Advertisement
ಸಿದ್ಧಿ ಎಂದರೆ ಯಶಸ್ಸು, ಗೆಲುವು, ಬಯಸಿದ್ದನ್ನು ಪಡೆಯುವುದು, ವಿಶೇಷ ಶಕ್ತಿಯನ್ನು ಹೊಂದುವುದು, ಪ್ರಾಪ್ತಿ, ಸಫಲತೆ ಮೊದಲಾದ ಅರ್ಥಗಳಿವೆ. ಆಧ್ಯಾತ್ಮಿಕವಾಗಿ ಪರಮಾತ್ಮತಣ್ತೀವನ್ನು ಪಡೆಯಲು ಇರಬೇಕಾದ ಶಕ್ತಿಯೇ ಸಿದ್ಧಿ. ಪರಮಾತ್ಮನ ಅಂಶದಿಂದಲೇ ವಿಶ್ವದಲ್ಲಿರುವುದೆಲ್ಲವೂ ಸೃಷ್ಟಿಯಾಗಿವೆ. ಈ ವಿಶ್ವವು ಪರಮತಣ್ತೀದಿಂದಲೇ ರಚಿತವಾದುದು. ಇದರ ಪರಮಾತ್ಮನು ಹೊರಗೂ ಇ¨ªಾನೆ; ಒಳಗೂ ಇ¨ªಾನೆ. ಇಂತಹ ಸರ್ವವ್ಯಾಪಿಯಾದ ಪರಮಾತ್ಮನು ಸೃಷ್ಟಿಯನ್ನು ಮಾಡಿದ ಸಮಷ್ಟಿತಣ್ತೀದಲ್ಲಿ ಸಾಧಕನು ತನ್ನನ್ನು ಏಕಾಕಾರ ಮಾಡಿಕೊಂಡು ಅದಕ್ಕುನುಸಾರವಾಗಿ ಆ ವಿಶೇಷ ಶಕ್ತಿಯನ್ನು ಪಡೆದುಕೊಳ್ಳುವುದೇ ಸಿದ್ಧಿ ಎಂಬುದಾಗಿ ಮದ್ಭಾಗವತದಲ್ಲಿ ಹೇಳಲಾಗಿದೆ.
Related Articles
Advertisement
ಇವುಗಳಷ್ಟೇ ಅಲ್ಲದೆ ಇನ್ನೂ ಐದು ಸಿದ್ಧಿಗಳನ್ನು ಯೋಗಿಯಾದವನು ಪಡೆಯಲು ಸಾಧ್ಯ ಎಂದು ಭಗವಾನ… ಶ್ರೀಕೃಷ್ಣನು ಹೇಳಿ¨ªಾನೆ. ಭೂತ, ಭವಿಷ್ಯ ಮತ್ತು ವರ್ತಮಾನದ ಮಾತನ್ನು ತಿಳಿದುಕೊಳ್ಳುವುದು, ಶೀತ ಉಷ್ಣ, ಸುಖ ದುಃಖ, ರಾಗ ದ್ವೇಷ ಮೊದಲಾದ ದ್ವಂದ್ವಗಳಿಗೆ ವಶನಾಗದಿರುವುದು, ಬೇರೆಯವರ ಮನಸ್ಸಿನ ಮಾತನ್ನು ಅರಿತುಕೊಳ್ಳುವುದು, ಅಗ್ನಿ, ಸೂರ್ಯ, ಜಲ, ವಿಷ ಮುಂತಾದವುಗಳ ಶಕ್ತಿಯನ್ನು ಸ್ತಂಭಿತಗೊಳುಸುವುದು ಮತ್ತು ಯಾರಿಂದಲೂ ಸೋಲದಿರುವುದು. ಈ ಐದೂ ಸಿದ್ಧಿಗಳು ಯೋಗಧಾರಣೆಯಿಂದ ಪ್ರಾಪ್ತವಾಗುತ್ತವೆ.
ಜಗತ್ತಿನಲ್ಲಿ ಭೋಗ ಲಾಲಸೆಗಳು ಬಹಳವಾಗಿಯೇ ತುಂಬಿಕೊಂಡಿದೆ. ಅವುಗಳಿಂದ ದೇಹವನ್ನೂ, ಮನಸ್ಸನ್ನೂ ದೂರವಿಡಲು ಇಂತಹ ಸಿದ್ಧಿಗಳು ಸಹಾಯಕ ಸಾಧನಗಳು. ಆ ಹದಿನೆಂಟು ಸಿದ್ಧಿಗಳನ್ನು ಪಡೆಯಲಿಕ್ಕಾಗದೇ ಹೋದರೂ, ಕೊನೆಯ ಐದು ಸಿದ್ಧಿಗಳನ್ನು ಪಡೆಯುವ ಪ್ರಯತ್ನವನ್ನು ಮನುಷ್ಯ ಮಾಡಬೇಕು. ನಮ್ಮೊಳಗಿನ ನಾನು ಮತ್ತು ಪರರೊಳಗಿನ ಅವನು ಯಾವತ್ತೂ ಬೇರೆಯಲ್ಲ. ಎರಡೂ ಒಂದೇ; ಒಬ್ಬನೇ. ಇವನ್ನೆಲ್ಲ ವಿಶ್ವವ್ಯಾಪಿಯಾಗಿ ಅರಿಯುವ ಜ್ಞಾನಕ್ಕಾಗಿ, ಎಲ್ಲರೂ ಒಂದಾಗುವ, ಎಲ್ಲರನ್ನೂ ಒಂದಾಗಿಸುವ ಸಿದ್ಧಿಯ ಸಾûಾತ್ಕಾರಕ್ಕಾಗಿ ಎಲ್ಲರೂ ಸನ್ಮಾರ್ಗದಲ್ಲಿಯೇ ನಡೆಯಬೇಕು; ಯೋಗಸಾಧನೆಯಲ್ಲಿ ಸಾಗಬೇಕು.
ಶ್ರೀ ಕೃಷ್ಣನು ಸೃಷ್ಟಿಯು ಒಳಗೊಂಡಿರುವ ಮತ್ತು ಅವುಗಳಿಂದಲೇ ಆತ್ಮಕಲ್ಯಾಣವಾಗುವ ಇಪ್ಪತ್ತೆಂಟು ತಣ್ತೀಗಳನ್ನು ಹೇಳಿ¨ªಾನೆ. ಆ ಇಪ್ಪತ್ತೆಂಟು ತಣ್ತೀಗಳೆಂದರೆ ಪ್ರಕೃತಿ, ಪುರುಷ, ಮಹತಣ್ತೀ,ಅಹಂಕಾರ, ಪಂಚತನ್ಮಾತ್ರೆಗಳು (ಒಟ್ಟು ಒಂಭತ್ತು), ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಒಂದು ಮನಸ್ಸು (ಒಟ್ಟು ಹನ್ನೊಂದು), ಪಂಚಮಹಾಭೂತಗಳು, ತ್ರಿಗುಣಗಳು (ಒಟ್ಟು ಎಂಟು). ಎಲ್ಲವೂ ಸೇರಿ ಒಟ್ಟಿಗೆ ಇಪ್ಪತ್ತೆಂಟು.