Advertisement

18 ಜನರಿಗೆ ಸೋಂಕು-13 ಜನ ಗುಣಮುಖ; ಮಹಾಮಾರಿಗೆ ಜಿಲ್ಲೆಯಲ್ಲಿ ಇಬ್ಬರು ಬಲಿ

01:01 PM Jun 26, 2020 | mahesh |

ಬಾಗಲಕೋಟೆ: ಜಿಲ್ಲೆಯಲ್ಲಿ ಗುರುವಾರ ಮೂವರು ಮಕ್ಕಳು ಸಹಿತ 18 ಜನರಿಗೆ ಕೋವಿಡ್ ಸೋಂಕು ತಗುಲಿದ್ದು, ಕೋವಿಡ್‌ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಜನರು ಕೋವಿಡ್ ಮುಕ್ತರಾಗಿ ಬಿಡುಗಡೆಗೊಂಡಿದ್ದಾರೆ. ಕಳೆದ ಜೂ. 12ರಂದು ಬಾಗಲಕೋಟೆಯಲ್ಲಿ ಮದುವೆ ಮಾಡಿಕೊಂಡಿದ್ದ ಕಲಾದಗಿಯ ಅಬಕಾರಿ ಸಬ್‌ ಇನ್ಸ್‌ಪೆಕ್ಟರ್‌ಗೆ ಸೋಂಕು ಖಚಿತವಾಗಿತ್ತು. ಅವರ ಸಂಪರ್ಕದಲ್ಲಿದ್ದ ಐದು ಜನರಿಗೆ ಕೋವಿಡ್ ತಗುಲಿರುವುದು ಖಚಿತವಾಗಿದೆ. ಅಲ್ಲದೇ
ಬಾಗಲಕೋಟೆ ತಾಲೂಕಿನ ಹಿರೇಮ್ಯಾಗೇರಿಯಲ್ಲಿ ಕಳೆದ ಮಂಗಳವಾರ ಮೃತಪಟ್ಟಿದ್ದ 57 ವರ್ಷದ ರೈಲ್ವೆ ಇಲಾಖೆಯ ಅಧಿಕಾರಿಗೆ (ಪಿ-10173)ಸೋಂಕು ಇರುವುದು ಖಚಿತವಾಗಿದೆ.

Advertisement

155ಕ್ಕೆ ಏರಿದ ಸೋಂಕಿತರ ಸಂಖ್ಯೆ: ಕಲಾದಗಿಯ ಸೋಂಕಿತ ನವ-ವಿವಾಹಿತದ ಪಿ-8300 ವ್ಯಕ್ತಿಯ ಸಂಪರ್ಕದಿಂದ 57 ವರ್ಷದ ಪುರುಷ ಪಿ-10156 (ಬಿಜಿಕೆ-138), 40 ವರ್ಷದ ಮಹಿಳೆ ಪಿ-10157 (ಬಿಜಿಜೆ-139), 32 ವರ್ಷದ ಪುರುಷ ಪಿ-10158 (ಬಿಜಿಕೆ-140), 33 ವರ್ಷದ ಪುರುಷ ಪಿ-10159 (ಬಿಜಿಕೆ-141), 51 ವರ್ಷದ ಪುರುಷ ಪಿ-10160 (ಬಿಜಿಕೆ-142) ಆವರಿಗೆ ಸೋಂಕು ತಗುಲಿದೆ. ಮುಂಬೈನಿಂದ ಆಗಮಿಸಿದ್ದ ಬನಹಟ್ಟಿಯ 28 ವರ್ಷದ ಯುವತಿ ಪಿ-10161 (ಬಿಜಿಜೆ-143), 17 ವರ್ಷದ ಬಾಲಕಿ ಪಿ-10162 (ಬಿಜಿಕೆ-144) ಅವರಿಗೆ ಸೋಂಕು ತಗುಲಿದ್ದು, ಇವರು ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದರು.

