Advertisement
ಕಲಬುರಗಿ ಜಿಪಂ, ತಾಪಂ ಹಾಗೂ ಖಣದಾಳ ಗ್ರಾಪಂ ಇವುಗಳ ಸಂಯುಕ್ತಾಶ್ರಯದಲ್ಲಿ ಗ್ರಾಮದ ಶಾಲೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಸ್ವೀಪ್ ಆಟ-ನೋಟ 18-18 ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮತದಾನದ ಪ್ರತಿಶತ ಹೆಚ್ಚಿಸಲು ಹಾಗೂ ಮತದಾನ ಕುರಿತು ಜಾಗೃತಿ ಮೂಡಿಸಲು ಸ್ವೀಪ್ ಸಮಿತಿಯಿಂದ ಗ್ರಾಮೀಣ ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳುವುದರ ಮೂಲಕ ಮತದಾನಕ್ಕಾಗಿ ಉತ್ತೇಜಿಸಲಾಗುತ್ತಿದೆ ಎಂದು ಹೇಳಿದರು.
Related Articles
ಸ್ಪರ್ಧೆಗೆ ಮುನ್ನ ಸಿಇಓ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಎಲ್ಲ ಸ್ಪರ್ಧಾಳುಗಳನ್ನು ಪರಿಚಯ ಮಾಡಿಕೊಂಡು ಚುನಾವಣಾ ಗುರುತಿನ ಚೀಟಿ ಇದೆಯೇ? ಊರಿನಲ್ಲಿ ಮತದಾನ ಕೇಂದ್ರ ಎಲ್ಲಿದೆ? ಹೆಸರು ನೋಂದಣಿ ಮಾಡಿಕೊಂಡಿದ್ದಿರಾ ಎಂಬ ಬಗ್ಗೆ ಮಾಹಿತಿ ಪಡೆದರು.
Advertisement
ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಪುರುಷರಿಗೆ ಕಬಡ್ಡಿ ಹಾಗೂ ಮಹಿಳೆಯರಿಗೆ ಕುಂಬಬಿಲ್ಲೆ 18-18 ಸ್ಪರ್ಧೆ ಆಯೋಜಿಸಲಾಗುತ್ತಿದ್ದು, ಇಲ್ಲಿ ವಿಜೇತರಾದವರಿಗೆ ಗ್ರಾಮ, ತಾಲೂಕು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ ಎಂದು ಹೇಳಿದರು.
ಕಲಬುರಗಿ ತಹಶೀಲ್ದಾರ ಅಶೋಕ ಹಿರೋಳ್ಳಿ, ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ, ಉತ್ತರ ವಲಯ ಕ್ಷೇತ್ರಶಿಕ್ಷಣಾಧಿ ಕಾರಿ ಚನ್ನಸಪ್ಪ ಮುಧೋಳ, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಖಾನ್, ಸಿಡಿಪಿಒ ಸಿ.ವಿ. ರಾಮನ, ದೈಹಿಕ ಶಿಕ್ಷಕ ಮುಜಾಮಿಲ್ ಅಲಿ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.