Advertisement

190.76 ಕಿಮೀ ರಸ್ತೆ ಮೇಲ್ದರ್ಜೆಗೆ

04:28 PM Oct 14, 2020 | Suhan S |

ಚಿಂಚೋಳಿ: ಲೋಕೋಪಯೋಗಿ ಇಲಾಖೆ ವತಿಯಿಂದ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಸುಧಾರಣೆ ಹಾಗೂ ನಿರ್ವಹಣಾ ಕಾಮಗಾರಿ ಕೈಕೊಳ್ಳಲಾಗುತ್ತಿದೆ.ರಾಜ್ಯದಲ್ಲಿ 7252 ಕಿಮೀ ಉದ್ದದ ರಾಷ್ಟ್ರೀಯಹೆದ್ದಾರಿ 19,500 ಕಿಮೀ ಉದ್ದದ ರಾಜ್ಯಹೆದ್ದಾರಿ 49,603 ಕಿಮೀ ಉದ್ದದ ಜಿಲ್ಲಾ ಮುಖ್ಯ ರಸ್ತೆಗಳು ಮತ್ತು ಸುಮಾರು 1,93,081 ಕಿಮೀ ಉದ್ದದ ಗ್ರಾಮೀಣ ರಸ್ತೆಗಳು ಇರುತ್ತವೆ. ಈ ರಸ್ತೆಗಳನ್ನು ಇಲಾಖೆ ಅನುದಾನದಲ್ಲಿ ನಿರ್ವಹಣೆ ಮತ್ತು ಸುಧಾರಣೆ ಮಾಡಲಾಗುತ್ತದೆ.

Advertisement

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ರಸ್ತೆಗಳನ್ನು ಕಾಲಕಾಲಕ್ಕೆ ವಾಹನಗಳ ಸಾಂದ್ರತೆ ಮಾರುಕಟ್ಟೆಗಳ ಕೂಡುವಿಕೆ, ಪ್ರೇಕ್ಷಣಿಯ ಮತ್ತು ಕೈಗಾರಿಕೆ ಪ್ರದೇಶಗಳಕೂಡುವಿಕೆ ಬಗ್ಗೆ ಕೂಲಂಕುಶವಾಗಿಪರಿಗಣಿಸಿ ಮೇಲ್ದರ್ಜೆಗೇರಿಸುವುದು ಅವಶ್ಯಕವಾಗಿರುತ್ತದೆ. ಹಲವಾರುವರ್ಷಗಳಿಂದ ಗ್ರಾಮೀಣ ರಸ್ತೆಗಳನ್ನು ಹಾಗೂ ಜಿಲ್ಲಾ ಮುಖ್ಯರಸ್ತೆಗಳನ್ನುಉನ್ನತೀಕರಿಸುವುದರಿಂದ ಸದರಿ ರಸ್ತೆಗಳಲ್ಲಿ ವಾಹನಗಳ ಸಂಚಾರ ದಟ್ಟಣೆಯೂ ಅಧಿಕವಾಗಿರುವುದು ಸಹಾ ಐಆರ್‌ಸಿ ಮಾನದಂಡಗಳ ಅನ್ವಯ ನಿರ್ವಹಣೆಮಾಡುವುದರಿಂದ ಆಗಾಗ ದುರಸ್ತಿಗೆಒಳಪಟ್ಟಿದ್ದು, ಸರಕಾರಕ್ಕೆ ಅನಗತ್ಯ ಆರ್ಥಿಕ ಹೊರೆ ಉಂಟಾಗುವುದು. ರಾಜ್ಯದಲ್ಲಿನ ರಸ್ತೆಗಳ ಉದ್ದವೂ ಮತ್ತು ಸದೃಢ ಮೂಲಸೌಕರ್ಯನಿರ್ಮಿಸುವ ನಿಟ್ಟಿನಲ್ಲಿ 1329 ಸಂಖ್ಯೆ 15,510 ಕಿಮೀ ಉದ್ದದ ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯರಸ್ತೆಗಳನ್ನಾಗಿಹಾಗೂ 226 ಸಂಖ್ಯೆಯ 9601 ಕಿಮೀ ಉದ್ದದ ಜಿಲ್ಲಾ ಮುಖ್ಯರಸ್ತೆಗಳನ್ನು ರಾಜ್ಯಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸುವುದು ಅಗತ್ಯವಾಗಿರುತ್ತದೆ. ಎಂದು ಪ್ರಧಾನ ಇಂಜಿನಿಯರ್‌ ಪಿಆರ್‌ಎಎಂಸಿ ಅವರು ಸರಕಾರಕ್ಕೆ ಸಲ್ಲಿಸಿರುತ್ತಾರೆ.

