Advertisement

ಶೀಘ್ರವೇ ಕಿಮ್ಸ್‌ 1,800 ಹಾಸಿಗೆ ಆಸ್ಪತ್ರೆ

11:09 AM Dec 04, 2019 | Team Udayavani |

ಹುಬ್ಬಳ್ಳಿ: ಪ್ರತಿನಿತ್ಯ 60-70 ರೋಗಿಗಳು ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಾಗುವ ಕಿಮ್ಸ್‌ನಲ್ಲಿ ವೈದ್ಯರು ಜೀವರಕ್ಷಣಾ ಕೌಶಲ್ಯಗಳ ತರಬೇತಿ ಪಡೆಯುವುದು ಅವಶ್ಯಕವಾಗಿದೆ ಎಂದು ಕಿಮ್ಸ್‌ ನಿರ್ದೇಶಕ ಡಾ| ರಾಮಲಿಂಗಪ್ಪ ಅಂತರತಾನಿ ಹೇಳಿದರು.

Advertisement

ಕಿಮ್ಸ್‌ನ ಗೋಲ್ಡನ್‌ ಜ್ಯುಬಿಲಿ ಸಭಾಂಗಣದಲ್ಲಿ ಮಂಗಳವಾರ ಸೊಸೈಟಿ ಆಫ್‌ ಕ್ರಿಟಿಕಲ್‌ ಕೇರ್‌ಮೆಡಿಸಿನ್‌ ಸಹಯೋಗದಲ್ಲಿ ಆಯೋಜಿಸಿದ ಎರಡು ದಿನಗಳ ಕ್ರಿಟಿಕಲ್‌ ಕೇರ್‌ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿರುವವರು ಆಸ್ಪತ್ರೆಗೆ ಬಂದಾಗ ಅವರ ಆರೋಗ್ಯ ಸಮಸ್ಯೆಯನ್ನರಿತು ಸಮರ್ಪಕ ಚಿಕಿತ್ಸೆ ನೀಡುವುದು ಅವಶ್ಯಕವಾಗಿದೆ. ಈ ಕುರಿತು ವೈದ್ಯರ ಜ್ಞಾನ ಹೆಚ್ಚಿಸಲು ಕಾರ್ಯಾಗಾರ ಆಯೋಜಿಸಲಾಗಿದೆ. ವೈದ್ಯರು ಕೌಶಲ್ಯವನ್ನು ಸದ್ಬಳಕೆ ಮಾಡಿಕೊಂಡು ಅಪ್‌ ಗ್ರೇಡ್ ಆಗಿ ರೋಗಿಗಳ ಜೀವ ರಕ್ಷಣೆಗೆ ಮುಂದಾಗಬೇಕು ಎಂದರು.