ಇನ್ನು ಸೊಲ್ಲಾಪುರದ ಆಸ್ಪತ್ರೆಗೆ ಹೋಗಿ ಬಂದಿದ್ದ ಬನಹಟ್ಟಿಯ ಪಿ-9151 ಸೋಂಕಿತ ಮಹಿಳೆಯ ಸಂಪರ್ಕದಿಂದ ಅವರದೇ ಕುಟುಂಬದ 32 ವರ್ಷದ ಪುರುಷ ಪಿ-10163 (ಬಿಜಿಕೆ-145), 28 ವರ್ಷದ ಯುವತಿ ಪಿ-10164 (ಬಿಜಿಕೆ-146), 65 ವರ್ಷದ ಪುರುಷ ಪಿ-10165 (ಬಿಜಿಕೆ-147), 7 ವರ್ಷದ ಬಾಲಕಿ
ಪಿ-10166 (ಬಿಜಿಕೆ-148), 5 ವರ್ಷದ ಬಾಲಕ ಪಿ-10167 (ಬಿಜಿಕೆ-149) ಅವರಿಗೆ ಸೋಂಕು ತಗುಲಿದ್ದು, ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪುಣೆದಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ ಮುಧೋಳನ 20 ವರ್ಷದ ಯುವಕ ಪಿ-10168 (ಬಿಜಿಜೆ-150), ಮುಂಬಯಿದಿಂದ ಆಗಮಿಸಿದ 18 ವರ್ಷದ ಯುವತಿ
ಪಿ-10169 (ಬಿಜಿಕೆ-151) ಹಾಗೂ ಮಹಾರಾಷ್ಟ್ರದ ಬೇವಂಡಿ ಟಾನಾದಿಂದ ಆಗಮಿಸಿದ್ದ ಜಮಖಂಡಿ ತಾಲೂಕಿನ ಕುಂಚನೂರ ಗ್ರಾಮದ 31 ವರ್ಷದ ಪುರುಷ ಪಿ-10170 (152), 28 ವರ್ಷದ ಯುವತಿ ಪಿ-10171 (ಬಿಜಿಕೆ-153), 4 ವರ್ಷದ ಬಾಲಕ ಪಿ-10172 (ಬಿಜಿಕೆ-154) ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

13 ಜನ ಕೋವಿಡ್ ಮುಕ್ತ: ಸೋಂಕಿತ 13 ಜನ ಸಂಪೂರ್ಣವಾಗಿ ಗುಣಮುಖರಾಗಿದ್ದು, ಜಿಲ್ಲಾ ಆಸ್ಪತ್ರೆಯಿಂದ ಗುರುವಾರ ಸಂಜೆ ಬಿಡುಗಡೆ ಮಾಡಲಾಯಿತು. ಬಾದಾಮಿ ತಾಲೂಕಿನ ಯಂಡಿಗೇರಿ ಗ್ರಾಮದ 26 ವರ್ಷದ ಯುವಕ ಪಿ-6828, ರಾಗಾಪೂರ ಗ್ರಾಮದ 55 ವರ್ಷದ ಮಹಿಳೆ ಪಿ-7950, 2 ವರ್ಷದ ಮಗು ಪಿ-7951, ಹುನಗುಂದ ತಾಲೂಕಿನ ಗುಡೂರಿನ 50 ವರ್ಷದ ಮಹಿಳೆ ಪಿ-8301, ಬಾಗಲಕೋಟೆಯ ನವನಗರದ ಸೆಕ್ಟರ್‌ ನಂ.2ರ 47 ವರ್ಷ ಪುರುಷ ಪಿ-7549, 16 ವರ್ಷದ ಬಾಲಕಿ ಪಿ-7548, ಮುಧೋಳನ 14 ವರ್ಷದ ಬಾಲಕ ಪಿ-8707, 45 ವರ್ಷದ ಮಹಿಳೆ ಪಿ-8708, 56 ವರ್ಷದ ಪುರುಷ ಪಿ-8706, 55 ವರ್ಷದ ಮಹಿಳೆ ಪಿ-8705, ಜಮಖಂಡಿಯ 36 ವರ್ಷದ ಪುರುಷ ಪಿ-8710, ಮುಧೋಳನ 35 ವರ್ಷದ ಪುರುಷ ಪಿ-7547, 11 ವರ್ಷದ ಬಾಲಕಿ ಪಿ-8704 ಕೋವಿಡ್‌ದಿಂದ ಗುಣಮುಖರಾಗಿದ್ದಾರೆ.

