Advertisement

ಕನ್ನಡ ಭಾಷೆಗೆ ಮಡಿವಂತಿಕೆ ಬೇಲಿ ಬೇಡ

01:52 PM Feb 22, 2021 | Team Udayavani |

ಮಂಡ್ಯ: ಇಡೀ ಜಗತ್ತಿನಲ್ಲಿ ಕನ್ನಡ ತೆರೆದುಕೊಳ್ಳಬೇಕಾದರೆ ಕನ್ನಡಕ್ಕೆ ಮಡಿವಂತಿಕೆಯ ಬೇಲಿ ಬೇಡ ಎಂದು ಚಿತ್ರ ನಿರ್ದೇಶಕ ಹಾಗೂ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌ ಹೇಳಿದರು.

Advertisement

ನಗರದ ಸರ್‌ಎಂವಿ ಕ್ರೀಡಾಂಗಣದಲ್ಲಿ ನಡೆದ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು. ಪ್ರಸ್ತುತ ಆಧುನಿಕ ಕಾಲದಲ್ಲಿ ಸಂಶೋಧನೆ, ವೈದ್ಯಕೀಯ ತಂತ್ರಜ್ಞಾನದಲ್ಲಿ ಕನ್ನಡ ಭಾಷೆ ಸರಳವಾಗಿ ಬಳಸುವಂತಾಗಬೇಕು. ಹೊಸ ಕಾಲಕ್ಕೆ ಕನ್ನಡ ಕಟ್ಟುವ ಕೆಲಸವಾಗಬೇಕು. ಡಿಜಿಟಲೀಕರಣದ ಸಂದರ್ಭದಲ್ಲಿಓದುವವರ ಸಂಖ್ಯೆ ಹಾಗೂ ಪುಸ್ತಕಗಳು ಕಡಿಮೆಯಾಗುತ್ತಿವೆ ಎಂದು ವಿಷಾದಿಸಿದರು.

ಕನ್ನಡ ಕಟ್ಟುವ ಕೆಲಸವಾಗಲಿ: ದೇಶೀಯ ಹಾಗೂ ಜಾಗತಿಕ ನೆಲೆಗಟ್ಟಿನಲ್ಲಿ ಕನ್ನಡ ಕಟ್ಟುವ ಕೆಲಸವಾಗಬೇಕು. ಸಾಹಿತ್ಯದಲ್ಲಿ ಹೊಸ ಹೊಸ ಸಂಶೋಧನೆಗಳು ಅಗತ್ಯವಾಗಿವೆ. ಇಂಥ ಸಾಹಿತ್ಯ ಜಾತ್ರೆಗಳು ಹೆಚ್ಚಾಗಿ ನಡೆಯುವುದರಿಂದ ಹೊಸತರಕ್ಕೆ ಕನ್ನಡವನ್ನು ಕೊಂಡೊಯ್ಯುವ ಕೆಲಸಗಳು ಆಗಬೇಕು. ಸಮ್ಮೇಳನಗಳನ್ನು ಶಿಸ್ತಿನ ಕಡೆಗೆ ತರಬೇಕು ಎಂದರು.

ವಿಶ್ವಮಟ್ಟದ ಗ್ರಹಿಕೆ ಅಗತ್ಯ: ಜಾನಪದ ಕಲೆ, ಕನ್ನಡ ಜ್ಞಾನವು ಹೆಚ್ಚಾಗಬೇಕು. ವಿಶ್ವಮಟ್ಟದಲ್ಲಿ ಗ್ರಹಿಕೆ ಕನ್ನಡದಲ್ಲಿ ಸಿಗಬೇಕು. ಜಗತ್ತಿನಲ್ಲಿ ಮನುಷ್ಯನ ಕುಲ ಕಟ್ಟುವ ಎಲ್ಲ ರೀತಿಯ ಕಲೆ, ಸಾಹಿತ್ಯ, ಸಂಸ್ಕೃತಿ ಕನ್ನಡದಲ್ಲಿ ಬರಬೇಕು. ಜಾnನದ ಶಾಖೆಗಳು ಖಾಲಿಯಾಗದಂತೆ, ಕಂಟಕವಾಗದಂತೆ ನೋಡಿ ಕೊಳ್ಳಬೇಕು ಎಂದು ಹೇಳಿದರು.

ಚಿತ್ರರಂಗದಲ್ಲೂ ಕನ್ನಡ ಕಲುಷಿತ: ಕನ್ನಡ ಚಿತ್ರರಂಗದಲೂ ಕನ್ನಡ ಕಲುಷಿತಗೊಂಡಿದೆ. ಚಿತ್ರಗೀತೆಗಳು, ಸಂಭಾಷಣೆಗಳು ಕಲುಷಿತಗೊಂಡು ವ್ಯವಹಾರಕ್ಕೆ ಬಳಕೆಯಾಗುತ್ತಿದೆ. ಇದು ಕನ್ನಡ ಭಾಷೆಯನ್ನುಅದೋಗತಿಗೆ ಕೊಂಡೊಯ್ಯುತ್ತದೆ. ಆದ್ದರಿಂದ ಇದನ್ನು ಸರಿಪಡಿಸುವ ಅಗತ್ಯವಿದೆ. ಇದಕ್ಕೆ ಕನ್ನಡಿಗರಾದ ನಾವೆಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು. ಸಮಾರಂಭದಲ್ಲಿ ಬಡ್ತಿ ಹೊಂದಿದ ಮಂಡ್ಯದ ಐಎಎಸ್‌ ಅಧಿಕಾರಿಗಳನ್ನು ಅಭಿನಂದಿಸಲಾಯಿತು.