ಪ್ರಸ್ತುತ 1200 ಬೆಡ್‌ಗಳ ಕಿಮ್ಸ್‌ನಲ್ಲಿ ಶೀಘ್ರದಲ್ಲಿಯೇ ಬೆಡ್‌ಗಳ ಸಂಖ್ಯೆ 1800ಕ್ಕೆ ಹೆಚ್ಚಲಿದ್ದು, ನಂತರ ರಾಜ್ಯದ ದೊಡ್ಡ ಆಸ್ಪತ್ರೆ ಎಂಬ ಖ್ಯಾತಿ ಗಳಿಸಲಿದೆ. ಆಸ್ಪತ್ರೆಯಲ್ಲಿ 2 ಎಕ್ಸೆಲ್‌ -1000 ಯಂತ್ರೋಪಕರಣಗಳು ಹಾರ್ಮೊನ್‌ ಆನಲೈಸರ್‌ ಸೇವೆ ಲಭ್ಯವಿದೆ. ಸದ್ಯ ಆಸ್ಪತ್ರೆಯಲ್ಲಿ 65 ವೆಂಟಿಲೇಟರ್‌ಗಳಿದ್ದು, ಇನ್ನೂ 30 ವೆಂಟಿಲೇಟರ್‌ ಗಳನ್ನು ಶೀಘ್ರದಲ್ಲೇ ಅಳವಡಿಸಲಾಗುವುದು. ಸದ್ಯ ಕಿಮ್ಸ್‌ ಐಸಿಯುನಲ್ಲಿ 120 ಬೆಡ್‌ಗಳಿದ್ದು, ಅವುಗಳ ಸಂಖ್ಯೆ ಹೆಚ್ಚಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಹೆರಿಗೆ ಸಂದರ್ಭದಲ್ಲಾಗುತ್ತಿರುವ ಮೃತ್ಯುದರ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಹೆರಿಗೆ ಸಂದರ್ಭದಲ್ಲಿನ ಮೃತ್ಯು ದರ ಹೆಚ್ಚಾಗಿದೆ. ಸದ್ಯ ರಾಜ್ಯದಲ್ಲಿ 1 ಲಕ್ಷದಲ್ಲಿ 62 ಜನರು ಹೆರಿಗೆ ಸಂದರ್ಭದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕಿದೆ ಎಂದರು. ಅಮೆರಿಕ ಹಾಗೂ ಆಸ್ಟ್ರೇಲಿಯಾದಿಂದ ಸಂಪನ್ಮೂಲವ್ಯಕ್ತಿಗಳು ಕ್ರಿಟಿಕಲ್‌ ಕೇರ್‌ ಬಗ್ಗೆ ಉಪನ್ಯಾಸ ನೀಡಲು ಆಗಮಿಸಿದ್ದಾರೆ. ಇಲ್ಲಿನ ವೈದ್ಯರು ಅವರ ಅನುಭವವನ್ನು ಕೇಳಬೇಕು ಎಂದು ಹೇಳಿದರು. ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ| ಅರುಣಕುಮಾರ ಮಾತನಾಡಿ, ಕಿಮ್ಸ್‌ನಲ್ಲಿಯೇ ಕಲಿತು ವಿದೇಶದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ವೈದ್ಯರು ಇಲ್ಲಿ ಜೀವರಕ್ಷಣಾ ಕೌಶಲ ಕಾರ್ಯಾಗಾರ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ಆಸ್ಟ್ರೇಲಿಯಾದ ಹಿರಿಯ ವೈದ್ಯ ಡಾ| ಭೀಮಸೇನಾಚಾರ್ಯ ಪ್ರಸಾದ ಏರ್‌ವೇ ಮ್ಯಾನೇಜ್‌ಮೆಂಟ್‌ ಕುರಿತು ಮಾತನಾಡಿ, ಜೀವನ್ಮರಣ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತಂದಾಗ ಪ್ರಾಣವಾಯು ಬಗ್ಗೆ ವಿಶೇಷ ಗಮನಹರಿಸಬೇಕು. ಸಮರ್ಪಕವಾಗಿ ಆಮ್ಲಜನಕ ಪೂರೈಕೆ ಮಾಡಬೇಕು. ಇದರಿಂದ ಮಾತ್ರದೇಹದಲ್ಲಿರುವ 3 ಟ್ರಿಲಿಯನ್‌ ಜೀವಕೋಶಗಳನ್ನು ಕ್ರಿಯಾಶೀಲವಾಗಿಡಲು ಸಾಧ್ಯವಾಗುತ್ತದೆ. ಗಾಳಿ ದೇಹದ ಹೊರಗೆ ಹಾಗೂ ಒಳಗೆ, ರಕ್ತ ದೇಹದಾದ್ಯಂತ ಸಂಚರಿಸುತ್ತಿದೆ ಎಂಬುದನ್ನು ದೃಢಪಡಿಸಿಕೊಳ್ಳಬೇಕು. ಅತಿಯಾದ ಆಮ್ಲಜನಕ ಜೀವಕ್ಕೆ ಕುತ್ತು ತರಹುದಾಗಿದೆ ಎಂದರು.

Advertisement

ಅಮೆರಿಕದ ವೈದ್ಯ ಡಾ| ಕೃಷ್ಣ ಅಪರಂಜಿ ಮಾನಿಟರಿಂಗ್‌ ಆಕ್ಸಿಜನ್‌ ಬ್ಯಾಲೆನ್ಸ್‌ ಆ್ಯಂಡ್‌ ಆಸಿಡ್‌ ಬೇಸ್‌ ಸ್ಟೇಟಸ್‌ಕುರಿತು ಉಪನ್ಯಾಸ ನೀಡಿದರು. ಕಿಮ್ಸ್‌ ಪ್ರಾಚಾರ್ಯ ಡಾ| ಎಂ.ಸಿ. ಚಂದ್ರು, ಡಾ| ರಾಜೇಶ್ವರಿ ಜೈನಾಪುರ, ಡಾ| ಈಶ್ವರಹಸಬಿ, ಡಾ| .ಎಸ್‌. ಅಕ್ಕಮಹಾದೇವಿ, ಡಾ| ಬಿ.ಎಸ್‌. ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next