Advertisement

ಕಣ್ಣೆದುರೇ ಗೆಳತಿ ಮೇಲೆ ಅತ್ಯಾಚಾರ, ಮನನೊಂದ ಯುವಕ ಆತ್ಮಹತ್ಯೆಗೆ ಶರಣು

03:11 PM Sep 14, 2018 | Sharanya Alva |

ಕೊರ್ಬಾ(ಛತ್ತೀಸ್ ಗಢ್): ಕಣ್ಣ ಮುಂದೆಯೇ ಗೆಳತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಕಂಡು ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಛತ್ತೀಸ್ ಗಢದ ಕೊರ್ಬಾದಲ್ಲಿ ನಡೆದಿರುವುದಾಗಿ ತಡವಾಗಿ ಬೆಳಕಿಗೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಘಟನೆ ಬಗ್ಗೆ ಸಂತ್ರಸ್ತ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಗುರುವಾರ ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರ್ ದಾಸ್ (22ವರ್ಷ) ಮತ್ತು ಖೇಮ್ ಕನ್ವರ್(21ವರ್ಷ)ನನ್ನು ಸಾಮೂಹಿಕ ಅತ್ಯಾಚಾರ ಆರೋಪದಡಿ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಯುವತಿ ಹಾಗೂ ಗೆಳೆಯ ಸಾವನ್ ಸಾಯಿ ಸ್ಥಳೀಯ ಮಾರ್ಕೆಟ್ ನಿಂದ ವಾಪಸ್ ಬರುತ್ತಿದ್ದ ವೇಳೆ ಈಶ್ವರ್ ಹಾಗೂ ಖೇಮ್ ಯುವತಿಯ ಸುತ್ತ ಸುತ್ತುತ್ತಿರುವುದನ್ನು ಆಕ್ಷೇಪಿಸಿದ್ದ. ಈ ವೇಳೆ ಮಾತಿನ ಚಕಮಕಿ ನಡೆದಾಗ, ಇಬ್ಬರು ಸಾಯಿಗೆ ಹೊಡೆದು ದೂರ ತಳ್ಳಿ, ಯುವತಿ ಮೇಲೆ ಅತ್ಯಾಚಾರ ಎಸಗಿದ್ದರು. ಬಲವಾಗಿ ಏಟು ಬಿದ್ದ ಪರಿಣಾಮ ರಕ್ಷಿಸಲು ಆಗದೆ ಸಾಯಿ ಪ್ರಜ್ಞೆ ತಪ್ಪಿ ಬಿದ್ದಿದ್ದ. ಮರುದಿನ ಚೇತರಿಸಿಕೊಂಡಿದ್ದ ಸಾಯಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವುದಾಗಿ ಕೋರ್ ಬಾ ಪೊಲೀಸ್ ವರಿಷ್ಠಾಧಿಕಾರಿ ಮಯಾಂಕ್ ಶ್ರೀವಾತ್ಸವ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next