Advertisement

ಫ‌ಗ್ವಾರಾ : 3 ವಾಹನಗಳ ಢಿಕ್ಕಿಯಲ್ಲಿ 18 ಮಂದಿಗೆ ಗಾಯ

12:37 PM Dec 06, 2017 | udayavani editorial |

ಫ‌ಗ್ವಾರಾ : ಫ‌ಗ್ವಾರಾ – ಹೋಶಿಯಾರ್‌ಪುರ ರಸ್ತೆಯಲ್ಲಿಂದು ಮೂರು ವಾಹನಗಳು ಸರಣಿ ಅಪಘಾತಗಳಲ್ಲಿ ಶಾಮೀಲಾದ ಪರಿಣಾಮವಾಗಿ ಒಟ್ಟು 18 ಮಂದಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ಹಿಮಾಚಲ ಪ್ರದೇಶದಲ್ಲಿನ ಮಾತಾ ಚಿಂತಪೂರ್ಣಿ ದೇವಾಲಯದಿಂದ ಬರುತ್ತಿದ್ದ ಸಂಗ್ರೂರ್‌ ಕಡೆಗೆ ಹೋಗುತ್ತಿದ್ದ ರಾಜ್ಯ ಸಾರಿಗೆ ಬಸ್ಸು, ಹೋಶಿಯಾರ್‌ಪುರ ಕಡೆಗೆ ಸಾಗುತ್ತಿದ್ದ ಟ್ರಕ್ಕಿಗೆ ಇಲ್ಲಿಂದ ಆರು ಕಿ.ಮೀ. ದೂರದ ಖುರಾಂಪುರ ಎಂಬ ಗ್ರಾಮದಲ್ಲಿ ಢಿಕ್ಕಿ ಹೊಡೆಯಿತು. 

ಆಗ ವೇಗವಾಗಿ ಇದೇ ಮಾರ್ಗದಲ್ಲಿ ಧಾವಿಸಿ ಬಂದ ಇನ್ನೊಂದು ಬಸ್ಸು ಈ ಎರಡು ವಾಹನಗಳಿಗೆ ಢಿಕ್ಕಿ ಹೊಡೆಯಿತು. ಪರಿಣಾಮವಾಗಿ 18 ಮಂದಿ ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next