Advertisement

ಬೆಂಗಳೂರು ಜಿಲ್ಲೆಯಲ್ಲಿ 18 ಎಕರೆ ಒತ್ತುವರಿ ಭೂಮಿ ತೆರವು : ಜೆ ಮಂಜುನಾಥ್

06:31 PM Mar 06, 2021 | Team Udayavani |

ಬೆಂಗಳೂರು : ನಗರ ಜಿಲ್ಲೆಯಲ್ಲಿ ಇಂದು ಏಕಕಾಲಕ್ಕೆ ನಾಲ್ಕು ತಾಲ್ಲೂಕುಗಳಲ್ಲಿ ಕೈಗೊಳ್ಳಲಾದ ತೆರವು ಕಾರ್ಯಾಚರಣೆಯಲ್ಲಿ,  ಅಕ್ರಮವಾಗಿ ಒತ್ತುವರಿಯಾದ ಒಟ್ಟು ರೂ. 34.50 ಕೋಟಿ ಮೌಲ್ಯದ ಸರ್ಕಾರಿ ಕೆರೆ, ಗುಂಡುತೋಪು, ಗೋಮಾಳ ಜಮೀನುಗಳ ಒಟ್ಟು 18 ಎಕರೆ ಪ್ರದೇಶವನ್ನು ತೆರವುಗೊಳಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ತಿಳಿಸಿದ್ದಾರೆ.

Advertisement

ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವು ಕಾರ್ಯಾಚರಣೆ ನಡೆಸಿ, ಜಿಲ್ಲೆಯ ವಿಭಾಗಾಧಿಕಾರಿಗಳು, ಬಿ.ಎಂ.ಟಿ.ಎಫ್. ಅಧಿಕಾರಿಗಳು, ಪೋಲೀಸ್ ಅಧಿಕಾರಿಗಳು, ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರ್, ರಾಜಸ್ವ ನಿರೀಕ್ಷಕರು ಹಾಗೂ ಅವರ ಸಿಬ್ಬಂದಿ ವರ್ಗದವರ ಸಹಯೋಗದಿಂದಿಗೆ ತೆರವುಗೊಳಿಸಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದ್ದು, ಅದರಂತೆ  ಬೆಂಗಳೂರು ಉತ್ತರ  ತಾಲ್ಲೂಕು, ದಾಸನಪುರ  ಹೋಬಳಿ, ಕುದುರೆಗೆರೆ ಗ್ರಾಮದ

30-31 ಎ/ಗುಂಟೆ ವಿಸ್ತೀರ್ಣದ ಸರ್ಕಾರಿ ಕೆರೆ ಸರ್ವೆ ನಂ. 100 ರಲ್ಲಿ ಒಟ್ಟು  0-30 ಎಕರೆ ಜಮೀನು ಒತ್ತುವರಿಯಾಗಿದ್ದು, ಅದನ್ನು  ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರ್  ಬಾಲಕೃಷ್ಣ,  ಮತ್ತು ಅವರ ಸಿಬ್ಬಂದಿ ಸಹಕಾರದಿಂದ ಇಂದು ತೆರವುಗೊಳಿಸಲಾಗಿದೆ ಎಂದು  ತಿಳಿಸಿದ ಜಿಲ್ಲಾಧಿಕಾರಿಗಳು ದಾಸನಪುರ  ಹೋಬಳಿ, ಕುದುರೆಗೆರೆ ಗ್ರಾಮದ ಸರ್ಕಾರಿ ಗುಂಡುತೋಪು ಸರ್ವೆ ನಂ. 81 ರಲ್ಲಿ ಒಟ್ಟು  02-30 ಎ/ಗುಂಟೆ ವಿಸ್ತೀರ್ಣದ ಪೈಕಿ 02-30 ಎಕರೆ ಜಮೀನು ಒತ್ತುವರಿಯಾಗಿದ್ದು, ಅಂದಾಜು ರೂ. 06.50 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ತೆರವುಗೊಳಿಸಲಾಯಿತು ಎಂದು ತಿಳಿಸಿದರು.

Advertisement

ಯಲಹಂಕ  ತಾಲ್ಲೂಕು, ಹೆಸರಘಟ್ಟ ಹೋಬಳಿ, ಕಾಳತಿಮ್ಮನಹಳ್ಳಿ ಗ್ರಾಮದ ಸರ್ಕಾರಿ ಕೆರೆ ಸರ್ವೆ ನಂ. 25 ರಲ್ಲಿ ಒಟ್ಟು ವಿಸ್ತೀರ್ಣ 18-21 ಎ/ಗುಂಟೆ ಪೈಕಿ 4-00 ಎಕರೆ ಜಮೀನು ಒತ್ತುವರಿಯಾಗಿದ್ದು, ಸದರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು ಹೆಸರಘಟ್ಟ ಹೋಬಳಿ, ಮೈಲಪ್ಪನಹಳ್ಳಿ ಗ್ರಾಮದ ಸರ್ಕಾರಿ ಕರೆ ಸರ್ವೆ ನಂ. 91 ರಲ್ಲಿ ಒಟ್ಟು ವಿಸ್ತೀರ್ಣ 11-26 ಎ/ಗುಂಟೆ ಪೈಕಿ 2-11 ಎಕರೆ ಜಮೀನು ಒತ್ತುವರಿಯಾಗಿದ್ದು ಸದರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿದೆ ಎಂದರು.

