Advertisement
ಹಜ್ ಯಾತ್ರಿಗಳ ಸಾವಿನ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ ಹಜ್ ಯಾತ್ರಿಗಳ ಸಾವುಗಳು ನೈಸರ್ಗಿಕ ಅನಾರೋಗ್ಯ, ನೈಸರ್ಗಿಕ ಕಾರಣ, ದೀರ್ಘಕಾಲದ ಅನಾರೋಗ್ಯ ಮತ್ತು ವೃದ್ಧಾಪ್ಯದ ಕಾರಣದಿಂದಾಗಿ ಸಂಭವಿಸಿವೆ. ಅರಾಫತ್ ದಿನದಂದು, ಆರು ಭಾರತೀಯರು ಸಾವನ್ನಪ್ಪಿದ್ದರು ಮತ್ತು ನಾಲ್ವರು ಭಾರತೀಯರು ಅಪಘಾತಗಳಿಂದ ಸಾವನ್ನಪ್ಪಿದ್ದರು. ಕಳೆದ ವರ್ಷ ಹಜ್ ಯಾತ್ರೆಯಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ 187″ ಎಂದು ವಿವರ ನೀಡಿದರು.
Related Articles
ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾದ ದಿನದಂದು ಕೆನಡಾದ ಸಂಸತ್ತು ಎರಡು ನಿಮಿಷಗಳ ಮೌನ ಆಚರಿಸಿದ ಕುರಿತು ಜೈಸ್ವಾಲ್ ಪ್ರತಿಕ್ರಿಯಿಸಿ “ಉಗ್ರವಾದ ಮತ್ತು ಹಿಂಸಾಚಾರವನ್ನು ಪ್ರತಿಪಾದಿಸುವವರಿಗೆ ರಾಜಕೀಯ ಜಾಗವನ್ನು ನೀಡುವ ಯಾವುದೇ ಕ್ರಮಗಳನ್ನು ನಾವು ಸ್ವಾಭಾವಿಕವಾಗಿ ವಿರೋಧಿಸುತ್ತೇವೆ” ಎಂದರು.
Advertisement
ಎರಡು ಪಟ್ಟು ಮಾತುಕತೆ
ಗಾಲ್ವಾನ್ ಕಣಿವೆಗೆ ಸಂಬಂಧಿಸಿದಂತೆ, ಎರಡು ಪಟ್ಟು ಮಾತುಕತೆ ನಡೆಯುತ್ತಿದೆ ಎಂದು ನಾವು ಮೊದಲೇ ಹೇಳಿದ್ದೇವೆ. ಒಂದು ಮಿಲಿಟರಿಯಿಂದ ಮಿಲಿಟರಿ ಮತ್ತು ಇನ್ನೊಂದು ರಾಜಕೀಯ ಮಟ್ಟದಲ್ಲಿ. ಗಡಿಯಲ್ಲಿ ನಾವು ಶಾಂತಿಯನ್ನು ಬಯಸುತ್ತೇವೆ” ಎಂದರು.
ವೀಸಾ ಅವಧಿ ಮುಗಿದಿದೆದೆಹಲಿ ಮೂಲದ ಫ್ರೆಂಚ್ ಪತ್ರಕರ್ತ ಸೆಬಾಸ್ಟಿಯನ್ ಫಾರ್ಸಿಸ್ ‘ಭಾರತ ತೊರೆಯುವಂತೆ ಬಲವಂತ’ ಮಾಡಲಾಗುತ್ತಿದೆ ಎಂದು ಹೇಳಿರುವ ಕುರಿತು ಜೈಸ್ವಾಲ್ ಪ್ರತಿಕ್ರಿಯಿಸಿ ‘ವೀಸಾ ಅವಧಿ ಮುಗಿದ ಕಾರಣ ದೇಶವನ್ನು ತೊರೆಯಬೇಕಾಗಿದೆ. ಸೆಬಾಸ್ಟಿಯನ್ ಫಾರ್ಸಿಸ್ ಅವರು OCI ಕಾರ್ಡ್ ಹೊಂದಿರುವವರು. ನೀವು OCI ಕಾರ್ಡ್ ಹೊಂದಿರುವವರಾಗಿದ್ದರೆ, ನಿಮ್ಮ ಪತ್ರಿಕೋದ್ಯಮ ಚಟುವಟಿಕೆಗಳನ್ನು ಮುಂದುವರಿಸಲು ನಿಮಗೆ ಅನುಮತಿ ಅಥವಾ ಕೆಲಸದ ಪರವಾನಗಿ ಅಗತ್ಯವಿದೆ ಎಂದರು. ‘ಸೆಬಾಸ್ಟಿಯನ್ ಫಾರ್ಸಿಸ್ ಅವರು ಮೇ 2024 ರಲ್ಲಿ ಅರ್ಜಿ ಸಲ್ಲಿಸಿದ್ದರು, ಅವರ ಅರ್ಜಿಯು ಇನ್ನೂ ಪರಿಗಣನೆಯಲ್ಲಿದೆ. ಅವನು ದೇಶವನ್ನು ತೊರೆಯುವ ಪ್ರಶ್ನೆಯು ಅವರ ನಿರ್ಧಾರವಾಗಿದೆ. ಅವರು ನಿರ್ಧಾರ ತೆಗೆದುಕೊಂಡಿದ್ದರೆ ಅದು ಸರಿ. ಆದರೆ, ಅವರ ಕೆಲಸದ ಪರವಾನಿಗೆ ಅರ್ಜಿ ಇನ್ನೂ ಪರಿಗಣನೆಯಲ್ಲಿದೆ” ಎಂದು ಹೇಳಿದ್ದಾರೆ.