ಮಹಾನಗರ: ಅಂಗವಿಕಲರಿಗೆ ಸರಕಾರದಿಂದ ಎರಡೂವರೆ ತಿಂಗಳುಗಳ ಹಿಂದೆ ಪೂರೈಕೆಯಾಗಿದ್ದ ಟ್ರೈಸಿಕಲ್‌ಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆರಂಭಗೊಂಡಿದೆ. ಒಟ್ಟು 58 ಟ್ರೈಸಿಕಲ್‌ಗಳು ಬಂದಿದ್ದು ಅದರಲ್ಲಿ 19 ಟ್ರೈಸಿಕಲ್‌ಗಳನ್ನು ಫಲಾನು ಭವಿಗಳಿಗೆ ತಲುಪಿಸಲಾಗಿದೆ. ಟ್ರೈಸಿಕಲ್‌ಗಳು ಪೂರೈಕೆಯಾಗಿ ಸಾಂಕೇತಿಕ ವಿತರಣೆ ನಡೆದು ಎರಡೂವರೆ ತಿಂಗಳಾಗಿದ್ದರೂ ಅವುಗಳು ಫಲಾನುಭವಿಗಳ ಕೈಗೆ ಸಿಗದೆ ಜಿ.ಪಂ. ಸಭಾ ಂಗಣ ಕಟ್ಟಡದ ಕೆಳಗಿನ ಪಾರ್ಕಿಂಗ್ ಸ್ಥಳದ ಬಳಿ ಧೂಳು ತಿನ್ನುತ್ತಿರುವ ಬಗ್ಗೆ “ಸುದಿನ’ ಅ. 4ರಂದು ವಿಶೇಷ ವರದಿ ಪ್ರಕಟಿಸಿತ್ತು. ಕಂಪೆನಿಯವರು ವಾಹನದ ಆರ್‌ಸಿ ಮತ್ತಿತರ ದಾಖಲೆ ನೀಡದೇ ಇರುವುದರ ಬಗ್ಗೆ ಗಮನ ಸೆಳೆಯಲಾಗಿತ್ತು.
ವರ ದಿಯ ಅನಂತರ ಜನಪ್ರತಿನಿಧಿ, ಟ್ರೈಸಿಕಲ್ ಪೂರೈಕೆದಾರ ಕಂಪೆನಿಯವರು ಎಚ್ಚೆತ್ತುಕೊಂಡಿದ್ದರು. ಅಧಿಕಾರಿಗಳು ಕಂಪೆನಿಯವರನ್ನು ಮತ್ತೂಮ್ಮೆ ಸಂಪರ್ಕಿಸಿ ಒತ್ತಡ ಹಾಕಿದ್ದರು. ಅದರ ಪರಿಣಾಮವಾಗಿ 31 ವಾಹನಗಳಿಗೆ ಆರ್‌ಸಿ ಬಂದಿದೆ.
ಆರ್‌ಸಿ ಬಂದಿರುವ ವಾಹನಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಪ್ರಗತಿಯಲ್ಲಿದೆ. ಒಟ್ಟು 58 ಟ್ರೈಸಿಕಲ್‌ಗಳು ಪೂರೈಕೆ ಯಾಗಿವೆ. ಇದರಲ್ಲಿ ಇಲಾಖೆ ಯಿಂದ ನೇರವಾಗಿ ಬಂದಿರುವುದು 31. ಉಳಿದದ್ದು ಶಾಸಕರ ಶಿಫಾರಸಿನಂತೆ ಹೆಚ್ಚುವರಿಯಾಗಿ ಬಂದಿವೆ. ಶಿಫಾರಸು ಮಾಡಿದ ವಾಹನಗಳನ್ನು ಹೊರತುಪಡಿಸಿ ಇತರ 31 ವಾಹನಗಳಿಗೆ ಆರ್‌ಸಿ ಇತ್ತೀಚೆಗೆ ಬಂದಿದ್ದು, ಅವುಗಳನ್ನು ಫಲಾನು ಭವಿಗಳಿಗೆ ತಲುಪಿಸಲಾಗುತ್ತಿದೆ. ಪುತ್ತೂರು, ಮಂಗಳೂರಿನ ಕ್ಷೇತ್ರದ ಶಾಸಕರು ವಿತರಿಸಿದ್ದಾರೆ. ಬಂಟ್ವಾಳದ ಶಾಸಕರಿಂದ ಶೀಘ್ರ ವಿತರಣೆ ನಡೆಯಲಿದೆ.
ಇನ್ನು ಕೆಲವು ಮಂದಿ ಶಾಸಕರು ಟ್ರೈಸಿಕಲ್ ವಿತರಣೆಗೆ ಸಮಯ ನಿಗದಿಗೊಳಿಸಿಲ್ಲ. ಮತ್ತೆ ಹೆಚ್ಚವರಿಯಾಗಿ 27 ವಾಹನಗಳಿಗೆ ಶಿಫಾರಸ್ಸು ಮಾಡಿರುವುದರಿಂದ ಅವುಗಳ ಆರ್‌ಸಿ ಇನ್ನಷ್ಟೇ ಬರಬೇಕಿದೆ ಎಂದು ಮೂಲಗಳು ತಿಳಿಸಿವೆ.