ಹೆಸರಘಟ್ಟ ಹೋಬಳಿ, ಮಾದಪ್ಪನಹಲ್ಳಿ ಗ್ರಾಮದ ಸರ್ಕಾರಿ ಕರೆ ಸರ್ವೆ ನಂ. 73 ರಲ್ಲಿ ಒಟ್ಟು ವಿಸ್ತೀರ್ಣ 2-02 ಎ/ಗುಂಟೆ ಪೈಕಿ 0-20 ಎಕರೆ ಜಮೀನು ಒತ್ತುವರಿಯಾಗಿದ್ದು  ಅಂದಾಜು 09-00 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ತಹಶೀಲ್ದಾರ್  ನರಸಿಂಹಮೂರ್ತಿ ಹಾಗೂ ಅವರ ಸಿಬ್ಬಂದಿಯೊಂದಿಗೆ ತೆರವುಗೊಳಿಸಲಾಯಿತು.

ಅದರಂತೆ ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ ಅಗರ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ. 31 ರಲ್ಲಿ ಒಟ್ಟು ವಿಸ್ತೀರ್ಣ 14-34 ಎ/ಗುಂಟೆ ಪೈಕಿ 1-00 ಎಕರೆ ಜಮೀನು ಒತ್ತುವರಿಯಾಗಿದ್ದು, ಸದರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿರುತ್ತದೆ. ಅಗರ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ. 73 ರಲ್ಲಿ ಒಟ್ಟು ವಿಸ್ತೀರ್ಣ 91-28 ಎ/ಗುಂಟೆ ಪೈಕಿ 2-00 ಎಕರೆ ಜಮೀನು ಒತ್ತುವರಿಯಾಗಿದ್ದು  ಜಿಲ್ಲಾಧಿಕಾರಿಗಳ ನಿರ್ದೇಶನದಂತೆ

ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಗಳಾದ ಡಾ|| ಎಂ.ಜಿ.ಶಿವಣ್ಣ, ತಹಶೀಲ್ದಾರ್ ಶಿವಪ್ಪ ಹೆಚ್. ಲಮಾಣಿ , ಹಾಗೂ ಅವರ ಸಿಬ್ಬಂದಿಯೊಡನೆ ಅಂದಾಜು 04-00 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ತೆರವುಗೊಳಿಸಲಾಗಿದೆ.

ಬೆಂಗಳೂರು ಪೂರ್ವ ತಾಲ್ಲೂಕು, ಬಿದರಹಳ್ಳಿ  ಹೋಬಳಿ, ಬೊಮ್ಮೇನಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ. 96 ರಲ್ಲಿ ಒಟ್ಟು ವಿಸ್ತೀರ್ಣ 04-00 ಎ/ಗುಂಟೆ ಪೈಕಿ 04-00 ಎಕರೆ ಜಮೀನು ಒತ್ತುವರಿಯಾಗಿದ್ದು, ಸದರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿರುತ್ತದೆ. ವರ್ತೂರು ಹೋಬಳಿ ಮುಳ್ಳೂರು ಗ್ರಾಮದ ಸರ್ಕಾರಿ ಗುಂಡುತೋಪು ಸರ್ವೆ ನಂ. 30 ರಲ್ಲಿ ಒಟ್ಟು ವಿಸ್ತೀರ್ಣ 1-10 ಎ/ಗುಂಟೆ ಪೈಕಿ 0-20 ಗುಂಟೆ ಜಮೀನು ಒತ್ತುವರಿಯಾಗಿದ್ದು ಸದರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿರುತ್ತದೆ. ವರ್ತೂರು ಹೋಬಳಿ ಮುಳ್ಳೂರು ಗ್ರಾಮದ ಸರ್ಕಾರಿ ಗುಂಡುತೋಪು ಸರ್ವೆ ನಂ. 31 ರಲ್ಲಿ ಒಟ್ಟು ವಿಸ್ತೀರ್ಣ 0-13 ಗುಂಟೆ ಪೈಕಿ 0-02 ಗುಂಟೆ ಜಮೀನು ಒತ್ತುವರಿಯಾಗಿದ್ದು ಸದರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿರುತ್ತದೆ. ವರ್ತೂರು ಹೋಬಳಿ ಗುಂಜೂರು ಗ್ರಾಮದ ಸರ್ಕಾರಿ ಖರಾಬು ಸರ್ವೆ ನಂ. 290 ರಲ್ಲಿ ಒಟ್ಟು ವಿಸ್ತೀರ್ಣ 1-07 ಗುಂಟೆ ಪೈಕಿ 0-07 ಗುಂಟೆ ಜಮೀನು ಒತ್ತುವರಿಯಾಗಿದ್ದು ಅಂದಾಜು 15-00 ಕೋಟಿ ಮೌಲ್ಯದ ಈ ಸರ್ಕಾರಿ ಜಮೀನನ್ನು ತಹಶೀಲ್ದಾರ್, ಅಜಿತ್ ರೈ ಸಾರೋಕೆ ಮತ್ತು ಅವರ ಸಿಬ್ಬಂದಿಯೊಡನೆ  ತೆರವುಗೊಳಿಸಲಾಯಿತು ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next