Advertisement

ವಿದ್ಯಾರ್ಥಿನಿಯನ್ನು ಅಪಹರಿಸಿ ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ

09:49 AM Nov 06, 2019 | Nagendra Trasi |

ಜೈಪುರ್: 19 ವರ್ಷದ ವಿದ್ಯಾರ್ಥಿನಿಯನ್ನು ಅಪಹರಿಸಿ, ಚಲಿಸುತ್ತಿದ್ದ ಕಾರಿನೊಳಗೆ ಮೂವರು ಕಾಮುಕರು ಐದು ಗಂಟೆಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಂದಿದೆ.

Advertisement

ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಈವರೆಗೂ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ.

ಕಾಲೇಜು ವಿದ್ಯಾರ್ಥಿನಿಯಾಗಿರುವ ಈಕೆ ಸಂಜೆ 5ಗಂಟೆ ಸುಮಾರಿಗೆ ಕೋಚಿಂಗ್ ಸೆಂಟರ್ ಗೆ ನಡೆದುಕೊಂಡು ಹೋಗುತ್ತಿದ್ದಾಗ ಮೂವರು ಮಂದಿ ಬಲವಂತವಾಗಿ ಕಾರಿನೊಳಕ್ಕೆ ದೂಡಿ ಅಪಹರಿಸಿದ್ದರು. ಅಲ್ಲದೇ ಆಕೆಯ ಕಣ್ಣಿಗೆ ಬಟ್ಟೆ ಕಟ್ಟಿ ಚಲಿಸುತ್ತಿದ್ದ ಕಾರಿನೊಳಗೆ ಐದು ಗಂಟೆಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ವರದಿ ಹೇಳಿದೆ.

ಈ ವಿಚಾರವನ್ನು ಯಾರ ಬಳಿಯೂ ಹೇಳಬಾರದು, ಒಂದು ವೇಳೆ ವಿಷಯ ಹೊರಹಾಕಿದರೆ ಕೊಲ್ಲುವುದಾಗಿ ಬೆದರಿಯೊಡ್ಡಿದ್ದರು. 10ಗಂಟೆ ರಾತ್ರಿಗೆ ಲಾಲ್ ಸೋಟ್ ಪ್ರದೇಶದಲ್ಲಿ ತಂದು ಬಿಟ್ಟು ಹೋಗಿರುವುದಾಗಿ ದೂರಿನಲ್ಲಿ ವಿವರಿಸಿದೆ.

ಬೆಳಗ್ಗಿನ ಜಾವದವರೆಗೆ ಕಾದು ಕುಳಿತ ಈಕೆಗೆ ಸಹಾಯ ಕೇಳಲು ಆ ಹೊತ್ತಿನಲ್ಲಿ ಯಾರೊಬ್ಬರೂ ಅಲ್ಲಿ ಇರಲಿಲ್ಲವಾಗಿತ್ತು. ಸಾಮೂಹಿಕ ಅತ್ಯಾಚಾರ ಎಸಗಿದವರಲ್ಲಿ ಇಬ್ಬರು ನೆರೆಯ ಗ್ರಾಮದವರು, ಕೇವಲ ಮೂರನೇಯ ಆರೋಪಿಯ ಹೆಸರು ಮಾತ್ರ ತನಗೆ ತಿಳಿದಿರುವುದಾಗಿ ಯುವತಿ ತಿಳಿಸಿರುವುದಾಗಿ ಲಾಲ್ ಸೋಟ್ ಪೊಲೀಸ್ ಅಧಿಕಾರಿ ಮನ್ರಾಜ್ ಮೀನಾ ತಿಳಿಸಿದ್ದಾರೆ.

Advertisement

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಆದರೆ ಯಾರನ್ನೂ ಬಂಧಿಸಿಲ್ಲ. ಸಿಸಿಟಿವಿ ಫೂಟೇಜ್ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮೀನಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next