Advertisement

ಜಿಲ್ಲೆಯ ಒಟ್ಟು 155 ಜನ ಸೋಂಕಿತರಲ್ಲಿ ಈ ವರೆಗೆ 113 ಜನ ಗುಣಮುಖರಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಗುರುವಾರ ಪತ್ತೆಯಾದ 17 ಜನ ಸಹಿತ ಒಟ್ಟು 40 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗುಣಮುಖರಾದವರಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪ್ರಕಾಶ ಬಿರಾದಾರ ಪ್ರಮಾಣ ಪತ್ರ ವಿತರಿಸಿದರೆ, ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.

ಮೃತ ರೈಲ್ವೆ ಅಧಿಕಾರಿಗೂ ಕೋವಿಡ್
ಬಾಗಲಕೋಟೆ: ರೈಲ್ವೆ ಇಲಾಖೆಯಲ್ಲಿ ಟಿಕೆಟ್‌ ಪರಿಶೀಲನೆ ಅಧಿಕಾರಿಯಾಗಿದ್ದ ಚಿಕ್ಕಮ್ಯಾಗೇರಿ (ಹಿರೇಮ್ಯಾಗೇರಿ) ಗ್ರಾಮದ ನಿವಾಸಿ ಮಂಗಳವಾರ ಮೃತಪಟ್ಟಿದ್ದು, ಕೋವಿಡ್ ಸೋಂಕಿರುವುದು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಕೋವಿಡ್ ದಿಂದ ಮೃತಪಟ್ಟವರ ಸಂಖ್ಯೆ ಏರಡಕ್ಕೇರಿದೆ. ಚಿಕ್ಕಮ್ಯಾಗೇರಿಯ 57 ವರ್ಷದ ಪಿ-10173 (ಬಿಜಿಕೆ-155) ವ್ಯಕ್ತಿ ಹುಬ್ಬಳ್ಳಿ-ಮೀರಜ್‌ ಮಾರ್ಗದ ರೈಲ್ವೆಯಲ್ಲಿ ಟಿಕೆಟ್‌ ಪರಿಶೀಲನೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕಳೆದ ಜೂ.11ರಂದು ಮರಳಿ ತಮ್ಮೂರಿಗೆ ಬಂದಿದ್ದರು. ಈ ವೇಳೆ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಅವರು ಮಂಗಳವಾರ ಮೃತಪಟ್ಟಿದ್ದರು. ಶಂಕೆ ಹಿನ್ನೆಲೆಯಲ್ಲಿ ಅವರ ಗಂಟಲು ಮಾದರಿ ಪರೀಕ್ಷೆ ಮಾಡಿದ್ದು, ಜಿಲ್ಲಾ ಲ್ಯಾಬ್‌ನಲ್ಲಿ ಸೋಂಕಿರುವುದು ಖಚಿತವಾಗಿತ್ತು. ಬಳಿಕ ಬೆಂಗಳೂರಿಗೆ ತಪಾಸಣೆಗೆ ಕಳುಹಿಸಿದ್ದು, ಅಲ್ಲೂ ಕೋವಿಡ್‌ ಇರುವುದು ಖಚಿತಪಟ್ಟಿದೆ. ಮಂಗಳವಾರ ಮೃತಪಟ್ಟಿದ್ದ ರೈಲ್ವೆ ಅಧಿಕಾರಿ ಶವವನ್ನು ಕುಟುಂಬದವರು, ಸಂಬಂಧಿಕರು ಸ್ನಾನ ಮಾಡಿಸಿ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ಮುಂದಾಗಿದ್ದರು. ಆದರೆ ಸ್ಥಳೀಯ ಲ್ಯಾಬ್‌ನಲ್ಲಿ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ತಾಲೂಕು ಆಡಳಿತದಿಂದ ಕೋವಿಡ್‌-19 ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗಿತ್ತು. ಕಳೆದ ಏಪ್ರಿಲ್‌ 3ರಂದು ಬಾಗಲಕೋಟೆ ನಗರದ 76 ವರ್ಷದ ವೃದ್ಧ ಕೊರೊನಾದಿಂದ ಮೃತಪಟ್ಟಿದ್ದರು. ಇದೀಗ ಚಿಕ್ಕಮ್ಯಾಗೇರಿಯಲ್ಲಿ ಮತ್ತೂಬ್ಬ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ.