ಪ್ರಧಾನ ಇಂಜಿನಿಯರ್‌ ಪಿಆರ್‌ಎಎಂಸಿ ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ ಮತ್ತು ಜಿಲ್ಲಾ ಮುಖ್ಯರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲುಡಾ|ನಂಜುಂಡಪ್ಪ ವರದಿಯಲ್ಲಿ ಪ್ರಸ್ತಾಪಿಸಿದಅತ್ಯಂತ ಹಿಂದುಳಿದ ಅತೀ ಹಿಂದುಳಿದತಾಲೂಕಗಳಲ್ಲಿನ ರಸ್ತೆಜಾಲವನ್ನು ವಿಸ್ತರಿಸುವುದು. ರಾಜ್ಯಮಟ್ಟದ ಲೋಕೋಪಯೋಗಿ ರಸ್ತೆಗಳು ಸರಾಸರಿ 40ಕಿಮೀ/100 ಎಸ್‌ಕ್ಯೂ ಕಿಮೀ ವಿಸ್ತರಣೆಗಿಂತ ಕಡಿಮೆ ಇರುವ ತಾಲೂಕಗಳಿಗೆ ಪ್ರಾತಿನಿಧ್ಯತೆ ನೀಡುವುದು. ರಾಷ್ಟ್ರೀಯ ಹೆದ್ದಾರಿ,ರಾಜ್ಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವಗ್ರಾಮೀಣ ರಸ್ತೆಗಳನ್ನು ಉನ್ನತೀಕರಿಸುವುದು ಹಾಗೂ ತನ್ಮೂಲಕ ಆರ್ಥಿಕ ಚಟುವಟಿಕೆ ಅಭಿವೃದ್ಧಿಪಡಿಸುವುದು. ಪ್ರವಾಸಿ ತಾಣಗಳು ವಾಣಿಜ್ಯ ಕೇಂದ್ರಗಳಿಗೆ ಸಂಪರ್ಕಿಸುವ ರಸ್ತೆಗಳನ್ನು ಉನ್ನತೀಕರಿಸುವುದು. ಚಿಂಚೋಳಿ ತಾಲೂಕಿನ ಗ್ರಾಮೀಣ ಪ್ರದೇಶದ ರಸ್ತೆಗಳು ಮತ್ತು ರಾಜ್ಯ ಹೆದ್ದಾರಿಗಳು ಉನ್ನತ್ತಿಕರಿಸಿದೆ.

ಭೂಯ್ನಾರ(ಬಿ) ಸಾಲೆಬೀರನಳ್ಳಿ, ಐನಾಪುರ 32 ಕಿಮೀ, ಚಿಂಚೋಳಿ- ಅಣವಾರ- ಪರದಾರ ಮೋತಕಪಳ್ಳಿ- ಗರಗಪಳ್ಳಿ 13ಕಿಮೀ, ಸುಲೇಪೇಟ-ಭಕ್ತಂಪಳ್ಳಿ-ಯಾಕಾಪೂ  ರ- ಗರಗಪಳ್ಳಿ 12 ಕಿಮೀ, ಚಿಮ್ಮನಚೋಡ- ಬಸಂತಪೂರ 11 ಕಿಮೀ, ಕುಂಚಾವರಂ- ಧರ್ಮಸಾಗರ 14 ಕಿಮೀ, ಐನೋಳ್ಳಿ ಕ್ರಾಸ್‌ದಿಂದ ಚಂದ್ರಂಪಳ್ಳಿ 8.60 ಕಿಮೀ, ಚಂದನಕೇರಾ- ಕೊಟಗಾ- ಖಾನಾಪೂರ 15 ಕಿಮೀ, ಸಾಲೇಬೀರನಳ್ಳಿ- ಮರಪಳ್ಳಿ- ಗುರಂಪಳ್ಳಿ, ಕ್ರಾಸ್‌ 9.50 ಕಿಮೀ, ಚೆಂಗಟಾ- ಧುತ್ತರಗಾ- ರೇವಗ್ಗಿ ಕ್ರಾಸ್‌10 ಕಿಮೀ ರಸ್ತೆಗಳನ್ನು ಗ್ರಾಮೀಣ ರಸ್ತೆಯಿಂದ ಜಿಲ್ಲಾ ಮುಖ್ಯರಸ್ತೆನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.

ತಾಲೂಕಿನ ಜಿಲ್ಲಾ ಹೆದ್ದಾರಿಯಿಂದ ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿದ ರಸ್ತೆಗಳು: ರಾಣಾಪೂರ ಎಸ್‌.ಎಚ್‌ 75 ದಿಂದ ಸಾಸರಗಾಂವ ಎಸ್‌.ಎಚ್‌ 125 2.20ಕಿಮೀ, ಸುಲೇಪೇಟ ಎಸ್‌.ಎಚ್‌ 32ದಿಂದ ಯಲಕಪಳ್ಳಿ-ಹೂವಿನಬಾವಿ-ಮೋಘಾ- ರುಮ್ಮನಗೂಡ 18 ಕಿಮೀ, ಕುಂಚಾವರಂ ಕ್ರಾಸ್‌ ಎಸ್‌.ಎಚ್‌ 126 ದಿಂದ ಮಿರಿಯಾಣ ಗಡಿಪ್ರದೇಶದವರೆಗೆ 10.70 ಕಿಮೀ. ರಟಕಲ ದೇವಸ್ಥಾನದಿಂದ ಚಂದನಕೇರಾದವರೆಗೆ 10.70ಕಿಮೀ ಮೇಲ್ದರ್ಜೆಗೇರಿಸಲಾಗಿದೆ ಎಂದು ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.

Advertisement

 

-ಶಾಮರಾವ ಚಿಂಚೋಳಿ

Advertisement

Udayavani is now on Telegram. Click here to join our channel and stay updated with the latest news.

Next