Advertisement

ಭಾರತ-ಚೀನಾ ಗಡಿ ಬಳಿ 18 ಕಾರ್ಮಿಕರು ನಾಪತ್ತೆ; ಓರ್ವನ ಶವ ಪತ್ತೆ

09:22 AM Jul 19, 2022 | Team Udayavani |

ಇಟಾನಗರ: ಅರುಣಾಚಲ ಪ್ರದೇಶದ ಕುರುಂಗ್ ಕುಮೇ ಜಿಲ್ಲೆಯ ಭಾರತ-ಚೀನಾ ಗಡಿಯ ಬಳಿ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು, 18 ಮಂದಿ ನಾಪತ್ತೆಯಾಗಿದ್ದಾರೆ. ಡ್ಯಾಮಿನ್‌ನಲ್ಲಿ ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ವಾರದ ಹಿಂದೆ ನಾಪತ್ತೆಯಾಗಿದ್ದರು.

Advertisement

ಎಲ್ಲಾ 19 ಮಂದಿ ಕಾರ್ಮಿಕರು ಕಳೆದ ವಾರ ಯೋಜನಾ ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಅವರಲ್ಲಿ ಓರ್ವ ಕಾರ್ಮಿಕನ ಶವ ಹತ್ತಿರದ ನದಿಯಲ್ಲಿ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಖಚಿತಪಡಿಸಿದ್ದಾರೆ.

ಗಡಿ ರಸ್ತೆಗಳ ಸಂಸ್ಥೆಯು ಈಶಾನ್ಯ ರಾಜ್ಯಗಳಲ್ಲಿ ಮೂಲಸೌಕರ್ಯ ಯೋಜನೆಗಳ ವ್ಯಾಪಕ ಜಾಲವನ್ನು ನಿರ್ಮಿಸುತ್ತಿದೆ. ಭಾರತ-ಚೀನಾ ಗಡಿಯ ಸಮೀಪವಿರುವ ಡಾಮಿನ್ ವೃತ್ತದಲ್ಲಿ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಈ ಕಾರ್ಮಿಕರನ್ನು ಕರೆತರಲಾಗಿದೆ.

ಡೆಪ್ಯುಟಿ ಕಮಿಷನರ್ ಬೆಂಗಿಯಾ ನಿಘೀ ಅವರ ಪ್ರಕಾರ, ಒಬ್ಬನ ಮೃತದೇಹ ಪತ್ತೆಯಾಗಿದೆ. ಆದರೆ ಎಲ್ಲಾ ಕಾರ್ಮಿಕರು ಡಾಮಿನ್‌ ನ ಕುಮೇ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನುತ್ತವೆ ಸ್ಥಳೀಯ ವರದಿಗಳು.

ಇದನ್ನೂ ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವಾದ ವಿಂಡೀಸ್ ಸ್ಪೋಟಕ ಆಟಗಾರ ಲೆಂಡ್ಲ್ ಸಿಮನ್ಸ್

Advertisement

ಯೋಜನಾ ಸ್ಥಳವು ಭಾರತ-ಚೀನಾ ಗಡಿಯ ಸಮೀಪವಿರುವ ಡಾಮಿನ್‌ ನಲ್ಲಿದೆ. ಕಾರ್ಮಿಕರು ಈದ್ ಹಬ್ಬವನ್ನು ಆಚರಿಸಲು ರಜೆ ನೀಡುವಂತೆ ಗುತ್ತಿಗೆದಾರ ಬೆಂಗಿಯಾ ಬಡೋಗೆ ಮನವಿ ಮಾಡಿದ್ದರು, ಆದರೆ ಗುತ್ತಿಗೆದಾರ ಅನುಮತಿ ನೀಡಲು ನಿರಾಕರಿಸಿದಾಗ ಅವರು ಓಡಿಹೋಗಿದ್ದಾರೆ, ಕುರುಂಗ್ ಕುಮೇ ಜಿಲ್ಲೆಯ ಆಳವಾದ ಕಾಡಿನಲ್ಲಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

18 ಕಾರ್ಮಿಕರು ಇನ್ನೂ ಕಾಣೆಯಾಗಿದ್ದಾರೆ. ಕಾಣೆಯಾದ ಕಾರ್ಮಿಕರನ್ನು ಹುಡುಕಲು ಮತ್ತು ಎಲ್ಲಾ ಕಾರ್ಮಿಕರು ಕುಮೇ ನದಿಯಲ್ಲಿ ಮುಳುಗಿದ ವರದಿಗಳನ್ನು ಪರಿಶೀಲಿಸಲು ರಕ್ಷಣಾ ತಂಡವನ್ನು ಯೋಜನೆಯ ಭಾಗಕ್ಕೆ ಕಳುಹಿಸಲಾಗುವುದು ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next