ಮೈಸೂರು: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ರಾಜಕೀಯ ಬಿಟ್ಟು ಹೋಗ್ತಿàನಿ ಬರೆದಿಟ್ಟುಕೊಳ್ಳಿ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸವಾಲು ಹಾಕಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರಕ್ಕಾಗಲಿ, ರಾಜ್ಯಕ್ಕಾಗಲಿ ಮೋದಿ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಬಿಜೆಪಿಯವರು ಇಲ್ಲಿವರೆಗೆ ರಾಮನ ಭಜನೆ ಮಾಡುತ್ತಿದ್ದರು. ಈಗ ರಾಮ-ಕೃಷ್ಣ ಎಲ್ಲರನ್ನೂ ಬಿಟ್ಟ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ,ಈಶ್ವರಪ್ಪ, ಜಗದೀಶ್ ಶೆಟ್ಟರ್ ಎಲ್ಲರೂ, ಬೆಳಗ್ಗೆ ಎದ್ದರೆ ಎಚ್.ಡಿ.ದೇವೇಗೌಡರ ಭಜನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
22, 6,8 ನಮಗೆ ಲಕ್ಕಿ ನಂಬರ್. ಏ.18ರಂದು ಮೊದಲ ಹಂತದ ಚುನಾವಣೆ ನಡೆಯುವ ದಿನಾಂಕವನ್ನೊಮ್ಮೆ ಗಮನಿಸಿ 8 ಪ್ಲಸ್ 1 ಒಂಭತ್ತಾಗುತ್ತೆ. ಹೀಗಾಗಿ, ಅಂದು ಚುನಾವಣೆ ನಡೆಯುವ ಎಲ್ಲಾ 14ಕ್ಷೇತ್ರಗಳನ್ನೂ ಮೈತ್ರಿ ಪಕ್ಷ ಗೆಲ್ಲಲಿದೆ. 22 ನಮಗೆ ಲಕ್ಕಿ ನಂ ಬರ್, ಯಡಿಯೂರಪ್ಪ ಅವರಿಗೆ ಈ ಸಂಖ್ಯೆ ಲಕ್ಕಿ ಆಗಲ್ಲ. ರಾಜ್ಯದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಫಲಿತಾಂಶ ಬರಲಿದ್ದು, ಮೈತ್ರಿ ಪಕ್ಷ 22 ಸ್ಥಾನಗಳನ್ನು ಗೆಲ್ಲುತ್ತದೆ. ಯುಪಿಎ ಅಧಿಕಾರಕ್ಕೆ ಬರುತ್ತೆ ಬರೆದಿಟ್ಟುಕೊಳ್ಳಿ ಎಂದರು.
ನಮ್ಮ ಕುಲದೇವರು ಈಶ್ವರ. ನಿಂಬೆಹಣ್ಣು ಹಿಡಿದುಕೊಳ್ಳುವುದರಿಂದ ಎಫೆಕ್ಟ್ ಆಗುತ್ತೆ, ಅದಕ್ಕೆ ಇಟ್ಟುಕೊಂಡಿರಿ¤àನಿ ಎಂದರು.
ದೇವೇಗೌಡರದು ಕುಟುಂಬ ರಾಜಕಾರಣ ಎಂದು ಟೀಕೆ ಮಾಡುತ್ತಾರೆ. ಜಗದೀಶ್ ಶೆಟ್ಟರ್ ತಮ್ಮನ್ನ ನಿಲ್ಲಿಸಿಲ್ವಾ? ಯಡಿಯೂರಪ್ಪ ಮಗನ್ನ ನಿಲ್ಲಿಸಿಲ್ವಾ? ಇವರಿಗೆ ನೈತಿಕತೆ ಇದ್ದರೆ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಬೇಕಿತ್ತು. 18ನೇ ತಾರೀಖು ನಿಖೀಲ್ ಕುಮಾರಸ್ವಾಮಿಗೆ ಮಂಡ್ಯದ ಜನ ಹೆಂಗೆ ಮಿಷನ್‌ನಲ್ಲಿ ಹೊಡಿತಾರೆ (ಮತ ಹಾಕ್ತಾರೆ)ನೋಡ್ತಾಯಿರಿ.
– ಎಚ್.ಡಿ.ರೇವಣ್ಣ ಸಚಿವ