18 ಜನರಿಗೆ ಪಾಸಿಟಿವ್‌: ಗುರುವಾರ ಜಿಲ್ಲೆಯಲ್ಲಿ ಮೂವರು ಮಕ್ಕಳು ಸಹಿತ 18 ಜನರಿಗೆ ಸೋಂಕು ತಗುಲಿದೆ. ಕಳೆದ ಜೂ.12ರಂದು ಮದುವೆ ಮಾಡಿಕೊಂಡಿದ್ದ ಸೋಂಕಿತ ಅಬಕಾರಿ ಇಲಾಖೆಯ ಸಬ್‌ ಇನ್ಸ್‌ಪೆಕ್ಟರ್‌ ಸಂಪರ್ಕದಿಂದ ಕಲಾದಗಿಯ ಐವರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆಯಾಗಿದ್ದು, ಈ ಪೈಕಿ 113 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ರಬಕವಿ-ಬನಹಟ್ಟಿಯಲ್ಲಿ 7 ಪಾಸಿಟಿವ್‌ ಪ್ರಕರಣ ಬನಹಟ್ಟಿ: ರಬಕವಿ-ಬನಹಟ್ಟಿಯಲ್ಲಿ ಗುರುವಾರ ಒಟ್ಟು 7 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು, ಅದರಲ್ಲಿ
ಐವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರೆ, ಇಬ್ಬರು ಮಹಾರಾಷ್ಟ್ರದಿಂದ ಬಂದವರಿಗೆ ಕೊರೊನಾ ಸೋಂಕು ತಗುಲಿದೆ. ಸ್ಥಳೀಯ ಲಕ್ಷ್ಮೀ ನಗರದಲ್ಲಿ ಹೋಂ ಕ್ವಾರಂಟೈನ್‌ ನಲ್ಲಿದ್ದ ಪಿ-9151 ಮಹಿಳೆಗೆ ಕಳೆದ ಸೋಮವಾರ ಕೊರೊನಾ ದೃಢಪಟ್ಟಿತ್ತು. ಮಹಿಳೆಯ ಪತಿ, ಮಗ, ಸೊಸೆ ಹಾಗೂ ಇಬ್ಬರು ಮಕ್ಕಳನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಅವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ 5 ಜನರಿಗೆ ಪಾಸಿಟಿವ್‌ ಬಂದಿದ್ದರಿಂದ ಅವರನ್ನು ಬಾಗಲಕೋಟೆಯ ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪಿ-9151ರ ಮನೆಯವರು ನಾವಲಗಿ ಹಾಗೂ ಬನಹಟ್ಟಿಯಲ್ಲಿ ಗೊಬ್ಬರ ಹಾಗೂ ಬೀಜ ವ್ಯಾಪಾರ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರ ಸಂಪರ್ಕಿತರ ಮಾಹಿತಿ ಕಲೆ ಹಾಕಿ ಬನಹಟ್ಟಿಯ 14 ಹಾಗೂ ನಾವಲಗಿ ಗ್ರಾಮದ 11 ಜನ ಸೇರಿದಂತೆ 25 ಜನ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದೆ.  ಇನ್ನೂಳಿದ ಇಬ್ಬರು ಮಹಾರಾಷ್ಟ್ರ ರಾಜ್ಯದಿಂದ ಬಂದವರಾಗಿದ್ದು, ಅವರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಅವರನ್ನು ಕೂಡಾ ಬಾಗಲಕೋಟೆಯ ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next