Advertisement

ಧಾರ್ಮಿಕ ಕಾರಣಕ್ಕೆ ಕ್ರಿಕೆಟ್ ಗೆ ವಿದಾಯ ಹೇಳಿದ 18ನೇ ವರ್ಷದ ಪಾಕ್ ಆಟಗಾರ್ತಿ ಆಯೇಷಾ ನಸೀಂ

06:48 PM Jul 20, 2023 | Team Udayavani |

ಕರಾಚಿ: ಪಾಕಿಸ್ತಾನದ ವನಿತಾ ಆಟಗಾರ್ತಿ ಆಯೇಷಾ ನಸೀಂ ಅವರು ಕ್ರಿಕೆಟಿಗೆ ವಿದಾಯ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಕೇವಲ 18ರ ಹರೆಯದ ಆಯೇಷಾ ನಸೀಂ ಅವರು ವಿದಾಯ ಹೇಳಿ ಅಭಿಮಾನಿಗಳು ಮತ್ತು ಕ್ರಿಕೆಟ್ ಉತ್ಸಾಹಿಗಳಿಗೆ ಆಘಾತವನ್ನುಂಟು ಮಾಡಿದೆ.

Advertisement

ಇಸ್ಲಾಂ ಧರ್ಮದ ಬೋಧನೆಗಳನ್ನು ಅನುಸರಿಸಿ ಹೆಚ್ಚು ಧಾರ್ಮಿಕ ಜೀವನವನ್ನು ನಡೆಸಲು ಯುವ ಬ್ಯಾಟರ್ ತನ್ನ ಸುಪ್ರಸಿದ್ಧ ವೃತ್ತಿಜೀವನಕ್ಕೆ ವಿದಾಯ ಹೇಳಿದರು. ಅವರ ನಿವೃತ್ತಿಯ ಸುದ್ದಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಯೊಂದಿಗೆ ಗುರುವಾರ ಹಂಚಿಕೊಂಡಿದೆ.

ಆಯೇಷಾ ನಸೀಂ ನಿವೃತ್ತಿಯು ಪಾಕಿಸ್ತಾನದ ಮಹಿಳಾ ಕ್ರಿಕೆಟ್‌ ನಲ್ಲಿ ಉದಯೋನ್ಮುಖ ತಾರೆಯ ನಿರ್ಗಮನವನ್ನು ಸೂಚಿಸುತ್ತದೆ. 2020 ರಲ್ಲಿ ಪದಾರ್ಪಣೆ ಮಾಡಿದ ಅವರು, ಟಿ20 ಮತ್ತು ಏಕದಿನ ಎರಡರಲ್ಲೂ ತ್ವರಿತವಾಗಿ ಹೆಸರು ಮಾಡಿದ್ದರು. ಆಕೆಯ ಆಕ್ರಮಣಕಾರಿ ಆಟದ ಶೈಲಿ ಮತ್ತು ಬೃಹತ್ ಸಿಕ್ಸರ್‌ ಗಳನ್ನು ಹೊಡೆಯುವ ಸಾಮರ್ಥ್ಯವು ಮಹಿಳಾ ಕ್ರಿಕೆಟ್‌ ನಲ್ಲಿ ವೀಕ್ಷಿಸಲು ಅತ್ಯಂತ ರೋಮಾಂಚಕಾರಿ ಆಟಗಾರ್ತಿ ಎಂಬ ಖ್ಯಾತಿಯನ್ನು ಗಳಿಸಿತ್ತು.

15 ನೇ ವಯಸ್ಸಿನಲ್ಲಿ ಆಯೇಷಾ ನಸೀಂ 2020 ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ನಲ್ಲಿ ಪಾಕಿಸ್ತಾನದ ತಂಡಕ್ಕೆ ಆಯ್ಕೆಯಾದರು. ತಮ್ಮ ಪ್ರದರ್ಶನಗಳೊಂದಿಗೆ ಪ್ರಭಾವ ಬೀರುವುದನ್ನು ಮುಂದುವರೆಸಿದ ಅವರು, ತಂಡದಲ್ಲಿ ಪ್ರಮುಖ ಆಟಗಾರ್ತಿಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದರು. ಒಟ್ಟು 33 ಟಿ20 ಪಂದ್ಯಗಳನ್ನಾಡಿರುವ ಆಯೇಷಾ ನಸೀಂ, 369 ರನ್ ಗಳಿಸಿದ್ದಾರೆ.

ತನ್ನ ಕ್ರಿಕೆಟ್ ವೃತ್ತಿಜೀವನದ ಉತ್ತಮವಾಗುತ್ತಿರುವಾಗಲೇ ಆಯೇಷಾ ನಸೀಂ ತನ್ನ ಆಧ್ಯಾತ್ಮಿಕ ಪ್ರಯಾಣಕ್ಕೆ ಆದ್ಯತೆ ನೀಡಲು ಮತ್ತು ಇಸ್ಲಾಂನ ತತ್ವಗಳಿಗೆ ಅನುಗುಣವಾಗಿ ತನ್ನ ಜೀವನವನ್ನು ನಡೆಸಲು ನಿರ್ಧರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next