೇಳಿದೆ. Advertisement
6 ದಿನಗಳಲ್ಲಿ 19 ಸಾವಿರ ಕೋಟಿ ರೂ. ವ್ಯಾಪಾರ ಮಾಡಿದ ಫ್ಲಿಪ್‌ಕಾರ್ಟ್, ಅಮೆಜಾನ್!
10:39 AM Oct 09, 2019 | mahesh |
Advertisement
Udayavani is now on Telegram. Click here to join our channel and stay updated with the latest news.