Advertisement

ಸಮ್ಮೇಳನದ ಸಮಾರೋಪದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಜೆ.ಎನ್‌.ರಾಮಕೃಷ್ಣೇಗೌಡ, ಪರಂಪರೆ ಮತ್ತು ಪ್ರಾಚ್ಯವಸ್ತು ಆಯುಕ್ತೆ ಬಿ.ಆರ್‌ .ಪೂರ್ಣಿಮಾ, ಆಡಳಿತ ಮತ್ತು ಅಭಿವೃದ್ಧಿ ಪ್ರಾದೇಶಿಕಆಯುಕ್ತೆ ಕೆ.ಎಂ.ಗಾಯಿತ್ರಿ, ಅಪರ ಜಿಲ್ಲಾಧಿಕಾರಿ ವಿ.ಆರ್‌.ಶೈಲಜಾ, ಉಪ ಪೊಲೀಸ್‌ ಆಯುಕ್ತಡಾ.ಎ.ಎನ್‌.ಪ್ರಕಾಶ್‌ಗೌಡ, ಕಾಲೇಜು ಶಿಕ್ಷಣ ಇಲಾಖೆಮುಖ್ಯ ಆಡಳಿತಾಧಿಕಾರಿ ಎಸ್‌.ಎನ್‌.ಬಾಲಚಂದ್ರ,ಸಮ್ಮೇಳನಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ಪಿಇಟಿಅಧ್ಯಕ್ಷ ಕೆ.ಎಸ್‌.ವಿಜಯಾನಂದ, ಬಿಜೆಪಿ ಮುಖಂಡ ಡಿ.ನಾಗೇಶ್‌ ಸೇರಿದಂತೆ ಅನೇಕರು ಹಾಜರಿದ್ದರು.

ಸಮ್ಮೇಳನದ ನಿರ್ಣಯಗಳು :

  • ಕನ್ನಡ ಶಾಲೆಗಳನ್ನು ಪುನಶ್ಚೇತನಗೊಳಿಸುವುದು.
  • ಮಂಡ್ಯ ಜಿಲ್ಲೆಯ ರೈತರ ಬೆನ್ನುಲುಬು ಮೈಷುಗರ್‌ ಕಾರ್ಖಾನೆಯನ್ನು ಸರ್ಕಾರದಿಂದಲೇ ಪುನಶ್ಚೇತನಗೊಳಿಸಬೇಕು
  • ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸಬೇಕು
  • ಕನ್ನಡ ಪುಸ್ತಕ ಪ್ರಕಟಣೆಗೆ ಸರ್ಕಾರ ಹೆಚ್ಚು ಪ್ರೊತ್ಸಾಹಧನ ಬಿಡುಗಡೆಗೊಳಿಸಬೇಕು.
  • ಎಲ್ಲ ತಾಲೂಕುಗಳಲ್ಲಿ ಕನ್ನಡ ಸಾಹಿತ್ಯ ಭವನಗಳನ್ನು ನಿರ್ಮಿಸಬೇಕು
  • ಕಾವೇರಿ ನಮ್ಮದು ಇದರ ರಕ್ಷಣೆ ನಮ್ಮೆಲ್ಲರ ಹೊಣೆ. ಈ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಬೆಂಬಲಿಸಬೇಕು.

ಸಾಹಿತ್ಯಾಸಕ್ತರ ಕೊರತೆ :

ಸಮ್ಮೇಳನದ ಮೂರನೇ ದಿನವಾದ ಭಾನುವಾರ ಸಹ ಸಾಹಿತ್ಯಾಸಕ್ತರ ಕೊರತೆ ಕಂಡು ಬಂದಿತು. ಪ್ರಮುಖ ಗೋಷ್ಠಿಗಳು, ಸಂವಾದ, ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿರೀಕ್ಷೆಯ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ನಿರಾಸಕ್ತಿ ವಹಿಸಿದ್ದರು.

ಸಮ್ಮೇಳನ ಸಂಪನ್ನ :

ಕಳೆದ ಮೂರು ದಿನಗಳಿಂದ ನಡೆಯುತ್ತಿರುವ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಭಾನುವಾರ ಸಂಜೆ 7.30ರಿಂದ ಆರಂಭಗೊಂಡ ವಿವಿಧ ಶಾಲೆ -ಕಾಲೇಜು ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಂಡಿತು

ಎಲ್ಲರ ಸಹಕಾರದಿಂದ ಕಳೆದ ಮೂರು ದಿನಗಳಿಂದ ನಡೆದ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ ನೆರವೇರಿದೆ. ಕನ್ನಡ ಕಟ್ಟುವ ಕೆಲಸದಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕಾಗಿದೆ. ಸಾಹಿತ್ಯ ಸಮ್ಮೇಳನಗಳಿಂದ ಕನ್ನಡ ಭಾಷೆಯ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಲಿದೆ. ಮೀರಾ ಶಿವಲಿಂಗಯ್ಯ, ಸಮ್ಮೇಳನಾಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next