Advertisement

ಕುಷ್ಟಗಿಯಲ್ಲಿ ಒಂದೇ ದಿನ 18 ಪ್ರಕರಣ

01:26 PM Jul 14, 2020 | Suhan S |

ಕುಷ್ಟಗಿ: ಕುಷ್ಟಗಿ ತಾಲೂಕಿನಲ್ಲಿ ಸೋಮವಾರ ಒಂದೇ ದಿನ 18 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ಜನತೆಯಲ್ಲಿ ನಡುಕ ಹುಟ್ಟಿಸಿದೆ.

Advertisement

ಸೋಮವಾರ ದೃಢಪಟ್ಟ 18 ಪ್ರಕರಣಗಳಲ್ಲಿ ಬಹುಪಾಲು ಪ್ರಕರಣಗಳು ಗ್ರಾಮೀಣ ವಲಯದಲ್ಲಿ ಕಂಡು ಬಂದಿದೆ. ಹುಲ್ಸಗೇರಾ, ತಾವರಗೇರಾ, ಕಳಮಳ್ಳಿ, ಮುದೇನೂರು, ಗರ್ಜನಾಳ, ಕಳಮಳ್ಳಿ ತಾಂಡ, ಕೂಡೂರು, ಮಾಲಗಿತ್ತಿ, ಹನುಮನಾಳ ಗ್ರಾಮಗಳಲ್ಲಿ ತಲಾ ಒಂದು ಪ್ರಕರಣ, ನವಲಹಳ್ಳಿ ಗ್ರಾಮದಲ್ಲಿ 4 ಪ್ರಕರಣಗಳು ಕಂಡುಬಂದಿವೆ.

ಯಾದಗಿರಿ ಜಿಲ್ಲೆ ನಾರಾಯಣಪುರ ಮೂಲದ ವ್ಯಕ್ತಿಯೊಬ್ಬರು ಕುಷ್ಟಗಿ ತಾಲೂಕು ಆಸ್ಪತ್ರೆಯಲ್ಲಿ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿಸಿದ ಹಿನ್ನೆಲೆಯಲ್ಲಿ ಇವರದ್ದು ಸೇರಿದಂತೆ ಕುಷ್ಟಗಿ ಪಟ್ಟಣದ ಮೂಲದ ಇನ್ನೋರ್ವ ಕೊಪ್ಪಳದಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದು

ಕೋವಿಡ್‌ ದೃಢಪಟ್ಟಿದ್ದರಿಂದ ಅಲ್ಲಿಯೇ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇನ್ನೋರ್ವ ಅಗ್ನಿಶಾಮಕ ಸಿಬ್ಬಂದಿಗೂ ಮಹಾಮಾರಿ ವಕ್ಕರಿಸಿದೆ. ಈ ಪೈಕಿ 16 ಜನರನ್ನು ತಳಕಲ್‌ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋವಿಡ್‌ ಸೋಂಕಿತ ಗ್ರಾಮಗಳಲ್ಲಿ ಆಯಾ ಗ್ರಾಪಂ, ಪಪಂ ಹಾಗೂ ಪುರಸಭೆ ಸೀಲ್‌ ಡೌನ್‌, ನಿರ್ಬಂಧಿ ತ ವಲಯ, ಸ್ವತ್ಛತೆ, ಔಷಧಿ  ಸಿಂಪಡಣೆಯ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಈ ಎಲ್ಲ ಸೋಂಕಿತರು ಬೆಂಗಳೂರು, ಗುಜರಾತ್‌, ಗೋವಾದಿಂದ ಬಂದವರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next